

ಮೊಹಾಲಿ: ಬೆಳಗಿನ ಉಪಹಾರ ಸೇವಿಸಿ 48 ತರಬೇತಿ ನಿರತ ಕ್ರೀಡಾಪಟುಗಳು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಂಜಾಬ್ನ ಮೊಹಾಲಿಯಲ್ಲಿ ನಡೆದಿದೆ.
ಪಂಜಾಬ್ ಸ್ಟೇಟ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ನಲ್ಲಿ ಈ ಘಟನೆ ನಡೆದಿದ್ದು, ಪ್ರಶಿಕ್ಷಣಾರ್ಥಿ ಕ್ರೀಡಾಪಟುಗಳು ಎಂದಿನಂತೆ ಬೆಳಿಗ್ಗೆ ಎದ್ದು ಆಹಾರವನ್ನು ಸೇವಿಸಿ ಬಳಿಕ ಅಸ್ವಸ್ಥರಾಗಿದ್ದಾರೆ. ಕೂಡಲೇ 48 ಪ್ರಶಿಕ್ಷಣಾರ್ಥಿಗಳನ್ನು ಸಮೀಪದ ಸಿವಿಲ್ ಹಾಸ್ಪಿಟಲ್ಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಯುವಕನ ತಲೆ ಬೋಳಿಸಿ, ಹಣ ದೋಚಿ ಆತನ ಮೇಲೆ ಮೂತ್ರ ವಿಸರ್ಜಿಸಿದ ತೃತಿಯಲಿಂಗಿಗಳು..
ಈ ನಡುವೆ ಕೆಲವು ಪ್ರಶಿಕ್ಷಣಾರ್ಥಿಗಳು ಕಾರ್ಮಿಕರು ಬೇಯಿಸಿದ ಆಹಾರ ಪದಾರ್ಥಗಳನ್ನು ತರಾತುರಿಯಲ್ಲಿ ಹಾಕಿ ಅಡುಗೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಬೆಳಗ್ಗೆ ಪ್ರಶಿಕ್ಷಣಾರ್ಥಿಗಳ ಬ್ಯಾಚ್ಗೆ ಬಡಿಸಿದ ಗಂಜಿಯಲ್ಲಿ ಸತ್ತ ಹಲ್ಲಿ ಪತ್ತೆಯಾಗಿದ್ದು, ಮಗುವೊಂದು ಆಹಾರದಲ್ಲಿ ಅದನ್ನು ನೋಡಿದೆ. ನಂತರ ಮಕ್ಕಳು ಗಾಬರಿಗೊಂಡು ವಾಂತಿ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ.
ಈ ಕುರಿತು ರಾಜ್ಯ ಕ್ರೀಡಾ ಸಚಿವ ಗುರ್ಮೀತ್ ಸಿಂಗ್ ಮೀತ್ ಹೇಯರ್ ಈ ಬಗ್ಗೆ ತನಿಖೆಗೆ ಆದೇಶಿಸಿದ್ದು, ಆಟಗಾರರ ಆರೋಗ್ಯದ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ, ಆಟಗಾರರ ಆರೋಗ್ಯ ಮತ್ತು ಸುರಕ್ಷತೆಗೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ ಎಂದು ಸಚಿವರು ಹೇಳಿದರು. ಈ ಪ್ರಕರಣದಲ್ಲಿ ಲೋಪ ಬಯಲಾದರೆ ಆರೋಪಿಗಳನ್ನು ಬಿಡುವುದಿಲ್ಲ ಎಂದಿದ್ದಾರೆ.(ಏಜೆನ್ಸೀಸ್)