

ಬೆಂಗಳೂರು: ಬಾಡಿಗೆ ಮನೆ ಹುಡುಕುವುದು ಸುಲಭದ ಕೆಲಸವಲ್ಲ. ಮಹಾನಗರಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುತ್ತಿರುವ ವ್ಯಕ್ತಿಯೊಬ್ಬರ ಟ್ವೀಟ್ ಪೋಸ್ಟರ್ವೊಂದು ಸಖತ್ ವೈರಲ್ ಆಗುತ್ತಿದೆ. ನೆಟ್ಟಿಗರು ಈ ಫೋಸ್ಟ್ಗೆ ಶೇರ್ ಮಾಡುತ್ತಾ ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ.
ಬೆಂಗಳೂರಲ್ಲಿ ಸ್ವಂತ ಮನೆ ಇರುವವರಿಗಿಂತ ಬಾಡಿಗೆ ಮನೆಗಳಲ್ಲಿ ಇರುವವರ ಸಂಖ್ಯೆಯೇ ಹೆಚ್ಚು. ರಾಜ್ಯದ ವಿವಿಧ ಜಿಲ್ಲೆಗಳ ಮತ್ತು ಹೊರ ರಾಜ್ಯದ ಜನ ಕೆಲಸ ಅರಸಿ ಇಲ್ಲಿಗೆ ಬರುವುದರಿಂದ ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಾಗಿಯೇ ಇದೆ.
ವ್ಯಕ್ತಿಯೊಬ್ಬ “ನನ್ನ ಕಿಡ್ನಿ ಮಾರಾಟಕ್ಕಿದೆ, ಆ ಹಣದಿಂದ ನಾನು ಮನೆ ಅಡ್ವಾನ್ಸ್ ಪೇ ಮಾಡುತ್ತೇನೆ” ಎಂದು ಬರೆದು ಪೋಸ್ಟರ್ ಅಂಟಿಸಿದ್ದಾನೆ. ಈ ಪೋಸ್ಟ್ನಿಂದ ಬೆಂಗಳೂರಿನಲ್ಲಿ ಮನೆ ಬಾಡಿಗೆ ಹುಡುಕುವವರ ಗೋಳಾಟ ವೈರಲ್ ಆಗಿದೆ.
ಆದರೆ ಟ್ವೀಟ್ ಕೊನೆಯಲ್ಲಿ “ನಾನ್ ತಮಾಷೆ ಮಾಡಿದೆ, ಯಾರಿಗಾದ್ರೂ ಮನೆ ಗೊತ್ತಿದ್ರೆ ತಿಳಿಸಿ’ ಎಂದು ಬರೆದು ಈ ಆಸಾಮಿ ಚಮಕ್ ನೀಡಿದ್ದಾನೆ. ಒಟ್ಟಾರೆ ಬೆಂಗಳೂರಲ್ಲಿ ಮನೆ ಬಾಡಿಗೆಗೆ ಹುಡುಕುವವರ ಗೋಳಾಟ ಈ ವೈರಲ್ ಫೋಟೋದಿಂದ ಮುನ್ನೆಲೆಗೆ ಬಂದಿದೆ.