ಕರ್ನಾಟಕಕ್ಕೆ ಇಂದು ಬರಲಿದೆ 2 ಲಕ್ಷ ಡೋಸ್​ ಕೋವಿಶೀಲ್ಡ್

covishield
Published on

ಬೆಂಗಳೂರು : ಕರ್ನಾಟಕಕ್ಕೆ ಇಂದು ಹೊಸದಾಗಿ 2 ಲಕ್ಷ ಡೋಸ್​ ಕೋವಿಶೀಲ್ಡ್ ಕರೊನಾ ಲಸಿಕೆ ತಲುಪಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಈ ಹೊಸ ದಾಸ್ತಾನಿನಿಂದ ರಾಜ್ಯದಲ್ಲಿ ಮತ್ತೆ ಲಸಿಕಾ ಅಭಿಯಾನವು ಚುರುಕಿನಿಂದ ನಡೆಯುವ ಅಪೇಕ್ಷೆಯಿದೆ ಎಂದಿದ್ದಾರೆ.

ಈವರೆಗೆ ರಾಜ್ಯಕ್ಕೆ​ ಒಟ್ಟು 1,24,20,510 ಡೋಸ್​ ಕರೊನಾ ಲಸಿಕೆ ಲಭಿಸಿದ್ದು, ಇದನ್ನು ಬಳಸಿ, ನಿನ್ನೆ ರಾತ್ರಿ 11.30 ರವರೆಗೆ ಕೋವಿನ್ ಪೋರ್ಟಲ್​ನಿಂದ ಸಂಗ್ರಹಿಸಿದ ಮಾಹಿತಿಯ ಪ್ರಕಾರ, 1,17,99,162 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದೆ.

ರಾಜ್ಯ ಸರ್ಕಾರಕ್ಕೆ ಒಟ್ಟು 1,13,26340 ಲಸಿಕೆ ಡೋಸ್​ಗಳನ್ನು ಕೇಂದ್ರ ಸರ್ಕಾರ ಒದಗಿಸಿದೆ. ಅದರಲ್ಲಿ 1,01,60,060 ಕೋವಿಶೀಲ್ಡ್ ಡೋಸ್​ಗಳಾದರೆ, 11,66,280 ಕೋವಾಕ್ಸಿನ್​ ಡೋಸ್​ಗಳಾಗಿವೆ. ಇದರೊಂದಿಗೆ ರಾಜ್ಯ ಸರ್ಕಾರವು 10,94,170 ಲಸಿಕೆ ಡೋಸ್​ಗಳನ್ನು ಖರೀದಿಸಿದ್ದು, 9,50,000 ಕೋವಿಶೀಲ್ಡ್​ ಮತ್ತು 1,44,170 ಕೋವಾಕ್ಸಿನ್​ ಡೋಸಗಳನ್ನು ಪಡೆದಿದೆ ಎಂದು ಸಚಿವರು ವಿವರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net