ಬಿರುಗಾಳಿಗೆ ದೋಣಿ ಮುಳುಗಿ ಇಬ್ಬರು ಮಕ್ಕಳು ಸೇರಿ ಮೂವರು ಮೃತ್ಯು!

assam
Published on

ದಿಸ್ಪುರ: ಭಾರೀ ಮಳೆ ಮತ್ತು ಬಿರುಗಾಳಿಯಿಂದಾಗಿ ಭಾನುವಾರ ರಾತ್ರಿ ಬ್ರಹ್ಮಪುತ್ರ ನದಿಯಲ್ಲಿ ದೋಣಿ ಮಗುಚಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ‌ ಮುಳುಗಿದ ದೋಣಿಯಿಂದ ಸುಮಾರು 20 ಜನರನ್ನು ರಕ್ಷಿಸಲಾಗಿದೆ.

ಅಸ್ಸಾಂನ ದಕ್ಷಿಣ-ಸಲ್ಮಾರಾ ಮಂಕಾಚಾರ್ ಜಿಲ್ಲೆಯ ಮೂಲಕ ನದಿಯಲ್ಲಿ ದೋಣಿ ಹಾದುಹೋಗುವಾಗ ಈ ಘಟನೆ ನಡೆದಿದೆ.

ಕಾಳಿ ಅಲ್ಗಾ ಘಾಟ್ ನಿಂದ ನೇಪುರ್ ಅಲ್ಗಾ ಚರಾಂಚಲ್ ಗೆ ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡ ಪ್ರಯಾಣಿಕರನ್ನು ದೋಣಿ ಕರೆದೊಯ್ಯುತ್ತಿತ್ತು. ಬ್ರಹ್ಮಪುತ್ರ ನದಿ ನೀರಿನ ಅಬ್ಬರ ಮತ್ತು ಬಿರುಗಾಳಿಗೆ ದೋಣಿ ಮಗುಚಿದೆ.

ಸ್ಥಳೀಯ ಮೀನುಗಾರರು ಮತ್ತು ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪ್ರಯಾಣಿಕರನ್ನು ರಕ್ಷಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಆರೆಂಜ್ ಅಲರ್ಟ್ ಘೋಷಿಸಿದ್ದು, ಅಸ್ಸಾಂನಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದೆ. ಅಸ್ಸಾಂ ಮೇಲೆ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿಲೋಮೀಟರ್ ಎತ್ತರದಲ್ಲಿ ಚಂಡಮಾರುತದ ಪರಿಚಲನೆ ಇದೆ ಎಂದು ಗುವಾಹಟಿಯ ಐಎಂಡಿಯ ಪ್ರಾದೇಶಿಕ ಹವಾಮಾನ ಕೇಂದ್ರ ವಿಶೇಷ ಬುಲೆಟಿನ್‌ನಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net