

ಅಥೆನ್ಸ್ : ಎರಡು ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದು ಗ್ರೀಸ್ನಲ್ಲಿ ಭೀಕರ ರೈಲು ದುರಂತ ಸಂಭವಿಸಿದೆ. ಈ ಅಪಘಾತದಲ್ಲಿ 26 ಮಂದಿ ಮೃತಪಟ್ಟಿದ್ದು, 85 ಮಂದಿ ಗಾಯಗೊಂಡಿದ್ದಾರೆ.
ಒಂದೇ ಹಳಿಯಲ್ಲಿ ಎರಡು ರೈಲುಗಳು ಪರಸ್ಪರ ವಿರುದ್ಧ ದಿಕ್ಕಿನಿಂದ ಬಂದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಗಾಯಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿಯಿದೆ.
ಇದು ಇತ್ತೀಚಿನ ದಿನಗಳಲ್ಲಿ ಗ್ರೀಸ್ ನಲ್ಲಿ ಸಂಭವಿಸಿದ ಅತೀ ಭೀಕರ ದುರಂತ ಎಂದು ವರದಿಯಾಗಿದೆ. ರೈಲು ಅಪಘಾತದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ.
ಅಥೆನ್ಸ್‌ನಿಂದ ಉತ್ತರದ ನಗರವಾದ ಥೆಸಲೋನಿಕಿಗೆ ಪ್ರಯಾಣಿಸುತ್ತಿದ್ದ ಇಂಟರ್‌ಸಿಟಿ ಪ್ಯಾಸೆಂಜರ್ ರೈಲು ಮಧ್ಯ ಗ್ರೀಸ್‌ನ ಲಾರಿಸ್ಸಾ ನಗರದಲದಲ್ಲಿ ಸರಕು ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ಥೆಸಲಿ ಪ್ರದೇಶದ ಗವರ್ನರ್ ಹೇಳಿದ್ದಾರೆ.