More

    ಚೀನಾವನ್ನೂ ಹಿಂದಿಕ್ಕಿದ ಅಮೆರಿಕ

    ನವದೆಹಲಿ/ವಾಷಿಂಗ್ಟನ್: ವಿಶ್ವದಾದ್ಯಂತ 25 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದು ಐದೂವರೆ ಲಕ್ಷ ಜನರನ್ನು ಆಕ್ರಮಿಸಿಕೊಂಡಿರುವ ಮಾರಕ ಕರೊನಾವೈರಸ್​ನ ಆರ್ಭಟ ಅಮೆರಿಕದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ವಿಶ್ವದಲ್ಲೇ ಅತೀ ಹೆಚ್ಚು ಸೋಂಕಿತರನ್ನು ಹೊಂದಿದೆ. ಈವರೆಗೆ ಒಟ್ಟು 85 ಸಾವಿರ ಸೋಂಕು ಪ್ರಕರಣಗಳು ವರದಿಯಾಗಿದ್ದು, ಚೀನಾದಲ್ಲಿ 81 ಹಾಗೂ ಇಟಲಿಯಲ್ಲಿ 80 ಸಾವಿರ ಪ್ರಕರಣಗಳಿವೆ. ಅಮೆರಿಕದಲ್ಲಿ ಮೃತರ ಸಂಖ್ಯೆ ಕೂಡ 1,300ರ ಗಡಿ ದಾಟಿದ್ದು, ಈ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ಉಂಟಾಗಿದೆ.

    ಕೆಲ ವರದಿಗಳ ಪ್ರಕಾರ, ಕರೊನಾ ಸೋಂಕು ಇದೇ ವೇಗದಲ್ಲಿ ಅಮೆರಿಕದಾದ್ಯಂತ ಪಸರಿಸಿದರೆ ಮುಂದಿನ ನಾಲ್ಕು ತಿಂಗಳಲ್ಲಿ ಚೀನಾವನ್ನೂ ಹಿಂದಿಕ್ಕಿದ ಅಮೆರಿಕಅಮೆರಿಕವೊಂದರಲ್ಲೇ ಸುಮಾರು 80 ಸಾವಿರ ಜನರು ಸಾವನ್ನಪು್ಪವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏಪ್ರಿಲ್ ವೇಳೆಗೆ ಮಹಾಮಾರಿ ಕರೊನಾ ಸಾಂಕ್ರಾಮಿಕವಾಗಿ ಪಸರಿಸಿ ತೀವ್ರ ರೂಪಕ್ಕೆ ತಿರುಗಲಿದ್ದು, ನಂತರ ಅಮೆರಿಕದಲ್ಲಿ ಪ್ರತಿದಿನ ಸುಮಾರು 2,300 ಜನರು ಮೃತರಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಅಂಕಿ ಅಂಶ ಸಾಮಾಜಿಕ ಅಂತರ ಮತ್ತು ಕ್ವಾರಂಟೈನ್ ನಿಯಮಗಳನ್ನು ಅನುಸರಿಸಿದರೂ ಕೂಡ ಇರಲಿದೆ. ಅಮೆರಿಕ ಕರೊನಾದ ಜಾಗತಿಕ ಕೇಂದ್ರಬಿಂದುವಾಗಿ ಹೊರಹೊಮ್ಮಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ. ಅಮೆರಿಕದ 50 ರಾಜ್ಯಗಳ ಪೈಕಿ ಪ್ರಸ್ತುತ 21 ರಾಜ್ಯಗಳಲ್ಲಿ ಸಂಪೂರ್ಣ ಲಾಕ್​ಡೌನ್ ಘೋಷಿಸಲಾಗಿದೆ. ಆದರೆ ಕರೊನಾ ವೈರಸ್ ಈಗಾಗಲೇ ಎಲ್ಲ ರಾಜ್ಯಗಳಿಗೂ ಪಸರಿಸಿದ್ದು, ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯಲ್ಲಿ ಅಧಿಕ ಪ್ರಮಾಣದಲ್ಲಿದೆ. ಹೀಗಾಗಿ ಎಲ್ಲರನ್ನೂ ಕರೊನಾ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಆದರೆ 33 ಕೋಟಿ ಜನಸಂಖ್ಯೆಯಲ್ಲಿ ಅಮೆರಿಕ ಈವರೆಗೆ 5.52 ಲಕ್ಷ ಜನರ ವೈದ್ಯಕೀಯ ತಪಾಸಣೆ ಮಾಡುವಲ್ಲಿ ಯಶಸ್ವಿಯಾಗಿದೆ.

