300 ಅಡಿ ಬೋರ್​ವೆಲ್​ ಒಳಗೆ ಬಿದ್ದಿದ್ದ ಬಾಲಕಿ ಶವವಾಗಿ ಪತ್ತೆ

Dead Kid
Published on

ಭೋಪಾಲ್: ಮೂರು ದಿನಗಳ ಹಿಂದೆ ಆಟ ಆಡುವ ವೇಳೆ 300 ಅಡಿ ಬೋರ್​ವೆಲ್​ ಒಳಗೆ ಬಿದ್ದಿದ್ದ ಎರಡೂವರೆ ವರ್ಷದ ಬಾಲಕಿ ಸೃಷ್ಟಿ ಮೃತಪಟ್ಟಿದ್ದಾಳ ಎಂದು ತಿಳಿದು ಬಂದಿದೆ.

ಸತತ 50 ಘಂಟೆಗಳ ದುದೀರ್ಘ ಕಾರ್ಯಾಚರಣೆ ನಡೆಸಿದ ಹೊರತೆಗೆದಿರುವ ರಕ್ಷಣಾ ತಂಡದ ಸದಸ್ಯರು ಗುರುವಾರ ಸಂಜೆ 5:30ರ ಸುಮಾರಿಗೆ ಬಾಲಕಿ ಇದ್ದ ಜಾಗವನ್ನು ತಲುಪಲು ಯಶಸ್ವಿಯಾದರು. ಆದರೆ, ಪುಟ್ಟ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಸೇನೆ. NDRF, SDRF, ರೋಬೋಟಿಕ್​ ಯಂತ್ರೋಪಕರಣಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿತ್ತು.

ಬದುಕಿ ಬರಲಿಲ್ಲ ಕಂದಮ್ಮ

ಮಂಗಳವಾರ ಮಧ್ಯಾಹ್ನ 1 ಘಂಟೆ ಸುಮಾರಿಗೆ ಸೆಹೋರ್​ ಜಿಲ್ಲೆಯ ಮುಂಗಾವಲಿ ಗ್ರಾಮದ 300 ಅಡಿ ಬೋರ್​ವೆಲ್​​ ಒಳಗೆ ಬಿದ್ದ ಬಾಲಕಿಯನ್ನು ಗುರುವಾರ ಸಂಜೆ 5:30ರ ಸುಮಾರಿಗೆ ಮೇಲೆತ್ತಲಾಗಿದೆ.

ಸಂಪೂರ್ಣ ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆಯಾದರೂ ಬಾಲಕಿ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೊದಲಿಗೆ 40 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕಿ ಯಂತ್ರೋಪಕರಣಗಳ ಕಂಪನದಿಂದಾಗಿ 100 ಅಡಿಯಷ್ಟು ಕೆಳಕ್ಕೆ ಜಾರಿದ್ದಾಳೆ. ಈ ವೇಳೆ ಉಸಿರಾಡಲು ಸಾಧ್ಯವಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಅಧಿಕಾರಿ ಒಬ್ಬರು ತಿಳಿಸಿದ್ದಾರೆ.

Deceased Body
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net