16 ಚಿತ್ರಗಳು ಬ್ಯಾಕ್​ ಟು ಬ್ಯಾಕ್​ ಫ್ಲಾಪ್​! ಬಹುನಿರೀಕ್ಷಿತ ಸಿನಿಮಾಗಳ ಸೋಲಿನಿಂದ ನಿರ್ಮಾಪಕರು ಕಂಗಾಲು | Films Flop

Films Flop: ಪ್ರತಿವಾರ ಭಾರತೀಯ ಚಿತ್ರೋದ್ಯಮದಿಂದ ಹಲವಾರು ಸಿನಿಮಾಗಳು ಏಕಕಾಲಕ್ಕೆ ಬೆಳ್ಳಿಪರದೆಗೆ ಎಂಟ್ರಿಕೊಡುತ್ತವೆ. ಅವುಗಳಲ್ಲಿ ಕೆಲವೇ ಕೆಲವು ಸೂಪರ್ ಡೂಪರ್ ಹಿಟ್​ ಸಾಲಿಗೆ ಸೇರಿ, ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತವೆ. ಜನರ ಮನವನ್ನು ಗೆಲ್ಲುವುದರ ಜತೆಗೆ ನಿರ್ಮಾಪಕರ ಜೇಬನ್ನು ತುಂಬಿಸುವ ಕೆಲಸ ಆಯಾ ಹಿಟ್​ ಚಿತ್ರಗಳು ಮಾಡುತ್ತವೆ. ಆದರೆ, ನಿರೀಕ್ಷಿತ ಚಿತ್ರಗಳೇ ತಲೆಕೆಳಗಾಗಿದಾಗ ನಿರ್ಮಾಪಕರ ನಿದ್ದೆ ಕೆಡುತ್ತದೆ. ಸದ್ಯ ಇಂತಹ ಪರಿಸ್ಥಿತಿಯನ್ನು ಮಾಲಿವುಡ್​ ಅನುಭವಿಸುತ್ತಿದೆ.

ಇದನ್ನೂ ಓದಿ: ಬಿಲ್ಡರ್ ಹೆಸರಿಗೆ ಸ್ವತ್ತು ನೋಂದಣಿ: ಕಂದಾಯ ಸಚಿವ, ಬಿಡಿಎ ಆಯುಕ್ತರಿಗೆ ದೂರು

ಕಳೆದ ವರ್ಷ ಮಲಯಾಳಂ ಚಿತ್ರೋದ್ಯಮವು ವಿವಿಧ ಪ್ರಕಾರಗಳಲ್ಲಿ ಸತತವಾಗಿ ಬ್ಲಾಕ್‌ಬಸ್ಟರ್‌ಗಳೊಂದಿಗೆ ಭಾರತೀಯ ಚಿತ್ರರಂಗವನ್ನು ಬೆರಗುಗೊಳಿಸಿ, ಬಾಕ್ಸ್ ಆಫೀಸ್​ ಕಲೆಕ್ಷನ್‌ನಲ್ಲಿ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಿತು. ಇಷ್ಟಾದರೂ ಕೆಲವು ಬಹುನಿರೀಕ್ಷಿತ ಚಿತ್ರಗಳು ಸಾಲು ಸಾಲಾಗಿ ಸೋಲು ಕಂಡಿದ್ದು, ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನೇ ಉಂಟುಮಾಡಿತು. ಇದು ಆಯಾ ಚಿತ್ರದ ನಿರ್ಮಾಪಕರಿಗೂ ದೊಡ್ಡ ತಲೆನೋವಾಗಿ ಕಾಡಿತು.

ಕಳೆದ ವರ್ಷ ‘ಮಂಜುಮ್ಮೆಲ್​ ಬಾಯ್ಸ್’​, ‘ಆಡುಜೀವಿತಂ’, ‘ಪ್ರೇಮಲು’ ಮತ್ತು ‘ಆವೇಶಂ’ ಚಿತ್ರಗಳು ಭಾರತೀಯ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡುವುದರ ಜತೆಗೆ ಪ್ರೇಕ್ಷಕರಿಂದ ನಿರೀಕ್ಷೆಗೂ ಮೀರಿದ ಮೆಚ್ಚುಗೆ, ಪ್ರಶಂಸೆಗಳನ್ನು ಪಡೆಯಿತು. ಇದು ಆರಂಭದಲ್ಲಿ ಖುಷಿ ನೀಡಿದ್ದೇ ಆದರೂ ಕೇವಲ ಬೆರಳೆಣಿಕೆಯಷ್ಟು ಚಿತ್ರಗಳು ಮಾತ್ರ ಉತ್ತಮ ಗಳಿಕೆ ಕಂಡು, ಉದ್ಯಮಕ್ಕೆ ಲಾಭ, ಹೆಸರು ತಂದುಕೊಟ್ಟಿತು. ಇದು ಚಿತ್ರರಂಗವನ್ನು ಮತ್ತಷ್ಟು ಸಂಕಷ್ಟ ಮತ್ತು ಬೇಸರಕ್ಕೆ ದೂಡಿತು.

