20 ವರ್ಷದ ಯುವತಿ ಹೃದಯಾಘಾತದಿಂದ ಸಾವು! ಈಕೆ ಬಳಿ ಇದ್ದವು 26 ಐಫೋನ್​ಗಳು| Mysterious Case

untitled-design-49-689087b03842f
Published on

ಬ್ರೆಜಿಲ್ : ( Mysterious Case ) 20 ವರ್ಷದ ಯುವತಿಯೊಬ್ಬಳು ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಘಾತದಿಂದ ಮೃತಪಟ್ಟಿರುವ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಈಕೆ ದೇಹದ ಸುತ್ತಲೂ ಡಜನ್​ಗಟ್ಟಲೆ ಮೊಬೈಲ್​ ಫೋನ್​ಗಳನ್ನು ಇರುವ ವಿಚಾರ ಚರ್ಚೆಗೆ ಗ್ರಾಸವಾಗಿದೆ.

ಏನಾಯಿತು?

ಫೋಜ್​ ಡೊ ಇಗುವಾಸದದಿಂದ ಬಸ್​ ಹತ್ತಿದ ಯುವತಿ ಸಾವೊ ಪಾಲೊಗೆ ಪ್ರಯಾಣ ಮಾಡುತ್ತಿದ್ದಳು. ಈ ವೇಳೆ ಈಕೆಗೆ ಉಸಿರಾಟದ ತೊಂದರೆಯಾಗಿದೆ. ಗೌರಪುವಾದಲ್ಲಿ ಕುಸಿದು ಬಿದ್ದಿದ್ದಾಳೆ. ನಂತರ ಆಕೆಯನ್ನು ಹತ್ತಿರದ ಆಶ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಬದುಕಿಸಲು ಪ್ರಯತ್ನಿಸಿದರೂ, ಆಕೆ ಚಿಕಿತ್ಸೆಗೆ ಪ್ರತಿಕ್ರಿಯಿಸಿಲ್ಲ.

ವೈದ್ಯರು ಆಕೆಗೆ ಚಿಕಿತ್ಸೆ ನೀಡುತ್ತಿರುವಾಗ ಆಕೆಯು ತನ್ನ ದೇಹದ ಬಟ್ಟೆ ಕೆಳಗೆ 26 ಐಫೋನ್​ಗಳನ್ನು ಕಟ್ಟಿಕೊಂಡಿರುವುದನ್ನು ಗಮನಿಸಿದ್ದಾರೆ. ಇನ್ನು ಅನುಮಾನ ವ್ಯಕ್ತಪಡಿಸಿ ಆಕೆಯ ಲಗೇಜು ಪರಿಶೀಲಿಸಿದಾಗ ಮಧ್ಯದ ಬಾಟಲಿಗಳು ಕಂಡುಬಂದಿವೆ. ಯುವತಿ ಮೊಬೈಲ್​ಗಳ ಕಳ್ಳಸಾಗಾಟ ಮಾಡುತ್ತಿದ್ದಳು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಸೈಂಟಿಫಿಕ್​ ಪೊಲೀಸರು ಹಾಗೂ ಸಿವಿಲ್​ ಪೊಲೀಸ್​ ತಂಡ ಆಕೆಯ ದೇಹದ ಪರೀಕ್ಷೆ ನಡೆಸಲು ವೈದ್ಯಕೀಯ ಸಂಸ್ಥೆಗೆ ಕಳುಹಿಸಲಾಯಿತು. ಇನ್ನು ಪ್ರಕರಣದ ಬಗ್ಗೆ ಪರಾನಾ ಸಿವಿಲ್​ ಪೊಲೀಸರು ತನಿಖೆ ನಡೆಸುತ್ತಿದ್ದು, ಮಹಿಳೆಯ ದೇಹಕ್ಕೆ ಅಮಟಿರುವ 26 ಐಫೋನ್​ಗಳನ್ನು ವಶಕ್ಕೆ ಪಡೆದು ಬ್ರೆಜಿಲ್​ನ ಫೆಡರಲ್​ ಕಂದಾಯ ಸೇವೆಗೆ ಹಸ್ತಾಂತರಿಸಲಾಗಿದೆ. ಯುವತಿ ಯಾರು? ಈಕೆ ಬಳಿ ಇರುವ ಇಷ್ಟು ಮೊಬೈಲ್​​ಗಳು ಎಲ್ಲಿಂದ ಬಂದವು ಎನ್ನುವ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ( ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net