

ಕೊಯಮತ್ತೂರು: ಭಾರಿ ಉದ್ದದ ಕಾಳಿಂಗ ಸರ್ಪವೊಂದನ್ನು ನಿನ್ನೆಯಷ್ಟೇ (ಶನಿವಾರ) ತಮಿಳುನಾಡಿನ ಕೊಯಮತ್ತೂರು ಸಮೀಪದ ಗ್ರಾಮವೊಂದರಲ್ಲಿ ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ.
ಕಾಳಿಂಗ ಸರ್ಪ ಬರೋಬ್ಬರಿ 15 ಅಡಿ ಉದ್ದವಿದ್ದು, ಕೊಯಮತ್ತೂರಿನ ಉಪನಗರ ಥೋಂಡಮತ್ತೂರಿನ ನರಸೀಪುರಂ ಗ್ರಾಮದಲ್ಲಿ ಸರೆಹಿಡಿಯಲಾಗಿದೆ. ಈ ಗ್ರಾಮವು ಪಶ್ಚಿಮ ಘಟ್ಟಗಳ ಸರಣಿಯ ವೆಲಿಯಂಗಿರಿ ಪರ್ವತದ ತಪ್ಪಲಿನಲ್ಲಿ ಕಂಡುಬರುತ್ತದೆ.
ಪಶ್ಚಿಮ ಘಟ್ಟ ಜೀವವೈವಿಧ್ಯತೆಯ ತಾಣವಾಗಿದ್ದು, ವಿಶ್ವದ ಅತ್ಯಂತ ಉದ್ದದ ವಿಷಕಾರಿ ಕಾಳಿಂಗ ಸರ್ಪದ ತವರಾಗಿದೆ. ಹಾವನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು ಸುರಕ್ಷಿತವಾಗಿ ಸಮೀಪದ ಸಿರುವಾಣಿ ಅರಣ್ಯಕ್ಕೆ ಬಿಟ್ಟರು. (ಏಜೆನ್ಸೀಸ್)