

Pregnent: ಪ್ರಿಯಕರನೊಂದಿಗೆ ಗರ್ಭಿಣಿಯಾಗಿದ್ದ ಯುವತಿಯೊಬ್ಬಳು ಹುಬ್ಬಳ್ಳಿಯ ಎಚ್‌ಡಿಎಂಸಿ ಚಿಟ್ಗುಪ್ಪಿ ಆಸ್ಪತ್ರೆಯಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿದೆ.
ಶಿಲಾ ಕಾಲೋನಿ ನಿವಾಸಿ ದಿವ್ಯಾ ಸಲವಾಡಿ (29)ಮೃತ ಮಹಿಳೆ ಎಂದು ತಿಳಿದುಬಂದಿದೆ. ಕೃಪಾ ನಗರದ ನಿವಾಸಿ ಆರೋಪಿ ಚರಣ್ನೊಂದಿಗೆ ಸಂಬಂಧ ಹೊಂದಿದ್ದಳು. ಆಕೆ 7 ತಿಂಗಳ ಗರ್ಭಿಣಿಯಾಗಿದ್ದರಿಂದ ಆತನನ್ನು ಮದುವೆಯಾಗುವಂತೆ ಒತ್ತಾಯ ಮಾಡಿದ್ದಾರೆ. ಆದರೆ, ಚರಣ್ ಮದುವೆಯನ್ನು ನಿರಾಕರಿಸಿದ್ದಾನೆ. ಕೋಪಗೊಂಡ ದಿವ್ಯಾ ಬೆಂಡಗೇರಿ ಪೊಲೀಸರಲ್ಲಿ ದೂರು ದಾಖಲಿಸಿದ್ದು, ಕಳೆದ ವಾರ ದೇವಸ್ಥಾನದಲ್ಲಿ ಈ ಇಬ್ಬರು ಮದುವೆ ಮಾಡಿಕೊಂಡಿದ್ದಾರೆ.
ಗರ್ಭಪಾತವಾಗಲು ಚರಣ್ ಕೆಲವು ಬಾರಿ ಮಾತ್ರೆಗಳನ್ನು ಸೇವಿಸಲು ದಿವ್ಯಾಳಿಗೆ ಒತ್ತಾಯ ಮಾಡುತ್ತಿದ್ದ. ತೀವ್ರ ರಕ್ತಸ್ರಾವದಿಂದ ಯುವತಿ ಹಾಗೂ ಮಗು ಮೃತಪಟ್ಟಿದ್ದಾರೆ ಎಂದು ಆಕೆಯ ಪಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಬೆಂಡಗೇರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿ ಪತ್ತೆಗಾಗಿ ಬಲೆಬೀಸಿದ್ದಾರೆ.(ಏಜೆನ್ಸೀಸ್)