More

    ಅಯೋಧ್ಯೆ ರಾಮಮಂದಿರ ಅರ್ಚಕರ ಹುದ್ದೆಗೆ 3 ಸಾವಿರ ಅರ್ಜಿ; ಆಯ್ಕೆಯಾಗುವ ಅಭ್ಯರ್ಥಿಗಳ ಸಂಖ್ಯೆ ಎಷ್ಟು ಗೊತ್ತಾ?

    ನವದೆಹಲಿ: ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕಾಮಗಾರಿ ಅಂತಿಮ ಹಂತಕ್ಕೆ‌ ತಲುಪುತ್ತಿದೆ. ಜನವರಿ 22ರಂದು ರಾಮಮಂದಿರ ಉದ್ಘಾಟನೆ ದಿನಾಂಕ ನಿಗದಿಯಾಗಿದೆ. ಶ್ರೀರಾಮಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನಲ್ಲಿ ಖಾಲಿ ಇರುವ ಅಯೋಧ್ಯೆಯ ರಾಮಮಂದಿರದ ಅರ್ಚಕರ ಹುದ್ದೆಗಳಿಗೆ ಕನಿಷ್ಠ 3,000 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ.

    ಟ್ರಸ್ಟ್  ಅಧಿಕಾರಿಗಳು ಮಾತನಾಡಿ, ಅಯೋಧ್ಯೆ ರಾಮಮಂದಿರ ಅರ್ಚಕರ ಹುದ್ದೆಗೆ 3,000 ಅಭ್ಯರ್ಥಿಗಳ ಅರ್ಜಿಗಳು ಬಂದಿವೆ. ಈ ಪೈಕಿ 200 ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಸಂದರ್ಶನಕ್ಕೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ 200 ಅಭ್ಯರ್ಥಿಗಳು ಅಯೋಧ್ಯೆಯಲ್ಲಿರುವ ವಿಶ್ವ ಹಿಂದೂ ಪರಿಷತ್‌ನ ಪ್ರಧಾನ ಕಛೇರಿಯಾದ ಕರಸೇವಕ ಪುರಂನಲ್ಲಿ ಸಂದರ್ಶನ ಮಾಡಲಾಗುತ್ತದೆ ಎಂದಿದ್ದಾರೆ.

    ವೃಂದಾವನದ ಹಿಂದೂ ಧರ್ಮ ಪ್ರಚಾರಕ ಜಯಕಾಂತ್ ಮಿಶ್ರಾ ಅವರ ಮೂರು ಸದಸ್ಯರ ಸಮಿತಿ ಮತ್ತು ಅಯೋಧ್ಯೆಯ ಇಬ್ಬರು ಮಹಂತರಾದ ಮಿಥಿಲೇಶ್ ನಂದಿನಿ ಶರಣ್ ಮತ್ತು ಸತ್ಯನಾರಾಯಣ ದಾಸ್ ಅವರು ಸಂದರ್ಶನಗಳನ್ನು ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

    ಟ್ರಸ್ಟ್ 20 ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತದೆ. ಆಯ್ಕೆಯಾದ ಅಭ್ಯರ್ಥಿಗಳನ್ನು ಅರ್ಚಕರಾಗಿ ನೇಮಿಸಲಾಗುತ್ತದೆ ಮತ್ತು ಆರು ತಿಂಗಳ ವಸತಿ ತರಬೇತಿಯ ನಂತರ ವಿವಿಧ ಹುದ್ದೆಗಳಲ್ಲಿ ನಿಯೋಜಿಸಲಾಗುವುದು. ಆಯ್ಕೆಯಾಗದವರಿಗೆ ತರಬೇತಿಗೆ ಹಾಜರಾಗಿ ಪ್ರಮಾಣ ಪತ್ರ ನೀಡಲಾಗುವುದು. ಭವಿಷ್ಯದಲ್ಲಿ ರಚಿಸಬಹುದಾದ ಅರ್ಚಕ ಹುದ್ದೆಗಳಿಗೂ ಅವರನ್ನು ಕರೆಯುವ ಅವಕಾಶವಿದೆ.

    ಹಠಾತ್ ಸಾವುಗಳಿಗೆ ಕೋವಿಡ್ ಲಸಿಕೆ ಕಾರಣವೇ? ICMR ಅಧ್ಯಯನ ವರದಿ…

    ರಾಜ್ಯೋತ್ಸವ ರಸಪ್ರಶ್ನೆ - 20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts