ಮಗು ದತ್ತು ಪಡೆಯಲು 28,663 ಭಾರತೀಯರಿಂದ ಅರ್ಜಿ: ಕೇಂದ್ರಕ್ಕೆ ಮಾಹಿತಿ

Smrithiirani
Published on

ನವದೆಹಲಿ: ದೇಶದಲ್ಲಿ ಮಗು ದತ್ತು ಪಡೆಯುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬಂದಿದ್ದು, ಸದ್ಯ 28,663 ಅರ್ಜಿದಾರರು ಕಾಯುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಮಾಹಿತಿ ನೀಡಿದ್ದಾರೆ.

ಲೋಕಸಭೆಯಲ್ಲಿ ಈ ಪ್ರಶ್ನೆಗೆ ಉತ್ತರಿಸಿರುವ ಸಚಿವೆ, ಎನ್​ಆರ್​ಐ ಸೇರಿದಂತೆ 1030 ವಿದೇಶಿ ಅರ್ಜಿದಾರರು ಮಕ್ಕಳನ್ನು ದತ್ತು ಪಡೆಯಲು ನೋಂದಣಿಯಾಗಿದ್ದಾರೆ ಎಂದಿದ್ದು, ಈ ಸಂಖ್ಯೆಯಲ್ಲಿ ಇಳಿಕೆಯಾಗಿದೆಯೇ ಎಂಬುದಕ್ಕೆ ಇಲ್ಲ ಎಂದು ಉತ್ತರಿಸಿದ್ದಾರೆ.

2021-22 ರಲ್ಲಿ 2,991 ದೇಶದಲ್ಲಿರುವವರು ಹಾಗೂ 414 ವಿದೇಶದಲ್ಲಿ ನೆಲೆಸಿರುವವರು ಭಾರತೀಯ ಅರ್ಜಿದಾರರು ಮತ್ತು ದತ್ತು ಪಡೆಯಲು ಕಾಯುತ್ತಿದ್ದಾರೆ ಎಂದು ಸಚಿವೆ ಸ್ಮೃತಿ ಇರಾನಿ ಮಾಹಿತಿಯನ್ನು ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net