ರಂಜಾನ್​ಗೂ ಮುನ್ನ ಮದರಸಾದಲ್ಲಿ ಬಾಂಬ್ ಸ್ಫೋಟ; ಐವರು ಮೃತ.. ಆತ್ಮಾಹುತಿ ದಾಳಿ ಶಂಕೆ | Bomb Blast

blank

ಇಸ್ಲಾಮಾಬಾದ್​​: ಪಾಕಿಸ್ತಾನದ ವಾಯುವ್ಯ ಪ್ರಾಂತ್ಯದ ಖೈಬರ್ ಪಖ್ತುಂಖ್ವಾದಲ್ಲಿರುವ ಮದರಸಾದಲ್ಲಿ (ಜಾಮಿಯಾ ಹಕ್ಕಾನಿಯಾ ಮದರಸಾ) ಶುಕ್ರವಾರ(ಫೆಬ್ರವರಿ 28) ಬಾಂಬ್ ಸ್ಫೋಟ(Bomb Blast) ಸಂಭವಿಸಿದೆ. ಈ ಘಟನೆಯಲ್ಲಿ ಐವರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಸ್ಫೋಟದಲ್ಲಿ ಮದರಸಾದ ಮುಖ್ಯಸ್ಥರಿಗೂ ಗಾಯಗಳಾಗಿವೆ. ಈ ಮದರಸಾ ಪ್ರಾಂತ್ಯದ ನೌಶೇರಾ ಪ್ರದೇಶದಲ್ಲಿದೆ.

blank

ಇದನ್ನು ಓದಿ: ಯುಕ್ರೇನಿಯನ್​​​ ಅಧ್ಯಕ್ಷ ಝೆಲೆನ್ಸ್ಕಿಭೇಟಿಯಾಗಲಿರುವ ಟ್ರಂಪ್; ರಷ್ಯಾದೊಂದಿಗಿನ ಯುದ್ಧ ನಿಲ್ಲುತ್ತದೆಯೇ? |Volodymyr Zelensky

ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಮದರಸಾದ ಮುಖ್ಯ ಸಭಾಂಗಣದಲ್ಲಿ ಸ್ಫೋಟ ಸಂಭವಿಸಿದ್ದು, ನಂತರ ಅಧಿಕಾರಿಗಳು ನೌಶೇರಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದರು. ಪ್ರಾಥಮಿಕ ತನಿಖೆಯ ಪ್ರಕಾರ, ಇದು ಆತ್ಮಹತ್ಯಾ ದಾಳಿಯಾಗಿತ್ತು. ಈ ಮದರಸಾವನ್ನು ಸೆಪ್ಟೆಂಬರ್ 1947ರಲ್ಲಿ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಅಬ್ದುಲ್ ಹಕ್ ಹಕ್ಕಾನಿ ಸ್ಥಾಪಿಸಿದರು.

ಈ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ. ಸ್ಫೋಟ ನಡೆದ ಮದರಸಾ ಅಫ್ಘಾನ್ ತಾಲಿಬಾನ್‌ಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಇದರಿಂದಾಗಿ ದಾಳಿಯ ಹಿಂದೆ ಭಯೋತ್ಪಾದಕ ಸಂಘಟನೆಗಳು ಪಿತೂರಿ ನಡೆಸುತ್ತಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಸ್ಲಿಂ ಸಮುದಾಯ ರಂಜಾನ್‌ಗೆ ಸಿದ್ಧತೆ ನಡೆಸುತ್ತಿದ್ದಾಗ ಈ ಬಾಂಬ್ ಸ್ಫೋಟ ಸಂಭವಿಸಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಚಂದ್ರನ ದರ್ಶನವನ್ನು ಅವಲಂಬಿಸಿ ರಂಜಾನ್ ತಿಂಗಳು ಶನಿವಾರ ಅಥವಾ ಭಾನುವಾರದಂದು ಪ್ರಾರಂಭವಾಗಬಹುದು. ಕಳೆದ ತಿಂಗಳು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ರಸ್ತೆಬದಿಯ ಬಾಂಬ್ ಸ್ಫೋಟ ಸಂಭವಿಸಿತ್ತು. ಈ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದರು.(ಏಜೆನ್ಸೀಸ್​​)

ಚಮೋಲಿಯಲ್ಲಿ ಹಿಮಾಘಾತ; ಹಿಮಪಾತದಲ್ಲಿ 50ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಶಂಕೆ | Avalanche Hits Chamoli

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank