ಕರೊನಾ ವೈರಸ್​ ಕಾರಣದಿಂದಾಗಿ ಚೀನಾ ಮೃಗಾಲಯದಲ್ಲಿ 200ಕ್ಕೂ ಹೆಚ್ಚು ಪ್ರಾಣಿಗಳ ಸಾವು

China zoo
Published on

ವುಹಾನ್​: ಕರೊನಾ ವೈರಸ್​ ಸೋಂಕು ತಡೆಗಟ್ಟಲು ಚೀನಾದಲ್ಲಿ ತಿಂಗಳುಗಳ ಕಾಲ ಹೇರಿದ್ದ ಲಾಕ್​ಡೌನ್​ನಿಂದಾಗಿ ಆಹಾರ ಸಿಗದೆ ಹಸಿವಿನಿಂದ ನೂರಾರು ಪ್ರಾಣಿಗಳು ಮೃಗಾಯದಲ್ಲಿ ಸಾವಿಗೀಡಾಗಿವೆ.

ಈ ಬಗ್ಗೆ ಮಾತನಾಡಿರುವ ಚೀನಾದ ಮೃಗಾಲಯದ ಸಿಬಂದಿ, ಲಾಕ್​ಡೌನ್​ನಿಂದಾಗಿ ಪ್ರಾಣಿಗಳ ಯೋಗಕ್ಷೇಮ ವಿಚಾರಿಸಿಕೊಳ್ಳಲು ಮಾಲೀಕರು ಸಾಕಷ್ಟು ಪರದಾಡಿದರು ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಇತ್ತೀಚಿನ ವಿಡಿಯೋವೊಂದರಲ್ಲಿ ಆರ್ಕ್ಟಿಕ್ ನರಿಗಳು ಹಸಿವಿನಿಂದ ಸಾವೀಗೀಡಾಗಿದ್ದ ಅಲ್ಪಕಾ ಮೃತದೇಹವನ್ನು ತಿಂದು ಹಸಿವು ನೀಗಿಸಿಕೊಂಡಿದೆ. ಈ ಘಟನೆ ಕೇಂದ್ರ ಚೀನಾದ ಹುನಾನ್​ ಪ್ರಾಂತ್ಯದ ಛಾಂಗ್ಸಾ ಜೂನಲ್ಲಿ ನಡೆದಿದೆ.

ಮೊಲಗಳು, ಅಳಿಲು ಮತ್ತು ಗಿನಿಯಾ ಹಂದಿಗಳು ಸೇರಿದಂತೆ ಸುಮಾರು 200ಕ್ಕೂ ಅಧಿಕ ಪ್ರಾಣಿಗಳು ಮೃಗಾಲಯದಲ್ಲೇ ಸಿಲುಕಿಕೊಂಡಿದ್ದವು. ಆದರೆ, ಲಾಕ್​ಡೌನ್​ನಿಂದ ಆಹಾರ ಪೂರೈಕೆಯಾಗದೇ ಸಾವಿಗೀಡಾಗಿವೆ. ಅವುಗಳ ಮೃತದೇಹಗಳು ಹಾಗೇ ಇವೆ ಎಂದು ಜೂ ಸಿಬ್ಬಂದಿ ತಿಳಿಸಿದ್ದಾರೆ.

ಪ್ರಾಣಿಗಳನ್ನು ಉಳಿಸಿಕೊಳ್ಳಲು ಜೂ ಸಿಬ್ಬಂದಿ ತಮ್ಮ ಸ್ವಂತ ಹಣದಿಂದಲೇ ಆಹಾರವನ್ನು ಪೂರೈಸಿದಾದರೂ ಅನೇಕ ಪ್ರಾಣಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇನ್ನು ಸಿಬ್ಬಂದಿಗೂ ಸಹ ಡಿಸೆಂಬರ್​ನಿಂದ ಯಾವುದೇ ಸಂಬಳ ಕೂಡ ದೊರೆತಿಲ್ಲ. ಒಟ್ಟಾರೆ ಲಾಕ್​ಡೌನ್​ ಚೀನಾ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿದ್ದು, ವಿಶ್ವದಲ್ಲೆಡೆ ಇದೇ ಪರಿಸ್ಥಿತಿ ಮುಂದುವರಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net