IMDB 2022ರ ಅತ್ಯಂತ ಜನಪ್ರಿಯ ಭಾರತೀಯ ಚಿತ್ರಗಳ ಪಟ್ಟಿಯಲ್ಲಿ ಕನ್ನಡದ ಮೂರು ಚಿತ್ರಗಳು …

Kantara - KGF 2
Published on

ಮುಂಬೈ: ಇಂಟರ್​ನೆಟ್​ ಮೂವಿ ಡೇಟಬೇಸ್​ ಕೆಲವು ವರ್ಷಗಳಿಂದಿತ್ತೀಚೆಗೆ ಪ್ರತೀ ವರ್ಷ ಅತ್ಯಂತ ಜನಪ್ರಿಯ ಭಾರತೀಯ ಚಿತ್ರಗಳ ಪಟ್ಟಿಯನ್ನು ಪ್ರಕಟಿಸುವುದು ಗೊತ್ತೇ ಇದೆ. ವಿಶೇಷವೆಂದರೆ, ಈ ಬಾರಿ ಟಾಪ್​ 10 ಪಟ್ಟಿಯಲ್ಲಿ 9 ದಕ್ಷಿಣದ ಚಿತ್ರಗಳಿದ್ದು, ಈ ಪೈಕಿ ಕನ್ನಡದ ಮೂರು ಚಿತ್ರಗಳು ಇರುವುದು ವಿಶೇಷ.

IMDB Top 10 ಪಟ್ಟಿ ಪ್ರಕಟವಾಗಿದ್ದು, ಈ ಪೈಕಿ ಕನ್ನಡದ ಮೂರು ಚಿತ್ರಗಳಿವೆ. ಈ ಪೈಕಿ 'ಕೆಜಿಎಫ್​ 2' ಚಿತ್ರವು ಮೂರನೇ ಸ್ಥಾನದಲ್ಲಿದ್ದರೆ, 'ಕಾಂತಾರ' ಐದನೇ ಸ್ಥಾನದಲ್ಲಿದೆ. '777ಚಾರ್ಲಿ' ಚಿತ್ರವು 10ನೇ ಸ್ಥಾನದಲ್ಲಿದೆ. ಇನ್ನು. ಮೊದಲ ಸ್ಥಾನದಲ್ಲಿ ರಾಜಮೌಳಿ ನಿರ್ದೇಶನದ 'ಆರ್​.ಆರ್.ಆರ್​' ಚಿತ್ರವಿದೆ.

ಈ 10 ಚಿತ್ರಗಳ ಪೈಕಿ ಬಾಲಿವುಡ್​ನಿಂದ 'ದಿ ಕಾಶ್ಮೀರ್​ ಫೈಲ್ಸ್​' ಮಾತ್ರ ಇದೆ. ಮಿಕ್ಕಂತೆ ಎಲ್ಲವೂ ದಕ್ಷಿಣದ ಚಿತ್ರಗಳೇ ಈ ಪಟ್ಟಿಯಲ್ಲಿವೆ. ಮಿಕ್ಕಂತೆ ಕನ್ನಡದ ಮೂರು, ತಮಿಳಿನ ಮೂರು ಮತ್ತು ತೆಲುಗಿನ ಮೂರು ಚಿತ್ರಗಳಿವೆ.

ಈ ಸಂಬಂಧ IMDB ಕಡೆಯಿಂದ ರಕ್ಷಿತ್​ ಶೆಟ್ಟಿ ಅವರ ಪರಂವಾ ಸ್ಟುಡಿಯೋಸ್​ಗೆ ಟ್ರೋಫಿ ಬಂದಿದ್ದು, ರಕ್ಷಿತ್​ ಟ್ವಿಟರ್​ ಮೂಲಕ ಧನ್ಯವಾದ ತಿಳಿಸಿದ್ದಾರೆ.

IMDb 2022ರ 10 ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿ ಹೀಗಿದೆ

1) RRR

2) ದಿ ಕಾಶ್ಮೀರ್ ಫೈಲ್ಸ್

3) K.G.F: ಚಾಪ್ಟರ್ 2

4) ವಿಕ್ರಂ

5) ಕಾಂತಾರ

6) ರಾಕೆಟ್ರಿ: ದಿ ನಂಬಿ ಎಫೆಕ್ಟ್

7) ಮೇಜರ್

8) ಸೀತಾ ರಾಮಂ

9) ಪೊನ್ನಿಯನ್ ಸೆಲ್ವನ್ : ಭಾಗ ಒಂದು

10) 777 ಚಾರ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net