ಇದನ್ನೂ ಓದಿ: ಕೋಲಾರ ಚಿಕ್ಕಬಳ್ಳಾಪುರ ಬಯಲು ಸೀಮೆ ಜಿಲ್ಲೆಗಳಿಗೆ ಕೃಷ್ಣಾ ನದಿಯ ನೀರು ತರುವ ಕೆಲಸ ಕೇಂದ್ರ ಮಾಡಬೇಕೆಂದು ಸಂಸದ ಎಂ ಮಲ್ಲೇಶ್‌ಬಾಬು ಒತ್ತಾಯ

ಇನ್ನು ಈ ವರ್ಷದ ಆರಂಭದಲ್ಲಿಯೂ ಮಲಯಾಳಂ ಉದ್ಯಮಕ್ಕೆ ದೊಡ್ಡ ಹಿನ್ನಡೆ ಶುರುವಾಗಿದೆ. ವರದಿಗಳ ಪ್ರಕಾರ, ಕಳೆದ ತಿಂಗಳು ಫೆಬ್ರವರಿಯಲ್ಲಿ ತೆರೆಕಂಡ 17 ಮಲಯಾಳಂ ಚಿತ್ರಗಳಲ್ಲಿ, ‘ಆಫೀಸರ್ ಆನ್ ಡ್ಯೂಟಿ’ ಎಂಬ ಒಂದೇ ಒಂದು ಚಿತ್ರ ಮಾತ್ರ ಯಶಸ್ಸಿನ ಹಾದಿ ಹಿಡಿದಿದೆ. ಇನ್ನುಳಿದ 16 ಚಿತ್ರಗಳು ಹೀನಾಯ ಸೋಲನ್ನು ಅನುಭವಿಸಿವೆ. ಹೆಚ್ಚುವರಿಯಾಗಿ, ಈ 17 ಸಿನಿಮಾಗಳ ಒಟ್ಟು ಬಜೆಟ್ ಸುಮಾರು 73 ಕೋಟಿಗಳಷ್ಟಿದ್ದು, ಅವುಗಳ ಥಿಯೇಟ್ರಿಕಲ್ ಆದಾಯ ಕೇವಲ 23.5 ಕೋಟಿ ರೂ. ಇದೆ ಎಂದು ವರದಿ ಉಲ್ಲೇಖಿಸಿದೆ.

ಈ ಅಂಕಿಅಂಶಗಳು ಕೇರಳ ಚಲನಚಿತ್ರ ನಿರ್ಮಾಣ ಸಂಸ್ಥೆಗಳನ್ನು ಭಾರೀ ಆಘಾತಕ್ಕೆ ದೂಡಿದೆ. ಇದರಿಂದ ಮಾಲಿವುಡ್​ ಈಗ ತೀವ್ರ ಬಿಕ್ಕಟ್ಟಿಗೆ ಸಿಲುಕಿದೆ ಮತ್ತು ಮುಂಬರುವ ಚಲನಚಿತ್ರಗಳ ಮೇಲೆ ದುಪ್ಪಟ್ಟು ನಿರೀಕ್ಷೆಯನ್ನು ಇಟ್ಟುಕೊಳ್ಳುವ ಪರಿಸ್ಥಿತಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ರಿಲೀಸ್ ಆಗಲಿರುವ ಚಿತ್ರಗಳು ಬಾಕ್ಸ್ ಆಫೀಸ್ ಯಶಸ್ಸಿಗೆ ಶ್ರಮಿಸುತ್ತಿವೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾರ ತಜ್ಞರು, ಇದು ಫೆಬ್ರವರಿಗೆ ಕೇವಲ ಒಂದು ವರದಿಯಾಗಿದೆ. ಮಾರ್ಚ್‌ನಿಂದ ಈ ಪರಿಸ್ಥಿತಿ ಸುಧಾರಿಸಬಹುದು ಎಂದು ಭರವಸೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

 

RCB, ಮುಂಬೈ ಇಂಡಿಯನ್ಸ್​​! ಐಪಿಎಲ್​ನಲ್ಲಿ ಇಬ್ಬರು ದಿಗ್ಗಜರ ಕಮಾಲ್ ಖಚಿತ: ಮಾಜಿ ಕ್ರಿಕೆಟಿಗ ಭರವಸೆ | IPL 2025

Share This Article

ಕನಸಿನಲ್ಲಿ ಈ ಮೂರು ಪಕ್ಷಿಗಳು ಕಂಡ್ರೆ ಲಾಟರಿ ಹೊಡೆದಂತೆ! Lucky Birds ನೀಡುವ ಸುಳಿವೇನು..?

Lucky Birds : ಸಾಮಾನ್ಯವಾಗಿ ನಿದ್ದೆಯಲ್ಲಿ ಕನಸು ಕಾಣೋದು ಸಹಜ. ಈ ಕನಸುಗಳ ಮೂಲಕ ಪ್ರಕೃತಿ…

ಯಾವ ಕಾರಣಕ್ಕೂ ಮಾವಿನ ವಾಟೆ ಎಸೆಯಬೇಡಿ…ಅದರ ಪ್ರಯೋಜನಗಳ ಬಗ್ಗೆ ತಿಳಿದ್ರೆ ನೀವು ಖಂಡಿತ ಅಚ್ಚರಿಪಡ್ತೀರಾ! Mango Kernels

Mango Kernels : ಮಾವಿನ ಹಣ್ಣನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ರುಚಿಗೆ ಮಾತ್ರವಲ್ಲ, ಮಾವಿನ…

ಪ್ಲಾಸ್ಟಿಕ್ ಬಾಕ್ಸ್​​ನಲ್ಲಿ ಬಿಸಿ ಅನ್ನ ಇಡುವ ಅಭ್ಯಾಸವಿದೆಯೇ? ಆರೋಗ್ಯದ ಬಗ್ಗೆ ಇರಲಿ ಎಚ್ಚರ.. hot rice in plastic boxes

hot rice in plastic boxes: ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗುತ್ತಿಲ್ಲ. ಪ್ಲಾಸ್ಟಿಕ್ ಪಾತ್ರೆಗಳನ್ನು ಬಳಸುವುದು ಹಾನಿಕಾರಕ,…