    ಕರೊನಾ ವೈರಸ್ ತಡೆಗಟ್ಟಲು ಹಣಕಾಸು, ವೈಜ್ಞಾನಿಕ, ವೈದ್ಯಕೀಯ, ಔಷಧ ಹಾಗೂ ಮಿಲಿಟರಿ ಸಂಪನ್ಮೂಲ ಸೇರಿ ಎಲ್ಲ ವ್ಯವಸ್ಥೆಗಳನ್ನು ಬಳಸಿಕೊಂಡು ನಮ್ಮ ನಾಗರಿಕರನ್ನು ರಕ್ಷಿಸಲು ಯುದ್ಧ ಮಾಡುತ್ತಿದ್ದೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಪ್ರಸ್ತುತ ಶೇ. 40 ಜನರನ್ನು ಸಂಪೂರ್ಣ ಲಾಕ್​ಡೌನ್​ನಲ್ಲಿಟ್ಟಿದ್ದು, ವೈರಸ್ ಹರಡುವುದನ್ನು ತಡೆಗಟ್ಟಲು ಎಲ್ಲ ರೀತಿ ಕ್ರಮಗಳನ್ನು ಪಾಲಿಸುತ್ತಿದ್ದೇವೆ ಎಂದು ಟ್ರಂಪ್ ತಿಳಿಸಿದ್ದಾರೆ.

    ಆಲ್ಕೋಹಾಲ್ ಕುಡಿದು 300 ಸಾವು

    ಕೈಗಾರಿಕೆಗಳಲ್ಲಿ ಬಳಸುವ ಆಲ್ಕೋಹಾಲ್ ಕುಡಿದರೆ ಕರೊನಾ ತಗಲುವುದಿಲ್ಲ ಎಂಬ ವದಂತಿಗಳನ್ನು ನಂಬಿ ಇರಾನ್​ನಲ್ಲಿ ಸುಮಾರು 300 ಜನರು ಪ್ರಾಣ ಕಳೆದುಕೊಂಡಿದ್ದು, ಸಾವಿರಾರು ಜನರು ವಿವಿಧ ನೂನ್ಯತೆಗಳಿಗೆ ಒಳಗಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ವಿಷಕಾರಿ ಮೆಥನಾಲ್ ಅಂಶವಿರುವ ಆಲ್ಕೋಹಾಲ್ ಕುಡಿಸಿದ್ದರಿಂದ ಪುಟ್ಟ ಮಗುವೊಂದು ದೃಷ್ಟಿಹೀನವಾಗಿದೆ. ಬ್ರಿಟನ್ ಮೂಲದ ಶಿಕ್ಷಕಿಯೊಬ್ಬರು ಆಲ್ಕೋಹಾಲ್ ಮತ್ತು ಜೇನು ಉಪಯೋಗಿಸಿ ತಾನು ಕರೊನಾ ವೈರಸ್ ಸೋಂಕಿನಿಂದ ಗುಣಮುಖಳಾಗಿದ್ದೇನೆ ಎಂದು ಮಾಡಿದ್ದ ವಿಡಿಯೋ ವೈರಲ್ ಆದ ಬಳಿಕ ಜನರೂ ಈ ತಂತ್ರ ಅನುಸರಿಸಿದ್ದಾರೆ ಎನ್ನಲಾಗಿದೆ. ಅದರಲ್ಲೂ ಹ್ಯಾಂಡ್​ಸ್ಯಾನಿಟಜರ್​ಗೆ ಹೆಚ್ಚು ವಿಷಕಾರಿಯಾಗಿರುವ ಹಾಲ್ಕೊಹಾಲನ್ನು ಬಳಸುವುದರಿಂದ ಅದನ್ನು ಕುಡಿದರೆ ತಮ್ಮ ದೇಹ ಸೇರಿದ ಕರೊನಾ ವೈರಸ್ ಕೂಡ ಸಾಯುತ್ತದೆ ಎಂದು ನಂಬಿ ಹಲವರು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಆಸ್ಪತ್ರೆ ಸೇರುವ ಮೊದಲೇ ಸಾವು!

    ಸ್ಪೇನ್​ನಲ್ಲಿ ಇಟಲಿ ಹಾಗೂ ಚೀನಾಗಿಂತ ವೇಗವಾಗಿ ಕರೊನಾ ಆರ್ಭಟ ಹೆಚ್ಚಾಗುತ್ತಿದ್ದು, ಮೃತರ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ಸೋಂಕಿಗೆ ಒಳಗಾದ ಜನರು ಚಿಕಿತ್ಸೆ ಪಡೆದುಕೊಳ್ಳುವ ಮೊದಲೇ ಆಸ್ಪತ್ರೆಯ ದಾಖಲಾತಿ ಸರದಿಯಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಸ್ಪೇನ್​ನ ಎಲ್ಲ ನಗರಗಳ ಆಸ್ಪತ್ರೆಗಳಲ್ಲಿನ ತೀವ್ರ ನಿಗಾ ಘಟಕಗಳು ಕರೊನಾ ರೋಗಿಗಳಿಂದಲೇ ತುಂಬಿ ತುಳುಕುತ್ತಿವೆ. ವರದಿಯೊಂದರ ಪ್ರಕಾರ, ಕರೊನಾ ಸೋಂಕು ತಗುಲಿರುವ ಕಡಿಮೆ ವಯಸ್ಸಿನವರಲ್ಲಿ ಚಿಕಿತ್ಸೆಯಿಂದ ಗುಣಮುಖರಾಗುವ ಸಾಮರ್ಥ್ಯ ಹೆಚ್ಚಿದ್ದು, ವೃದ್ಧರು ಅತೀ ಬೇಗ ಸಾವನ್ನಪು್ಪತ್ತಿದ್ದಾರೆ. ಹೀಗಾಗಿ ವೈದ್ಯರೂ ಕೂಡ ವಿಧಿಯಿಲ್ಲದೇ ಚಿಕಿತ್ಸೆಯಿಂದ ಬದುಕುಳಿಯಬಲ್ಲವರಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸಾವನ್ನಪು್ಪತ್ತಿರುವವರ ಸಂಖ್ಯೆ ಹೆಚ್ಚಳದಿಂದಾಗಿ ಹಲವು ಕಡೆಗಳಲ್ಲಿ ಅಂತ್ಯಕ್ರಿಯೆ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದ್ದು, ಸ್ಕೇಟಿಂಗ್ ಮತ್ತು ಹಾಕಿ ಆಟಗಳಿಗೆ ಬಳಸುವ ಐಸ್ ರಿಂಕ್​ಗಳಲ್ಲಿ ಸಾವಿರಾರು ಮೃತದೇಹಗಳನ್ನು ಸಾಮೂಹಿಕವಾಗಿ ಸಂಗ್ರಹಿಸಿಡಲಾಗುತ್ತಿದೆಯಂತೆ.

