ವಡೋದರಾ: ಇಲ್ಲಿನ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಆರು ವಿಕೆಟ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿ (RCB) ನಾಯಕಿ ಸ್ಮೃತಿ ಮಂದನಾ ಆತಿಥೇಯರನ್ನು ಬ್ಯಾಟಿಂಗ್ ಆಹ್ವಾನಿಸಿದರು. ಆರ್ಸಿಬಿ ಸವಾಲನ್ನು ಸ್ವೀಕರಿಸಿದ ಗುಜರಾತ್ ಜೈಂಟ್ಸ್ ತಂಡವು ಆಶ್ಲೀ ಗಾರ್ಡ್ನರ್ (79 ರನ್, 37 ಎಸೆತ, 3 ಬೌಂಡರಿ, 8 ಸಿಕ್ಸರ್), ನಾಯಕಿ ಬೆತ್ ಮೂನಿ (56 ರನ್, 42 ಎಸೆತ, 8 ಬೌಂಡರಿ) ಭರ್ಜರಿ ಬ್ಯಾಟಿಂಗ್ ಫಲವಾಗಿ 5 ವಿಕೆಟ್ ನಷ್ಟಕ್ಕೆ 201ರನ್ ಗಳಿಸಿತು.
Tough chase, but we are tougher than that! 💪
🚨 Record broken in our 1️⃣st game of #WPL2025! 💀#PlayBold #ನಮ್ಮRCB #SheIsBold #GGvRCB pic.twitter.com/Z9gOZf3axc
— Royal Challengers Bengaluru (@RCBTweets) February 14, 2025
ಸವಾಲಿನ ಗುರಿ ಬೆನ್ನತ್ತಿದ್ದ ಆರ್ಸಿಬಿ (RCB) ತಂಡವು ಆರಂಭಿಕ ಆಘಾತದ ಹೊರತಾಗಿಯೂ ಎಲ್ಲಿಸ್ ಪೆರ್ರಿ (57 ರನ್, 34 ಎಸೆತ, 4 ಬೌಂಡರಿ, 2 ಸಿಕ್ಸರ್), ರಿಚಾ ಘೋಷ್ (64 ರನ್, 27 ಎಸೆತ, 7 ಬೌಂಡರಿ, 4 ಸಿಕ್ಸರ್) ಭರ್ಜರಿ ಬ್ಯಾಟಿಂಗ್ ಫಲವಾಗಿ 18.3 ಓವರ್ಗಳಲ್ಲಿ 202 ರನ್ ಬಾರಿಸಿ 6 ವಿಕೆಟ್ಗಳ ಅಮೋಘ ಗೆಲುವು ದಾಖಲಿಸಿತು.
ಈ ಮೂಲಕ ಆರ್ಸಿಬಿ (RCB) ತಂಡವು ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಗರಿಷ್ಠ ಸ್ಕೋರ್ ಚೇಸ್ ಮಾಡಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಇದಲ್ಲದೆ ಹೊಸ ಇತಿಹಾಸವನ್ನು ನಿರ್ಮಿಸಿದೆ. ಆರ್ಸಿಬಿಗೂ ಮೊದಲು 2024ರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಗುಜರಾತ್ ಜೈಂಟ್ಸ್ ವಿರುದ್ಧ 191 ರನ್ಗಳನ್ನು ಚೇಸ್ ಮಾಡುವ ಮೂಲಕ ಗರಿಷ್ಠ ಸ್ಕೋರ್ ಚೇಸ್ ಮಾಡಿದ ತಂಡ ಎಂಬ ದಾಖಲೆಯನ್ನು ಹೊಂದಿತ್ತು. ಇದೀಗ ಆರ್ಸಿಬಿ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲೇ ಈ ದಾಖಲೆಯನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಹುಟ್ಟೂರು ಮರೆತರಾ Rashmika Mandanna? ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ ನಟಿಯ ಹೇಳಿಕೆ
ಅವರು ನಮ್ಮ ಆಯ್ಕೆಯಾಗಿದ್ದರು ಆದ್ರೆ… ವಿರಾಟ್ಗೆ ಕ್ಯಾಪ್ಟನ್ಸಿ ನೀಡದಿರುವ RCB ನೀಡಿದ ಸ್ಪಷ್ಟನೆ ಹೀಗಿದೆ