More

    ಹುಲಿಗೆ ಇಬ್ಬರು ಬಲಿ; ಹುಲಿ ಪತ್ತೆ ಕಾರ್ಯಾಚರಣೆ ಮುಂದುವರಿಕೆ, ಶಾಲಾ-ಕಾಲೇಜುಗಳಿಗೆ 2 ದಿನ ರಜೆ…

    ಕೊಡಗು: ಕೊಡಗು ಜಿಲ್ಲೆಯಲ್ಲಿ ಇಬ್ಬರನ್ನು ಹುಲಿ ಸಾಯಿಸಿ 2 ದಿನಗಳಿಂದ ಉಂಟಾಗಿರುವ ಆತಂಕ ಇಂದು ಒಂದು ಹುಲಿಯನ್ನು ಸೆರೆ ಹಿಡಿಯುವುದರೊಂದಿಗೆ ನಿವಾರಣೆಯಾಗಿದ್ದರೂ, ಇದೀಗ ಮತ್ತೊಮ್ಮೆ ಅದೇ ಆತಂಕ ಧುತ್ತೆಂದು ಎದುರಾಗಿದೆ. ಏಕೆಂದರೆ ಇಂದು ಸೆರೆ ಹಿಡಿಯಲಾಗಿರುವ ಹುಲಿ ಮನುಷ್ಯರನ್ನು ಸಾಯಿಸಿರುವ ಹುಲಿಯಲ್ಲ ಎನ್ನಲಾಗಿದೆ. ಜತೆಗೆ ಇನ್ನಷ್ಟು ಹುಲಿಗಳಿರುವ ಶಂಕೆ ವ್ಯಕ್ತವಾಗಿರುವುದರಿಂದ ಹುಲಿ ಪತ್ತೆ ಕಾರ್ಯಾಚರಣೆ ಮುಂದುವರಿದಿದೆ.

    ಶನಿವಾರ ರಾತ್ರಿ ಬಾಲಕನೊಬ್ಬನನ್ನು ಕೊಂದಿದ್ದ ವ್ಯಾಘ್ರ, ಇಂದು ಬೆಳ್ಳಂಬೆಳಗ್ಗೆ ವೃದ್ಧೆಯೊಬ್ಬರ ಮೇಲೂ ದಾಳಿ ಮಾಡಿ ಕೊಂದು ಹಾಕಿದೆ. ಪೊನ್ನಂಪೇಟೆ ತಾಲೂಕಿನ ಕುಮತೂರು ಗ್ರಾಮ ಬಾಲಕ ಅಯ್ಯಪ್ಪ (14) ಮತ್ತು ಟಿ.ಶೆಟ್ಟಿಗೇರಿ ಗ್ರಾಮದ ಕಾರ್ಮಿಕ ಮಹಿಳೆ ಚಿಣ್ಣಿ (60) ಹುಲಿ ದಾಳಿಯಿಂದ ಮೃತಪಟ್ಟ ದುರ್ದೈವಿಗಳು. ಹೀಗಾಗಿ ದಾಳಿ ನಡೆಸಿದ್ದ ಹುಲಿಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಪರಿಣಾಮವಾಗಿ ಇಂದು ಮಧ್ಯಾಹ್ನ ಹುಲಿಯೊಂದು ಪತ್ತೆಯಾಗಿದ್ದು, ಅದಕ್ಕೆ ಅರಿವಳಿಕೆ ಮದ್ದನ್ನು ಸಿಡಿಸಿ ಸೆರೆ ಹಿಡಿಯಲಾಗಿತ್ತು.

    ಇದನ್ನೂ ಓದಿ: ಸೆಕ್ಸ್​ ಮಾಡುವಾಗ ಉಸಿರುಗಟ್ಟಿ ಸತ್ತೇ ಹೋದಳು… ಬ್ಯಾಚಲರ್​ ಮನೆಯಲ್ಲಿ ವಿವಾಹಿತೆ ಸಾವು!

    ಇಂದು ಸೆರೆ ಸಿಕ್ಕಿರುವ ಹುಲಿಯ ಮುಂದಿನ ಒಂದು ಕಾಲಿಗೆ ಗಾಯವಾಗಿ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಅದೇ ಕಾರಣಕ್ಕೆ ಆಹಾರ ಕಂಡುಕೊಳ್ಳಲು ಆಗದೆ ನಿತ್ರಾಣಗೊಂಡಿತ್ತು. ಇಂದು ವೃದ್ಧೆಯ ಸಾವಿನ ಕೆಲವೇ ಹೊತ್ತಿನಲ್ಲಿ ಈ ಹುಲಿ ಪತ್ತೆಯಾಗಿ ಸೆರೆ ಹಿಡಿಯಲಾಗಿತ್ತು. ಆದರೆ ಇಬ್ಬರನ್ನು ಸಾಯಿಸಿರುವ ಹುಲಿ ಇದಲ್ಲ ಎಂಬ ಶಂಕೆ ಮೂಡಿದೆ.

    ಈ ಹುಲಿಯಲ್ಲದೆ ಇನ್ನೂ ಬೇರೆ ಹುಲಿಗಳಿರುವ ಶಂಕೆ ಮೂಡಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ನಾಳೆಯೂ ಹುಲಿ ಪತ್ತೆ ಹಾಗೂ ಸೆರೆ ಕಾರ್ಯಾಚರಣೆ ಮುಂದುವರಿಸಲಿದ್ದಾರೆ. ಪೊನ್ನಂಪೇಟೆಯ ಟಿ.ಶೆಟ್ಟಿಗೇರಿ, ಕುಮಟೂರು ಭಾಗದಲ್ಲಿ ಕೂಂಬಿಂಗ್ ನಡೆಯಲಿದೆ. ಅಲ್ಲದೆ ಶ್ರೀಮಂಗಲ ಹೋಬಳಿಯ ಶಾಲಾ-ಕಾಲೇಜುಗಳಿಗೆ ಫೆ.22, 23ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶ ಹೊರಡಿಸಿದ್ದಾರೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಹುಲಿಗೆ ಇಬ್ಬರು ಬಲಿ! ರಾತ್ರಿ ಬಾಲಕ, ಬೆಳಗ್ಗೆ ವೃದ್ಧೆಯನ್ನ ಕೊಂದ ವ್ಯಾಘ್ರ, ಬೆಚ್ಚಿಬಿದ್ದ ಸ್ಥಳೀಯರು

    ಇಬ್ಬರನ್ನು ಸಾಯಿಸಿದ್ದ ಹುಲಿ ಕೊನೆಗೂ ಸೆರೆ ಸಿಕ್ಕಿತು; ಹತ್ತರ ಪ್ರಾಯದ ಹೆಣ್ಣು ಹುಲಿ ಮೈಸೂರಿಗೆ ರವಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts