'ಪುಷ್ಪ 2' ಚಿತ್ರಕ್ಕೆ 40 ಕೋಟಿ ರೂ. ನಷ್ಟ! ಹೀಗಿದೆ ವರದಿ

Untitled design - 2024-06-21T195544.801
Published on

ಆಂಧ್ರಪ್ರದೇಶ: ರಾಷ್ಟ್ರಪ್ರಶಸ್ತಿ ವಿಜೇತ, ಟಾಲಿವುಡ್​ನ ಐಕಾನ್​ ಸ್ಟಾರ್​, ನಟ ಅಲ್ಲು ಅರ್ಜುನ್ ಮತ್ತು ನಟಿ ರಶ್ಮಿಕಾ ಮಂದಣ್ಣ ಅಭಿನಯದ ಬಹುನಿರೀಕ್ಷಿತ ಪ್ಯಾನ್​ ಇಂಡಿಯಾ ‘ಪುಷ್ಪ 2’ ರಿಲೀಸ್​ ಬಗ್ಗೆ ಇದೀಗ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಹೆಚ್ಚಿದ್ದು, ಚಿತ್ರವು ಇದೇ ಆಗಸ್ಟ್​ 15ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಲಾಗಿತ್ತು. ಆದ್ರೆ, ಇದೀಗ ಸಿನಿಮಾದ ಬಿಡುಗಡೆ ದಿನಾಂಕದಲ್ಲಿ ಬದಲಾವಣೆ ಕಂಡುಬಂದಿದ್ದು, ಡಿಸೆಂಬರ್​ 06, 2024ರಂದು ತೆರೆಕಾಣಲಿದೆ ಎಂದು ಹೇಳಲಾಗಿದೆ.

ಇದಕ್ಕೆ ಕಾರಣ ಸಿನಿಮಾದ ಹಲವು ಕೆಲಸಗಳು ಇನ್ನೂ ಬಾಕಿ ಉಳಿದಿದ್ದು, ಅದನ್ನು ಅಂತ್ಯಗೊಳಿಸಲು ಮತ್ತಷ್ಟು ಸಮಯದ ಅಗತ್ಯವಿದೆ. ಆರಂಭದಲ್ಲಿ ಅಲ್ಲು ಅರ್ಜುನ್ ಅನಾರೋಗ್ಯ ಸಮಸ್ಯೆ, ನಿರ್ದೇಶಕ ಸುಕುಮಾರ್ ಕೆಲವು ಭಾಗಗಳನ್ನು ಮರುಚಿತ್ರೀಕರಣ ಮಾಡುವ ನಿರ್ಧಾರ ಹಾಗೂ ನಟ ಫಹಾದ್ ಫಾಸಿಲ್ ಅವರ ಶೂಟಿಂಗ್​ ಡೇಟ್ಸ್​ ಈ ವಿಳಂಬಕ್ಕೆ ಮುಖ್ಯ ಕಾರಣವೆಂದು ಹೇಳಲಾಗಿದೆ.

ಇತ್ತೀಚೆಗೆ ಫಹದ್ 'ಪುಷ್ಪ 2' ಚಿತ್ರಕ್ಕಾಗಿ ಹೊಸ ದಿನಾಂಕಗಳನ್ನು ನಿಗದಿಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ನಟನ ಪಾತ್ರದ ಭಾಗಗಳನ್ನು ಚಿತ್ರೀಕರಿಸಲು ಹೆಚ್ಚು ಸಮಯದ ಅಗತ್ಯದ ಹಿನ್ನೆಲೆ ಇದೀಗ ಪ್ಯಾನ್ ಇಂಡಿಯಾ ಚಿತ್ರದ ಬಿಡುಗಡೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಲಾಗಿದೆ. ವರದಿಗಳ ಪ್ರಕಾರ, ಕೆಲವು ಭಾಗಗಳ ಮರುಚಿತ್ರೀಕರಣದಿಂದ ನಿರ್ಮಾಪಕರಿಗೆ ಸುಮಾರು 40 ಕೋಟಿ ರೂ.ಗೂ ಹೆಚ್ಚು ನಷ್ಟ ಉಂಟಾಗಲಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net