42,766 ಹೊಸ ಕರೊನಾ ಪ್ರಕರಣ; ಕೇರಳದಲ್ಲಿ ಅತಿ ಹೆಚ್ಚು

Corona
Published on

ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 42,766 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಈವರೆಗಿನ ಒಟ್ಟು ಕರೊನಾ ಪ್ರಕರಣ ಸಂಖ್ಯೆ 3,07,95,716 ಕ್ಕೆ ತಲುಪಿದೆ.

ಕೇರಳದಲ್ಲಿ 13,563 ಹೊಸ ಪ್ರಕರಣಗಳು ದಾಖಲಾಗಿದ್ದು, ದೇಶಾದ್ಯಂತದ ಅತಿ ಹೆಚ್ಚು ನಿತ್ಯ ಪ್ರಕರಣಗಳು ಈ ರಾಜ್ಯದಲ್ಲಿ ಕಂಡುಬಂದಿವೆ. ಮಹಾರಾಷ್ಟ್ರದಲ್ಲಿ 8,992, ತಮಿಳುನಾಡಿನಲ್ಲಿ 3,039 ಮತ್ತು ಕರ್ನಾಟಕದಲ್ಲಿ 2,290 ಹೊಸ ಪ್ರಕರಣಗಳು ವರದಿಯಾಗಿವೆ.

ಪಾಸಿಟಿವಿಟಿ ರೇಟ್​ ಶೇ. 2.19 ರಷ್ಟಿದ್ದು, ಕಳೆದ 19 ದಿನಗಳಿಂದ ಈ ದರವು ಶೇ. 3 ಕ್ಕಿಂತ ಕಡಿಮೆಯೇ ಇದೆ. ಸೋಂಕಿನಿಂದ ಚೇತರಿಕೆಯ ದರವು ಶೇ. 97.20 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 1,206 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net