More

    6 ಮಂದಿ ಬಾಲಿವುಡ್​ ಸ್ಟಾರ್​ಗಳ ಎದೆಯಲ್ಲಿ ಢವಢವ; ತಮ್ಮ ಪರ ವಕೀಲರನ್ನು ಕರೆಸಿ ಚರ್ಚೆ

    ಮುಂಬೈ: ಬಾಲಿವುಡ್​ನಲ್ಲೀಗ ಡ್ರಗ್​ ಮಾಫಿಯಾ ಭುಗಿಲೇಳುತ್ತಿದ್ದಂತೆ, ಸ್ಟಾರ್ ಕಲಾವಿದರ ಹೆಸರುಗಳೂ ತಳುಕು ಹಾಕಿಕೊಂಡಿವೆ. ಈಗಾಗಲೇ ರಿಯಾ ಸೇರಿ ಹಲವರು ಬಂಧಿತರಾದರೆ, ಹೊಸದಾಗಿ ದೀಪಿಕಾ ಪಡುಕೋಣೆಯೂ ಈ ಮಾಫಿಯಾದಲ್ಲಿದ್ದಾರೆ ಎಂಬ ಅನುಮಾನ ಮೂಡಿದೆ. ಇದೆಲ್ಲದರ ಬೆನ್ನಲ್ಲೇ ಬಾಲಿವುಡ್​ನ ಸ್ಟಾರ್ ನಟರ ಎದೆಯಲ್ಲೂ ಢವಢವ ಶುರುವಾಗಿದೆ.

    ಇದನ್ನೂ ಓದಿ: ಕುತೂಹಲಭರಿತವಾಗಿದೆ ಅಟ್ಲಿ ಸಿನಿಮಾದಲ್ಲಿ ಶಾರುಖ್​ ನಿಭಾಯಿಸಲಿರುವ ಪಾತ್ರ!

    ದೀಪಿಕಾ ಪಡುಕೋಣೆಗೆ ಡ್ರಗ್​ ಪೂರೈಕೆ ಮಾಡಿದ್ದಾರೆ ಎಂಬುದಕ್ಕೆ ವಾಟ್ಸಾಪ್​ ಚಾಟ್​ ಸಾಕ್ಷ್ಯ ಆಧರಿಸಿ ಅವರ ಮ್ಯಾನೇಜರ್​ ಕರೀಷ್ಮಾ ಪ್ರಕಾಶ್​ಗೆ ಈಗಾಗಲೇ ಎನ್​ಸಿಬಿ ಸಮನ್​ ನೀಡಿ ವಿಚಾರಣೆಗೆ ಹಾಜರಾಗುವಂತೆ ಕೋರಿದೆ. ಈ ಎಲ್ಲ ಘಟನೆಗಳ ಬೆನ್ನಲ್ಲೇ ಬಾಲಿವುಡ್​ನ 6 ಮಂದಿ ಸ್ಟಾರ್ ನಟರು ಇದೀಗ ತಮ್ಮ ಪರ ವಕೀಲರನ್ನು ಕರೆಸಿ ಮುಂದಿನ ಬೆಳವಣಿಗೆಗಳಿಗೆ ಈಗಲೇ ತಯಾರಿ ನಡೆಸಿದ್ದಾರಂತೆ.

    ಇದನ್ನೂ ಓದಿ: ಡಿಸೆಂಬರ್​ 1ಕ್ಕೆ ಕೋರ್ಟ್​ಗೆ ಹಾಜರಾಗಬೇಕಂತೆ ಸಲ್ಮಾನ್​ ಖಾನ್​!

    ಯಾವಾಗ ಏನಾಗುತ್ತೋ ಎಂದು ಬುಡಕ್ಕೆ ಬರುವುದಕ್ಕೂ ಮುನ್ನ ಎಲ್ಲ ರೀತಿಯಲ್ಲಿ ಸಿದ್ಧರಾಗಬೇಕು ಎಂಬ ದೃಷ್ಟಿಯಿಂದ ಈಗಲೇ ವಕೀಲರೊಂದಿಗೆ ಮುಂದಿನ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದ್ದಾರಂತೆ. ಒಂದು ವೇಳೆ ಸಮನ್​ ನೀಡಿದರೆ ಏನು ಮಾಡಬೇಕು? ಏನೆಲ್ಲ ಉತ್ತರ ನೀಡಬೇಕು ಎಂಬುದನ್ನು ವಕೀಲರಿಂದ ಮಾಹಿತಿ ಪಡೆಯುತ್ತಿದ್ದಾರಂತೆ. ಸದ್ಯ ಆ ಆರು ಕಲಾವಿದರು ಯಾರು ಎಂಬುದಕ್ಕೆ ಸದ್ಯಕ್ಕೆ ಮಾಹಿತಿ ಇಲ್ಲ. ಎನ್​ಸಿಬಿ ಸಮನ್​ ನೀಡಿದ ಬಳಿಕವಷ್ಟೇ ಅದು ಗೊತ್ತಾಗಲಿದೆ. (ಏಜೆನ್ಸೀಸ್​)

    VIDEO| ಅಪ್ಪಿತಪ್ಪಿ ನನ್ನ ಮಗ ತಪ್ಪು ಮಾಡಿದ್ರೆ ಶಿಕ್ಷೆ ಅನುಭವಿಸಲಿ; ಲೂಸ್​ ಮಾದನ ತಾಯಿ ಅಂಬುಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts