22 ವರ್ಷದ ಯುವಕನನ್ನು ನೆಲಕ್ಕೆ ಕುಟ್ಟಿ ಕುಟ್ಟಿ ಕೊಂದ ಆನೆ

Published on

ರಿಷಿಕೇಶ್: ಆನೆಯೊಂದು ಕಾಡಿನ ಬಳಿಯ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಯುವಕನನ್ನು ನೆಲಕ್ಕೆ ಕುಟ್ಟಿ ಕುಟ್ಟಿ ಸಾಯಿಸಿರುವ ಘಟನೆಯೊಂದು ಉತ್ತರಾಖಂಡ ರಾಜ್ಯದಿಂದ ವರದಿಯಾಗಿದೆ.

ಉತ್ತರಾಖಂಡ ರಾಜ್ಯದ ಫೂಲ್​ಚೆಟ್ಟಿ ಎಂಬ ಹಳ್ಳಿಯಲ್ಲಿ ಸಿಟ್ಟೇರಿದ್ದ ಆನೆಯೊಂದು ಕಪಿಲ್ ಎಂಬ 22 ವರ್ಷದ ಯುವಕನನ್ನು ಸೊಂಡಿಲಿನಿಂದ ಎತ್ತಿ ನೆಲಕ್ಕೆ ಮತ್ತೆ ಮತ್ತೆ ಕುಟ್ಟಿದೆ. ಆನೆಯ ಪ್ರಹಾರಕ್ಕೆ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಲಕ್ಷ್ಮಣ ಝೂಲಾ ಪೊಲೀಸರು ತಿಳಿಸಿದ್ದಾರೆ. ಸೋಮವಾರ (ಫೆಬ್ರವರಿ 22) ಬೆಳಗಿನ ಜಾವ 3 ಗಂಟೆಯ ಹೊತ್ತಿಗೆ ಈ ಘಟನೆ ನಡೆದಿದೆ.

ಮೃತ ಕಪಿಲ್, ಉತ್ತರಪ್ರದೇಶದ ಬಿಜನೋರ್ ಜಿಲ್ಲೆಯ ಬರಲ್ ಎಂಬ ಹಳ್ಳಿಯ ನಿವಾಸಿಯಾಗಿದ್ದ. ಟ್ರಕ್​ ಒಂದರಲ್ಲಿ ಲಕ್ಷ್ಮಣ ಝೂಲಾದಿಂದ ನೀಲಕಂಠ ಕಡೆಗೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ಕಪಿಲ್​​ನನ್ನು ಸಾಯಿಸಿದ ಆನೆ, ಟ್ರಕ್​ನ ವಿಂಡ್​ಸ್ಕ್ರೀನ್ ಒಡೆದು ಚಾಲಕನನ್ನು ಆಚೆಗೆ ಎಳೆಯಲು ಪ್ರಯತ್ನ ಪಟ್ಟಿತು. ಆತ ಅದಕ್ಕೆ ಸಿಗದಂತೆ ವಾಹನದ ಒಳಗೆ ಅವಿತುಕೊಂಡದ್ದರಿಂದ ಉಳಿದುಕೊಂಡ ಎನ್ನಲಾಗಿದೆ.(ಏಜೆನ್ಸೀಸ್) ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net