POK ಮೇಲೆ ಪಾಕ್​ ವಾಯುಪಡೆ ಬಾಂಬ್ ದಾಳಿ: 30 ಮಂದಿ ಬಲಿ| Pakistan Air Force

Pakistan Air Force
Published on

Pakistan Air Force: ಪಾಕ್​ ಅಕ್ರಮಿತ ಕಾಶ್ಮೀರದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿ ಪಾಕಿಸ್ತಾನಿ ವಾಯುಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 30 ಮಂದಿ ಸೋಮವಾರ (ಸೆಪ್ಟೆಂಬರ್​,22) ಸಾವನ್ನಪ್ಪಿದ್ದಾರೆ.

ಈ ದಾಳಿಯು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಸಂಭವಿಸಿದ್ದು, ಕಣಿವೆಯಲ್ಲಿರುವ ಮಾತ್ರೆ ದಾರಾ ಗ್ರಾಮದ ಮೇಲೆ ಪಾಕ್​ ಯುದ್ಧ ವಿಮಾನಗಳು ಎಂಟು ಎಲ್‌ಎಸ್ -6 ಬಾಂಬ್‌ಗಳನ್ನು ಬೀಳಿಸಿದ ಘಟನೆಯಿಂದ ಭಾರಿ ಹತ್ಯಾಕಾಂಡ ಸಂಭವಿಸಿದೆ.

ಸ್ಥಳೀಯ ಮಾಧ್ಯಮಗಳ ಪ್ರಕಾರ, ಘಟನಾ ಸ್ಥಳದ ಗೊಂದಲದ ಚಿತ್ರಗಳು ಮತ್ತು ವೀಡಿಯೊಗಳು ಮಕ್ಕಳೂ ಸೇರಿದಂತೆ ಶವಗಳು ಸುತ್ತಲೂ ಬಿದ್ದಿರುವುದನ್ನು ತೋರಿಸಿವೆ. ರಕ್ಷಣಾ ತಂಡಗಳು ಅವಶೇಷಗಳ ಅಡಿಯಲ್ಲಿ ಶವಗಳನ್ನು ಹುಡುಕುವಲ್ಲಿ ನಿರತವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸ್ಥಿತಿ ನಿರ್ಮಾಣವಾಗಿದೆ.

ಈ ದಾಳಿಯ ಬಗ್ಗೆ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಪ್ರಕಾರ, ಖೈಬರ್ ಪಖ್ತುಂಖ್ವಾದಲ್ಲಿ ಈ ಹಿಂದೆ ಅನೇಕ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಈ ಪ್ರದೇಶದಿಂದ ಅನೇಕ ನಾಗರಿಕರ ಸಾವುಗಳು ವರದಿಯಾಗಿವೆ. ಈ ವರ್ಷದ ಆರಂಭದಲ್ಲಿ, ಜೂನ್‌ನಲ್ಲಿ, ಖೈಬರ್ ಪಖ್ತುಂಖ್ವಾದಲ್ಲಿ ಡ್ರೋನ್ ದಾಳಿಗಳು ನಡೆದಿದ್ದು, ಪಾಕಿಸ್ತಾನದಲ್ಲಿ ನಾಗರಿಕ ಜೀವನದ ಬಗ್ಗೆ ಪಾಕ್​ ನಿರ್ಲಕ್ಷ್ಯವನ್ನು ಸೂಚಿಸುತ್ತವೆ ಎಂದು ಹೇಳಿದೆ.

ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ದಕ್ಷಿಣ ಏಷ್ಯಾದ ಉಪ ಪ್ರಾದೇಶಿಕ ನಿರ್ದೇಶಕಿ ಇಸಾಬೆಲ್ಲೆ ಲಸ್ಸಿ ಹೇಳಿರುವಂತೆ, ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಹೆಚ್ಚುತ್ತಿರುವ ಡ್ರೋನ್ ದಾಳಿಯಿಂದ ನಾಗರಿಕರ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಪಾಕಿಸ್ತಾನಿ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಕಳೆದ ಶುಕ್ರವಾರದ ಡ್ರೋನ್ ದಾಳಿಯಲ್ಲಿ ಒಂದು ಮಗು ಸಾವನ್ನಪ್ಪಿದ್ದು, ಈ ವರ್ಷದ ಮಾರ್ಚ್‌ನಿಂದ ಉಲ್ಬಣಗೊಂಡಿರುವ ಆತಂಕಕಾರಿ ದಾಳಿಗಳ ಸರಣಿಯ ಭಾಗವಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವಖೈಬರ್ ಪಖ್ತುನ್ಖ್ವಾ ಪೊಲೀಸರ ಪ್ರಕಾರ, ಈ ವರ್ಷ ಜನವರಿ ಮತ್ತು ಆಗಸ್ಟ್ ನಡುವೆ ಪ್ರಾಂತ್ಯವು 605 ಭಯೋತ್ಪಾದಕ ಘಟನೆಗಳನ್ನು ಸಂಭವಿಸಿವೆ. ಇದರಲ್ಲಿ ಕನಿಷ್ಠ 138 ನಾಗರಿಕರು ಮತ್ತು 79 ಪಾಕಿಸ್ತಾನಿ ಪೊಲೀಸ್ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ, ಆಗಸ್ಟ್‌ನಲ್ಲಿ ಮಾತ್ರ ಆರು ಪಾಕಿಸ್ತಾನಿ ಸೇನೆ ಮತ್ತು ಅರೆಸೈನಿಕ ಫೆಡರಲ್ ಕಾನ್‌ಸ್ಟಾಬ್ಯುಲರಿ ಸಿಬ್ಬಂದಿಯ ಹತ್ಯೆ ಸೇರಿದಂತೆ 129 ಘಟನೆಗಳು ದಾಖಲಾಗಿವೆ ಎಂದು ಹೇಳಿದ್ದಾರೆ.

ಪಾಕ್ ಉಗ್ರರ ನೆಲೆ ಬದಲಾವಣೆ

ಪಿಒಕೆಯಲ್ಲಿ ಒಂಬತ್ತು ಪ್ರಮುಖ ಭಯೋತ್ಪಾದಕ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸಿದ ಆಪರೇಷನ್ ಸಿಂಧೂರದ ನಂತರ, ಜೈಶ್-ಎ-ಮೊಹಮ್ಮದ್ (ಜೆಎಂ) ಮತ್ತು ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ನಂತಹ ಭಯೋತ್ಪಾದಕ ಸಂಘಟನೆಗಳು ಅಫ್ಗನ್​ ಗಡಿಯ ಬಳಿಯ ಖೈಬರ್ ಪಖ್ತುನ್ಖ್ವಾದೊಳಗೆ ಹೊಸ ನೆಲೆಗಳನ್ನು ಸ್ಥಾಪಿಸುತ್ತಿವೆ. 1980 ರ ದಶಕದ ಸೋವಿಯತ್ ವಿರೋಧಿ ಅಫ್ಘಾನ್ ಯುದ್ಧದ ಸಮಯದಲ್ಲಿ ಮತ್ತು 9/11 ದಾಳಿಯ ನಂತರ ಅಫ್ಘಾನಿಸ್ತಾನದ ಮೇಲೆ ಅಮೆರಿಕದ ಆಕ್ರಮಣದ ಸಮಯದಲ್ಲಿ ನಿರ್ಮಿಸಲಾದ ಅಡಗುತಾಣಗಳನ್ನು ಅನೇಕ ಪ್ರದೇಶಗಳು ಉಗ್ರರು ನೆಲೆಗಳನ್ನು ಹೊಂದಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net