More

    ಹಠಾತ್ ಸಾವುಗಳಿಗೆ ಕೋವಿಡ್ ಲಸಿಕೆ ಕಾರಣವೇ? ICMR ಅಧ್ಯಯನ ವರದಿ…

    ನವದೆಹಲಿ: ಕೊರೊನಾ ಮಹಾಮಾರಿ ಇಡೀ ಜಗತ್ತನ್ನು ಎಷ್ಟು ಬಾಧಿಸಿದೆ ಎಂದು ಹೇಳಬೇಕಾಗಿಲ್ಲ. ಕೊರೊನಾ ಎಲ್ಲ ಕ್ಷೇತ್ರಗಳಲ್ಲೂ ನಷ್ಟ ಉಂಟು ಮಾಡಿದೆ. ಅಲ್ಲದೆ ಕೊರೊನಾದಿಂದ ಲಕ್ಷಾಂತರ ಜನ ಸಾವನ್ನಪ್ಪಿದ್ದಾರೆ. ಕೊರೊನಾ ಸಾಂಕ್ರಾಮಿಕವು ಆರೋಗ್ಯದ ಮೇಲೆ ತೀವ್ರ ನಕಾರಾತ್ಮಕ ಪರಿಣಾಮಗಳನ್ನು ಬೀರಿದೆ.

    ಕೋವಿಡ್ -19 ಲಸಿಕೆ ಲಭ್ಯವಾದ ನಂತರ, ವೈರಸ್ ಹರಡುವಿಕೆಯು ಕ್ರಮೇಣ ಕಡಿಮೆಯಾಯಿತು. ಆದರೆ ಇತ್ತೀಚೆಗೆ ಭಾರತದಲ್ಲಿ ಕೆಲವು ಹಠಾತ್ ಸಾವುಗಳು ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿವೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಯುವಜನರು  ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಈ ಸಂಗತಿ ತಜ್ಞರನ್ನು ಆತಂಕಕ್ಕೆ ದೂಡಿದೆ. ಕೆಲವರು ಈ ಹಠಾತ್ ಸಾವುಗಳು ಕೋವಿಡ್ 19 ವ್ಯಾಕ್ಸಿನೇಷನ್ ಕಾರಣ ಎಂದು ಹರಡಲು ಪ್ರಾರಂಭಿಸಿದ್ದಾರೆ. ಆದರೆ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಅಧ್ಯಯನ ಸಂಶೋಧನೆ ನಡೆಸಿ  ಈ ಕುರಿತಾಗಿ ಇರುವ ಗೊಂದಲಗಳಿಗೆ ಸ್ಪಷ್ಟನೆ ನೀಡಿದೆ.

    ಆದರೆ ಈ ಸುದ್ದಿಯಲ್ಲಿ ಎಷ್ಟು ಸತ್ಯವಿದೆ ಎಂಬ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ನಡೆಸಿದೆ. ಈ ಅಧ್ಯಾಯದಲ್ಲಿ, ಯುವಕರಲ್ಲಿ ಹಠಾತ್ ಸಾವು ಮತ್ತು ಕೋವಿಡ್ 19 ವ್ಯಾಕ್ಸಿನೇಷನ್ ನಡುವೆ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗಪಡಿಸಲಾಯಿತು. ಕುಟುಂಬದ ಇತಿಹಾಸ ಹಾಗೂ ಹಠಾತ್ ಸಾವಿಗೆ ಜನರ ಜೀವನ ಶೈಲಿಯಲ್ಲಿನ ಬದಲಾವಣೆಯೇ ಇದಕ್ಕೆ ಕಾರಣವಾಗಿದೆ ಎಂದು ಐಸಿಎಂಆರ್‌ನ ಅಧ್ಯಯನ ವರದಿ ಒತ್ತಿ ಹೇಳಿದೆ.

    ಈ ಅಧ್ಯಯನವು 2021 ಅಕ್ಟೋಬರ್ 1ರಿಂದ  2023 ಮಾರ್ಚ್​ 31ರವರೆಗೆ ದೇಶದ 47 ಆಸ್ಪತ್ರೆಗಳ ಮೇಲೆ ಕೇಂದ್ರೀಕರಿಸಿದೆ. ಜತೆಗೆ ಈ ಅಧ್ಯಯನವು 18 ರಿಂದ 45 ವರ್ಷ ವಯಸ್ಸಿನ ಜನರನ್ನು ಒಳಗೊಂಡಿದ್ದು, ಇಲ್ಲಿ ವ್ಯಕ್ತಿಗಳು ಯಾವುದೇ ಕಾಯಿಲೆಯಿಂದ ಬಳಲದೆ ಹಠಾತ್ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದ್ದು. ಅಂತಹ 729 ಪ್ರಕರಣಗಳನ್ನು ಅಧ್ಯಯನ ಮಾಡಲಾಗಿದೆ.
    ಯುವಕರಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಕರಣ ಹೆಚ್ಚಾಗಿದೆ. 

    ICMR ಪ್ರಕಾರ, COVID-19 ವ್ಯಾಕ್ಸಿನೇಷನ್ ಭಾರತದಲ್ಲಿ ಯುವ ವಯಸ್ಕರಲ್ಲಿ ವಿವರಿಸಲಾಗದ ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸಲಿಲ್ಲ. ಯುವಜನರಲ್ಲಿ ಹಠಾತ್ ಸಾವು ಜೀವನಶೈಲಿಯ ಬದಲಾವಣೆಗಳಿಂದ ಉಂಟಾಗುತ್ತದೆ. ಹಠಾತ್ ಸಾವು ಮತ್ತು ವ್ಯಾಕ್ಸಿನೇಷನ್ ನಡುವೆ ಯಾವುದೇ ಸಂಬಂಧವಿಲ್ಲ. ಐಸಿಎಂಆರ್ ಅಧ್ಯಯನ ಮಾಡಿದ ನಂತರ ಎರಡು ಡೋಸ್ ಕೋವಿಡ್ ಲಸಿಕೆಯನ್ನು ಪಡೆದವರು ಹಠಾತ್ ಸಾವಿನ ಅಪಾಯವನ್ನು ಕಡಿಮೆ ಹೊಂದುತ್ತಾರೆ ಜತೆಗೆ ಒಂದೇ ಡೋಸ್ ತೆಗೆದುಕೊಂಡವರು ಕೂಡಾ ಕಡಿಮೆ ಅಪಾಯದ ಮಟ್ಟವನ್ನು ಹೊಂದುತ್ತಾರೆ ಎಂದು ಸಂಶೋಧಕರು ಹೇಳುತ್ತಾರೆ.

    World Toilet Day; ಒಳಚರಂಡಿಗೆ ಇಳಿದ ಬಿಲಿಯನೇರ್ ಬಿಲ್​ ಗೇಟ್ಸ್​​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts