ಭಾರಿ ಮಳೆಗೆ ತತ್ತರಿಸಿದ ಉತ್ತರಾಖಂಡ; ಭೂ ಕುಸಿತದಿಂದಾಗಿ ನಾಲ್ಕು ತಿಂಗಳ ಶಿಶು ಸೇರಿ ಮೂವರ ಮೃತ್ಯು

Uttarakhand Landslide
ಸಾಂದರ್ಭಿಕ ಚಿತ್ರ
Published on

ಉತ್ತರಾಖಂಡ: ಕಳೆದ ಕೆಲ ದಿನಗಳಿಂದ ಉತ್ತರ ಭಾರತದ ಹಲವು ಕಡೆ ವರುಣನ ಆರ್ಭಟ ಹೆಚ್ಚಾಗುತ್ತಿದ್ದು, ಮಳೆಯಿಂದ ಉತ್ತರಾಖಂಢ ತತ್ತರಿಸಿ ಹೋಗಿದೆ. ಮಳೆಯಿಂದಾಗಿ ಸಂಭವಿಸಿದ ಭೂ ಕುಸಿತದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ಕು ತಿಂಗಳ ಹಸುಗೂಸು ಮೃತಪಟ್ಟಿದೆ.

ಘಟನೆಯೂ ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ನಡೆದಿದ್ದು, ಮೂವರ ಮೃತದೇಹಗಳು ಅವಶೇಷಗಳಡಿ ಸಿಲುಕಿದ್ದ ಕಾರೊಂದರಲ್ಲಿ ಪತ್ತೆಯಾಗಿತ್ತು ಎಂದು ರಕ್ಷಣಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Uttarakhand Landslide

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ತೆಹ್ರಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನವನೀತ್​ ಸಿಂಗ್​ ಭುಲ್ಲರ್​ ಭಾನುವಾರ ಹಾಗೂ ಸೋಮವಾರ ನಿರಂತರವಾಗಿ ಮಳೆಯಾದ ಪರಿಣಾಮ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದೆ. ಚಂಬಾ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿರುವ ಟ್ಯಾಕ್ಸಿ ಸ್ಟ್ಯಾಂಡ್​ನಲ್ಲಿ ದುರ್ಘಟನೆ ಸಂಭವಿಸಿದ್ದು, ಅವಶೇಷಗಳಡಿ ಮತ್ತಷ್ಟು ಜನರು ಸಿಲುಕಿರುವ ಬಗ್ಗೆ ಮಾಹಿತಿ ದೊರೆತಿದೆ.

ಪೂನಂ ಖಂಡೂರಿ, ಸರಸ್ವತಿ ದೇವಿ ಹಾಗು ನಾಲ್ಕು ತಿಂಗಳ ಗಂಡು ಮಗು ಭೂಕುಸಿತದಲ್ಲಿ ಮೃತಪಟ್ಟಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ತಂಡ(SDRF)ದಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. ಭೂಕುಸಿತ ಉಂಟಾಗಿರುವುದರಿಂದ ತೆಹ್ರಿ ಹಾಗೂ ಚಂಬಾ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ನವೀನ್​ ಸಿಂಗ್​​ ಭುಲ್ಲಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net