ಚಿಕ್ಕಬಳ್ಳಾಪುರದಲ್ಲಿ 5 ಮಂದಿಗೆ ಕರೊನಾ ವೈರಸ್​ ಸೋಂಕು ದೃಢ: ಜಿಲ್ಲಾಧಿಕಾರಿ ಆರ್​.ಲತಾ ಮಾಹಿತಿ

carona
Published on

ಚಿಕ್ಕಬಳ್ಳಾಪುರ: ಮಾರಕ ಕರೊನಾ ವೈರಸ್​ ಸೋಂಕು ರಾಜ್ಯದಲ್ಲಿ ತೀವ್ರವಾಗಿ ಹರಡುತ್ತಿದ್ದು ಗೌರಿಬಿದನೂರು ನಗರದಲ್ಲಿ 5 ಮಂದಿಗೆ ಸೋಂಕು ಹರಡಿರುವುದು ದೃಢಪಟ್ಟಿದೆ.

ಕರೊನಾ ವೈರಸ್​ ಸೋಂಕು ಹರಡಿದ ಲಕ್ಷಣ ಗೋಚರಿಸಿದ 7 ಮಂದಿಯ ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ವರದಿಯಲ್ಲಿ 7 ಮಂದಿಗೂ ಸೋಂಕು ಹರಡಿರುವುದು ಪತ್ತೆಯಾಗಿದೆ. ಅನುಮಾನ ಬಂದ ಹಿನ್ನೆಲೆಯಲ್ಲಿ ಇಬ್ಬರ ಶಂಕಿತರ ರಕ್ತದ ಮಾದರಿ ಸಂಗ್ರಹಿಸಿ ಮತ್ತೊಮ್ಮೆ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್​.ಲತಾ ಮಾಹಿತಿ ನೀಡಿದರು.

ಕರೊನಾ ವೈರಸ್​ ಸೋಂಕಿನಿಂದ ಮೃತಪಟ್ಟ ಮಹಿಳೆಯ ಮಗ, ಆಕೆ ಸೊಸೆ ಹಾಗೂ ಮೊಮ್ಮಗನಿಗೆ ಸೋಂಕು ಹರಡಿದೆ. ಇವರನ್ನು ಪ್ರತ್ಯೇಕಗೊಳಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net