blank

ಹುಟ್ಟೂರು ಮರೆತರಾ Rashmika Mandanna? ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ ನಟಿಯ ಹೇಳಿಕೆ

Rashmika Mandanna

ಮುಂಬೈ: ಕಿರಿಕ್ ಪಾರ್ಟಿ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ (Rashmika Mandanna) ದಿ ಮೋಸ್ಟ್ ಬ್ಯುಸಿಯೆಸ್ಟ್​​ ನಟಿಯರಲ್ಲಿ ಒಬ್ಬರಾಗಿದ್ದಾರೆ. ಸದ್ಯ ರಶ್ಮಿಕಾ ನಟನೆಯ ಛಾವಾ ಸಿನಿಮಾ ಫೆಬ್ರವರಿ 14ರಂದು ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಙಡೆದುಕೊಂಡಿದೆ. ಆದರೆ, ಚಿತ್ರದ ಪ್ರಮೋಷನ್ ವೇಳೆ ನಟಿ ರಶ್ಮಿಕಾ ಮಂದಣ್ಣ ನೀಡಿರುವ ಒಂದು ಹೇಳಿಕೆ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ರಶ್ಮಿಕಾ ಮಂದಣ್ಣ ಹುಟ್ಟೂರನ್ನೇ ಮರೆತರಾ ಎಂಬ ಪ್ರಶ್ನೆ ಮೂಡಿದೆ.

ವಿಕ್ಕಿ ಕೌಶಲ್​, ರಶ್ಮಿಕಾ ಮಂದಣ್ಣ ಜತೆಯಾಗಿ ನಟಿಸಿರುವ ಐತಿಹಾಸಿಕ ಕಥಾಹಂದರವುಳ್ಳ ಸಿನಿಮಾ ಛಾವಾ ವಿಶ್ವದಾದ್ಯಂತ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಬಿಡುಗಡೆಗೂ ಮುನ್ನ ಚಿತ್ರತಂಡ ಕಾರ್ಯಕ್ರಮ ಒಂದನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ರಶ್ಮಿಕಾ ಮಂದಣ್ಣ (Rashmika Mandanna) ನಾನು ಹೈದರಾಬಾದ್​ನವಳು ಎಂದು ಹೇಳಿಕೊಳ್ಳುವ ಮೂಲಕ ಮತ್ತೊಮ್ಮೆ ಟ್ರೋಲ್ ಪೇಜ್​ಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟಿ ರಶ್ಮಿಕಾ ಮಂದಣ್ಣ, ನಾನು ಹೈದರಾಬಾದ್​ನವಳು. ನಾನು ಒಬ್ಬಳೇ ಇಲ್ಲಿಗೆ ಬಂದಿದ್ದೇನೆ. ಇವತ್ತು ನಿಮ್ಮ ಕುಟುಂಬಕ್ಕೆ ಸೇರಿದ್ದೇನೆ ಎಂದು ಭಾವಿಸುತ್ತೇನೆ ಎಂದು ಹೇಳಿದ್ದರು. ಈ ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡದ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋಗೆ ಕಮೆಂಟ್​ಗಳ ಮಹಾಪೂರವೇ ಹರಿದುಬರುತ್ತಿದೆ.

ತೆಲುಗಿಗೆ ಹೋದಾಗ ಕನ್ನಡದ ಹುಡುಗಿ ಎನ್ನುತ್ತಿದ್ದವರು, ಹಿಂದಿಗೆ ಹೋಗಿ ಹೈದರಾಬಾದ್​ನವಳು ಎನ್ನುತ್ತಿದ್ದಾರೆ. ಮುಂದೆ ಬೇರೆ ಚಿತ್ರರಂಗಕ್ಕೆ ಹೋದರೆ, ನಾನು ಬಾಲಿವುಡ್​ನವಳು ಎನ್ನುತ್ತಾರಾ?’, ‘ಕನ್ನಡ, ಕರ್ನಾಟಕವನ್ನು ಇಷ್ಟು ಬೇಗ ಮರೆತುಬಿಟ್ಟಿರಾ? ಅಂತೆಲ್ಲ ಜಾಲತಾಣದಲ್ಲಿ ಅಭಿಮಾನಿಗಳು ಪ್ರಶ್ನಿಸಿದ್ದಾರೆ.

ಮಾತ್ರವಲ್ಲ ಕನ್ನಡ ಸಿನಿಮಾಗಳಿಗೆ ಡಬ್ಬಿಂಗ್ ಮಾಡಲು ಹಿಂದೇಟು ಹಾಕುತ್ತಿದ್ದ ರಶ್ಮಿಕಾ ಇದೀಗ ಬೇರೆ ಭಾಷೆಗಳಲ್ಲಿ ತಾವೇ ಡಬ್ ಮಾಡುತ್ತಿದ್ದಾರೆ. ಪ್ಯಾನ್ ಇಂಡಿಯಾ ಮೂಡಿಬರುವ ಬಹುಭಾಷಾ ಚಿತ್ರಗಳಿಗೂ ಅವರು ಕನ್ನಡದಲ್ಲಿ ಡಬ್ ಮಾಡುತ್ತಿಲ್ಲ ಎಂದು ಈ ಹಿಂದೆ ನೆಟ್ಟಿಗರು ಗರಂ ಆಗಿದ್ದರು. ಇದೀಗ ಹೈದರಾಬಾದ್​ನವಳು ಎಂದು ರಶ್ಮಿಕಾ ಮಂದಣ್ಣ (Rashmika Mandanna) ಮತ್ತೆ ಇಲ್ಲಿನ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಅವರು ನಮ್ಮ ಆಯ್ಕೆಯಾಗಿದ್ದರು ಆದ್ರೆ… ವಿರಾಟ್​ಗೆ ಕ್ಯಾಪ್ಟನ್ಸಿ ನೀಡದಿರುವ RCB ನೀಡಿದ ಸ್ಪಷ್ಟನೆ ಹೀಗಿದೆ

ಕುಂಭಮೇಳದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದ ವ್ಯಕ್ತಿ ತಿಥಿ ದಿನದಂದು ಪ್ರತ್ಯಕ್ಷ; ಆತ ನೀಡಿದ ಕಾರಣ ಕೇಳಿ ಕುಟುಂಬಸ್ಥರು ಶಾಕ್

Share This Article

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…

ಎಷ್ಟೇ ನೀರು ಕುಡಿದ್ರೂ ನಿಮಗೆ ಪದೇ ಪದೇ ಬಿಕ್ಕಳಿಕೆ ಬರುತ್ತಿದೆಯೇ? ಈ ಮನೆಮದ್ದು ಟ್ರೈ ಮಾಡಿ Hiccups

Hiccups : ಬಿಕ್ಕಳಿಕೆ ಎಲ್ಲರಿಗೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಕೆಲವೊಮ್ಮೆ ಅನಿರೀಕ್ಷಿತವಾಗಿ ಇದು ಪ್ರಾರಂಭವಾಗುತ್ತದೆ ಗಬಗಬನೆ…

18 ತಿಂಗಳ ನಂತರ ಸಿಂಹ ರಾಶಿಗೆ ಕೇತು ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ! Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…