    ಕರೊನಾ ಪರಿಸ್ಥಿತಿ ಎದುರಿಸುವ ಸಲುವಾಗಿ ದೇಶದ ಜನತೆಗೆ 1.7 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ನೀಡಿರುವ ಪ್ರಧಾನಿ ಮೋದಿ ನಿರ್ಧಾರವನ್ನು ಸ್ವಾಗತಿಸಿರುವ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ನಿಮ್ಮ ಸರ್ಕಾರ ಮಾನವೀಯ ವ್ಯಕ್ತಿತ್ವ ಹೊಂದಿದೆ ಎಂದು ಪ್ರಶಂಸಿಸಿದ್ದಾರೆ.

    ಟ್ರಕ್​ಗಳಲ್ಲಿ ಅಡಗಿಕೊಂಡು ಪ್ರಯಾಣ

    ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡಿರುವ ವಲಸಿಗ ಕೂಲಿ ಕಾರ್ವಿುಕರು ಮರಳಿ ತಮ್ಮ ಊರುಗಳ ಕಡೆಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಆದರೆ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ಎಷ್ಟೋ ಜನರು ಕಾಲ್ನಡಗಿಯಲ್ಲಿ ಪ್ರಯಾಣಿಸುತ್ತಿದ್ದು, ಈ ನಡುವೆ ಟ್ರಕ್​ಗಳಲ್ಲಿ ಜನರನ್ನು ಸಾಗಿಸುತ್ತಿರುವ ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರ ಪೊಲೀಸರು ತೆಲಂಗಾಣದ ಗಡಿಯ ಚೆಕ್​ಪೋಸ್ಟ್​ನಲ್ಲಿ ಎರಡು ಟ್ರಂಕ್​ಗಳನ್ನು ತಡೆಹಿಡಿದಿದ್ದರು. ಟ್ರಕ್ ಚಾಲಕರು ದಿನಬಳಕೆ ವಸ್ತುಗಳ ಸಾಗಣೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದರು. ಅನುಮಾನಗೊಂಡ ಪೊಲೀಸರು ಟ್ರಕ್​ಗಳನ್ನು ಪರಿಶೀಲಿಸಿದಾಗ ಸುಮಾರು 300 ವಲಸಿಗರು ಟ್ರಕ್​ಗಳಲ್ಲಿ ಅಡಗಿ ಕೂತು ಪ್ರಯಾಣಿಸುತ್ತಿದ್ದದ್ದು ಬೆಳಕಿಗೆ ಬಂದಿದೆ. ಇನ್ನೂ ಕೆಲ ವಲಸಿಗರು ರೈಲು ಬೋಗಿಗಳಲ್ಲೂ ಕದ್ದು ಪ್ರಯಾಣಿಸುತ್ತಿರುವ ಘಟನೆಗಳು ಬೆಳಕಿಗೆ ಬಂದಿವೆ. ದೇಶಾದ್ಯಂತ ಲಾಕ್​ಡೌನ್ ಘೋಷಿಸಿದ್ದರೂ ಕೆಲವಡೆ ಸಿಲುಕಿಕೊಂಡಿರುವ ರೈಲುಗಳನ್ನು ರೈಲ್ವೆ ಇಲಾಖೆ ಬೇರೆ ನಿಲ್ದಾಣಗಳಿಗೆ ಸ್ಥಳಾಂತರಿಸುತ್ತಿದೆ. ಇದೇ ರೀತಿ ತಿರುವನಂತಪುರದಿಂದ ಗೋರಖ್​ಪುರಕ್ಕೆ ತಂದಿದ್ದ ರೈಲೊಂದರಲ್ಲಿ ನೂರಾರು ಜನರು ಅವಿತು ಪ್ರಯಾಣ ಮಾಡಿರುವುದು ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

    ಕರೊನಾ ವೈರಸ್​ ಕಾರಣದಿಂದಾಗಿ ಚೀನಾ ಮೃಗಾಲಯದಲ್ಲಿ 200ಕ್ಕೂ ಹೆಚ್ಚು ಪ್ರಾಣಿಗಳ ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts