ನವದೆಹಲಿ: ಮಗಳಿಗೆ ಎಂತಹ ವರ ಕೊಡಬೇಕು ಎಂದು ಪೋಷಕರು ಹಾಕುವ ಕಂಡೀಷನ್ ಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ, ಇಲ್ಲೊಬ್ಬ ಮಹಿಳೆ ಇದೀಗ ಎರಡನೇ ಮದುವೆಗೆ ತಯಾರಿ ನಡೆಸಿದ್ದಾಳೆ. ಈಕೆ ಇದೀಗ 2ನೇ ಮದ್ವೆ ಆಗುತ್ತಿರುವ ವರ ಹೇಗೆ ಇರಬೇಕು ಬೇಕು ಎಂದು ಪೋಸ್ಟ್ ಹಾಕಿದ್ದಾಳೆ. ಈ ಪೋಸ್ಟ್ ಸಖತ್ ವೈರಲ್ ಆಗಿದೆ.
ಬ್ಯಾಚುಲರ್ ಆಫ್ ಎಜುಕೇಶನ್ (ಬಿ.ಇಡಿ) ಪದವಿಯನ್ನು ಓದಿರುವ ಆಕೆ ವಾರ್ಷಿಕ ರೂ.1.3 ಲಕ್ಷ ಗಳಿಸುತ್ತಾಳೆ. ಈ ಹಿಂದೆ ಮದುವೆಯಾಗಿದ್ದು, ಪತಿಯೊಂದಿಗೆ ಜಗಳವಾಡಿ ವಿಚ್ಛೇದನ ಪಡೆದಿದ್ದಾಳೆ. ಆದರೆ ಇದೀಗ ಮಹಿಳೆ ಎರಡನೇ ಮದುವೆಯಾಗಲು ಯತ್ನಿಸುತ್ತಿದ್ದಾಳೆ. ಅದಕ್ಕಾಗಿ ತನಗೆ ವರ ಬೇಕು ಎಂದು ಆನ್ ಲೈನ್ ನಲ್ಲಿ ಜಾಹೀರಾತು ನೀಡಿದ್ದಳು. ಎರಡನೇ ಮದುವೆಗೆ ರೆಡಿಯಾಗಿದ್ದಾರೆ. ವರನಿಗಾಗಿ ಆನ್‌ಲೈನ್‌ನಲ್ಲಿ ಜಾಹೀರಾತು ನೀಡಲಾಗಿದೆ. ಇದರಲ್ಲಿ ತನ್ನ ಭಾವಿ ವರನಿಗೆ ಯಾವ ಗುಣಗಳು ಇರಬೇಕೆಂದು ತಿಳಿಸಿದ್ದಾಳೆ.
Her qualities and salary 🤡
Expected husbands qualities and salary🗿🗿 pic.twitter.com/NGgJvVvN9l— ShoneeKapoor (@ShoneeKapoor) September 10, 2024
ಈ ಸುಂದ್ರಿ ಮದುವೆ ಆಗುವ ವರನಿಗೆ ಹಾಕಿರುವ ಷರತ್ತುಗಳು:
ವರ್ಷಕ್ಕೆ 30 ಲಕ್ಷ ಸಂಬಳ ಇರಬೇಕು. ಸಾಫ್ಟ್‌ವೇರ್ ಇಂಜಿನಿಯರ್ ಆಗಿರಬೇಕು, MBA, MS, ಕನಿಷ್ಠ ರೂ. ವಾರ್ಷಿಕ 30 ಲಕ್ಷ ಸಂಬಳ.. ಭಾರತ, ಅಮೆರಿಕ ಅಥವಾ ಯೂರೋಪ್‌ನಲ್ಲಿ ಕೆಲಸ ಮಾಡಲು ಸಿದ್ಧರಾಗಿರಬೇಕು.
ನಾನು ಪ್ರಸ್ತುತ ನನ್ನ ತಾಯಿ ಮತ್ತು ತಂದೆಯೊಂದಿಗೆ ವಾಸಿಸುತ್ತಿದ್ದೇನೆ. ನನ್ನ ಮೇಲೆ ಅವಲಂಬಿತವಾಗಿರುವ ಕಾರಣ ನಾನು ಅವರನ್ನು ಬಿಡುವುದಿಲ್ಲ. ವರನ ತಂದೆ-ತಾಯಿ ಇದ್ದರೆ ಮದುವೆಯ ನಂತರ ಅವರ ಜತೆ ಬಾಳಬಾರದು. 3+ bkh ಸ್ವಂತ ಮನೆ ಇರಬೇಕು. ಕೆಲಸದ ಕಾರಣದಿಂದಾಗಿ ನನಗೆ ಅಡುಗೆ ಮಾಡಲು ಅಥವಾ ಮನೆ ಸ್ವಚ್ಛಗೊಳಿಸಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಅಡುಗೆ ಮತ್ತು ಸೇವಕಿ ಅತ್ಯಗತ್ಯ ಇದೆ.
ನಾನು ಆಹಾರ ಪ್ರೇಮಿ, ಪ್ರವಾಸ ಪ್ರೇಮಿ ಆದ್ದರಿಂದ ನಮ್ಮ ಮದುವೆಯ ನಂತರ ಪ್ರಪಂಚದಾದ್ಯಂತ ಎಲ್ಲಾ ಸ್ಥಳಗಳಿಗೆ ಭೇಟಿ ನೀಡಲು ನಿರೀಕ್ಷಿಸುತ್ತಿದ್ದೇನೆ. ಪತಿ ನನ್ನ ಜತೆ ಪ್ರವಾಸ ಮಾಡಬೇಕು. ಅವಿಭಕ್ತ ಕುಟುಂಬದ ಪರಿಕಲ್ಪನೆಯನ್ನು ಇಷ್ಟಪಡುವುದಿಲ್ಲ ಆದ್ದರಿಂದ ಪ್ರತ್ಯೇಕವಾಗಿ ವಾಸಿಸಲು ನಿರೀಕ್ಷಿಸುತ್ತೇನೆ. ಸಣ್ಣ ಕುಟುಂಬವಾಗಿದ್ರೆ ನಾವು ಪರಸ್ಪರ ಅರ್ಥಮಾಡಿಕೊಳ್ಳಬಹುದು ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಅರ್ಹ ವರ ಇದ್ದರೆ ನನ್ನನ್ನು ಸಂಪರ್ಕಿಸಿ.. ನೀವೂ ಒಮ್ಮೆ ಟ್ರೈ ಮಾಡಿ ನೋಡಿ ಎಂದು ನೆಟ್ಟಿಗರು ಈ ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ.
ಈ ಹುಡುಗಿ ನೆನಪಿದೆಯಾ? ಈಕೆ ಸುದೀಪ್ ಜತೆ ಮಾಡಿದ 2 ಸಿನಿಮಾಗಳೂ ಸೂಪರ್ ಹಿಟ್! ಕನ್ನಡದ ಅತ್ಯುತ್ತಮ ನಟಿ