

ನವದೆಹಲಿ : ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 39,097 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಇದು ನಿನ್ನೆಗಿಂತ ಶೇ.10.6 ರಷ್ಟು ಅಧಿಕವಾಗಿದೆ ಎಂದು ಇಂದು ಬೆಳಗಿನ ವರದಿ ಹೇಳಿದೆ. ಮತ್ತೆ 546 ಜನರು ಕರೊನಾಕ್ಕೆ ಬಲಿಯಾಗಿದ್ದು, ಈವರೆಗಿನ ಒಟ್ಟು ಸಾವಿನ ಸಂಖ್ಯೆ 4.20 ಲಕ್ಷ ತಲುಪಿದೆ.
ದೇಶದಲ್ಲಿ ನಿತ್ಯದ ಕರೊನಾ ಪಾಸಿಟಿವಿಟಿ ದರವು ಶೇ. 2.40 ರಷ್ಟಿದೆ. ಕಳೆದ 33 ದಿನಗಳಿಂದ ಈ ದರವು ಶೇ. 3 ಕ್ಕಿಂತ ಕೆಳಗಿಳಿದಿದೆ.
ಕಳೆದ 24 ಗಂಟೆಗಳಲ್ಲಿ, ಕೇರಳದಲ್ಲಿ ಅತಿ ಹೆಚ್ಚು - ಅಂದರೆ 17,518 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. 132 ಸಾವುಗಳು ಸಂಭವಿಸಿವೆ. ಮಹಾರಾಷ್ಟ್ರದಲ್ಲಿ 6,753 ಹೊಸ ಪ್ರಕರಣಗಳು ಮತ್ತು 167 ಕರೊನಾ ಸಾವುಗಳು ಸಂಭವಿಸಿವೆ. ಒಡಿಶಾದಲ್ಲಿ 1,917, ತಮಿಳುನಾಡಿನಲ್ಲಿ 1,830 ಮತ್ತು ಆಂಧ್ರ ಪ್ರದೇಶದಲ್ಲಿ 1,747 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)