ನೈಜೀರಿಯಾ: ಪ್ರಯಾಣಿಕರು ಮತ್ತ ಸರಕನ್ನು ಸಾಗಿಸುತ್ತಿದ್ದ ಲಾರಿಯೊಂದು (Truck) ಪಲ್ಟಿಯಾದ ಪರಿಣಾಮ 23 ಜನರು ಮೃತಪಟ್ಟಿರುವ ಭೀಕರ ಘಟನೆ ನೈಜೀರಿಯಾದ ಕಾನೊ ನಗರದಲ್ಲಿ ನಡೆದಿದೆ. ಕಾನೊ ನಗರದ ಹೊರಭಾಗದಲ್ಲಿರುವ ಹೊಟೊರೊ ಬಳಿ ಈ ಘಟನೆ ನಡೆದಿದ್ದು, ಗಾಯಾಳುಗಳ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ.
ಘಟನೆ ಕುರಿತು ಮಾತನಾಡಿರುವ ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ (FRSC) ಹಿರಿಯ ಅಧಿಕಾರಿಯೊಬ್ಬರು, ನಗರದ ಹೊರವಲಯದಲ್ಲಿರುವ ಹೊಟೊರೊ ಬಳಿ ಅಂಡರ್ಪಾಸ್ ಪ್ರವೇಶಿಸುವ ಮುನ್ನ ಲಾರಿಯು (Truck) ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ ದುರಂತ ಸಂಭವಿಸಿದೆ.
ಲಾರಿಯು ಸರಕು ಹಾಗೂ ಪ್ರಯಾಣಿಕರನ್ನು ಹೊತ್ತು ಮೈದುಗುರಿಯಿಂದ ನೈಜೀರಿಯಾದ ವಾಣಿಜ್ಯ ಕೇಂದ್ರವಾದ ಲಾಗೋಸ್‌ಗೆ ಪ್ರಯಾಣಿಸುತ್ತಿತ್ತು ಎಂದು ತಿಳಿದು ಬಂದಿದೆ. ಸ್ಥಳ ಪರಿಶೀಲಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಫೆಡರಲ್ ರೋಡ್ ಸೇಫ್ಟಿ ಕಾರ್ಪ್ಸ್ (FRSC) ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉದ್ಘಾಟನಾ ಪಂದ್ಯದಲ್ಲೇ ಭರ್ಜರಿ ಗೆಲುವು; ಡಬ್ಲ್ಯೂಪಿಎಲ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ RCB
ಹುಟ್ಟೂರು ಮರೆತರಾ Rashmika Mandanna? ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ ನಟಿಯ ಹೇಳಿಕೆ