ಸಿನಿಮಾ

ಹುಡುಗಿಯರ ಹಾಸ್ಟೆಲ್​ ಮುಂದೆ ಟಾರ್ಚ್ ಆನ್​ ಮಾಡಿ ಬೆತ್ತಲೆ ಓಡಾಟ: ಆರೋಪಿ ಬಂಧನ

ತಲಸ್ಸೆರಿ: ಬಾಲಕಿಯರ ಹಾಸ್ಟೆಲ್ ಮುಂದೆ ಟಾರ್ಚ್​ ಲೈಟ್​ ಆನ್​ ಮಾಡಿ ಅಶ್ಲೀಲವಾಗಿ ವರ್ತಿಸುತ್ತಿದ್ದ 42 ವರ್ಷದ ವ್ಯಕ್ತಿಯನ್ನು​ ಕೇರಳ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಪುನ್ನೋಲ್​ ನಿವಾಸಿ ಶಾಜಿ ವಿಲಿಯಮ್ಸ್​ ಎಂದು ಗುರುತಿಸಲಾಗಿದೆ. ತಲಸ್ಸೆರಿಯ ಸಾಯಿ ಸೆಂಟರ್​ನ ಸ್ಟೇಡಿಯಂ ಬಳಿ ಇರುವ ಬಾಲಕಿಯ ಹಾಸ್ಟೆಲ್​ಗೆ ಟಾರ್ಚ್​ ಲೈಟ್​ ಬಿಡುತ್ತಿದ್ದಲ್ಲದೆ, ಅವರ ಮುಂದೆ ಬೆತ್ತಲೆಯಾಗಿ ಓಡಾಡಿದ್ದಾನೆ. ಬಾಲಕಿಯರ ಎದುರು ನಿಂತು ತನ್ನ ಖಾಸಗಿ ಅಂಗವನ್ನು ಪ್ರದರ್ಶನ ಮಾಡಿದ್ದಾನೆ.

ಇದನ್ನೂ ಓದಿ: ಕಾಂಗ್ರೆಸ್​ ಸರ್ಕಾರದಲ್ಲಿ ಸಿಎಂ ಸೈಲೆಂಟ್​, ಡಿಸಿಎಂ ವೈಲೆಂಟ್:​ ಆರ್​. ಅಶೋಕ್​ ವಾಗ್ದಾಳಿ

ಸದ್ಯಕ್ಕೆ ಆರೋಪಿಯನ್ನು ಬಂಧಿಸಲಾಗಿದ್ದು, ಕೋರ್ಟ್​ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ಆರೋಪಿ ವಿರುದ್ಧ ಪೊಲೀಸರು ಪೊಕ್ಸೊ ಕಾಯ್ದೆಯ ವಿವಿಧ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಘಟನೆ ಮೇ 21ರಂದು ನಡೆದಿದೆ. ದೂರಿನ ಪ್ರಕಾರ ಬಹಳ ಹಿಂದಿನಿಂದಲೂ ಆರೋಪಿ ಬಾಲಕಿಯರಿಗೆ ಕಿರುಕುಳ ನೀಡುತ್ತಾ ಬರುತ್ತಿರುವುದು ತಿಳಿದುಬಂದಿದೆ. ಪೊಲೀಸರ ಗಮನಕ್ಕೆ ಬಂದಾಗ ಹಾಸ್ಟೆಲ್​ ಬಳಿ ಪೊಲೀಸರು ಕಣ್ಗಾವಲಿನಲ್ಲಿ ಇದ್ದರು. (ಏಜೆನ್ಸೀಸ್​)

ನಿಮ್ಮ ಕಣ್ಣಿಗೊಂದು ಸವಾಲ್​: ಜೀನಿಯಸ್​ ಮಾತ್ರ ಫೋಟೋದಲ್ಲಿರುವ ಚಿರತೆ ಪತ್ತೆಹಚ್ಚಬಲ್ಲರು!

ಅಮೆರಿಕದಲ್ಲಿ ಗಂಡ, ಇಂಡಿಯಾದಲ್ಲಿ ಪತ್ನಿ ಸಾವು: ವಿಧಿಯಾಟಕ್ಕೆ ದಂಪತಿ ಬದುಕು ದುರಂತ ಅಂತ್ಯ

ಗೋಮಾಂಸಯುಕ್ತ ಸಮೋಸಾ ಮಾರುತ್ತಿದ್ದ ವ್ಯಕ್ತಿ ಅರೆಸ್ಟ್​​

Latest Posts

ಲೈಫ್‌ಸ್ಟೈಲ್