VIDEO | ರಾಜಧಾನಿಯಲ್ಲಿ ಅರಳಿತು 100 ಅಡಿ ಎತ್ತರದ ಕ್ರಿಸ್ಮಸ್ ಟ್ರೀ !

ವಿಜಯವಾಣಿ - 2023-12-21T191259.861
Published on

ಬೆಂಗಳೂರು: ವಿಶ್ವದಾದ್ಯಂತ ಡಿಸೆಂಬರ್​ 25 ರಂದು ಕ್ರಿಸ್​ಮಸ್​ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವರ್ಷದ ಕೊನೆ ತಿಂಗಳು ಸಮೀಪಿಸುತ್ತಿದ್ದಂತೆ, ಈ ತಿಂಗಳ ಮೊದಲ ದಿನದಿಂದಲೇ ಹಬ್ಬದ ಸಡಗರ ಜನರಲ್ಲಿ ಮೂಡಿರುತ್ತದೆ. ಈ ಫೆಸ್ಟಿವಲ್ ಹಿನ್ನೆಲೆ ಮನೆಯನ್ನು ವಿವಿಧ ವಸ್ತುಗಳಿಂದ ಅಲಂಕರಿಸುವ ಅನೇಕರು, ಹಬ್ಬಕ್ಕೆ ಆಗಮಿಸುವ ಅತಿಥಿಗಳ ಗಮನ ಸೆಳೆಯುತ್ತಾರೆ. ಇದೀಗ ಕ್ರಿಸ್ಮಸ್​ ಸಂಭ್ರಮದ ಛಾಯೇ ರಾಜ್ಯ ರಾಜಧಾನಿಯಲ್ಲಿ ಜೋರಾಗಿಯೇ ಇದ್ದು, 100 ಅಡಿ ಎತ್ತರದ ಕ್ರಿಸ್​ಮಸ್​ ಟ್ರೀ ತಲೆ ಎತ್ತಿದೆ.

ಜನರಲ್ಲಿ ಸದ್ಯ ಕ್ರಿಸ್​ಮಸ್​ ಸಮಯ ಮತ್ತು ಹಬ್ಬದ ಮೂಡ್ ಶುರುವಾಗಿದ್ದು, ಈ ಸಮಯದಲ್ಲಿ ರಜೆಯಿರುವ ಕಾರಣ ಹಲವರು ನಗರದ ಮಾಲ್​ ಸೇರಿದಂತೆ ಇತರೆ ತಾಣಗಳಿಗೆ ಭೇಟಿ ನೀಡುತ್ತಾರೆ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಫೀನಿಕ್ಸ್​ ಮಾಲ್​ ಆಫ್​ ಏಷ್ಯಾ ಇದೀಗ ಮಾಲ್​ನ ಮುಂಭಾಗದಲ್ಲಿ 100 ಅಡಿ ಎತ್ತರದ ಬೃಹತ್​ ಕ್ರಿಸ್ಮಸ್​ ಟ್ರೀ ಅನ್ನು ಸ್ಥಾಪಿಸಿದೆ.

ಈ 100 ಅಡಿ ಎತ್ತರದ ಕ್ರಿಸ್​ಮಸ್​ ಟ್ರೀ ದೃಶ್ಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಅನೇಕ ನೆಟ್ಟಿಗರನ್ನು ಸೆಳೆದಿದ್ದು, ಮಾಲ್​ನತ್ತ ಭೇಟಿ ನೀಡುವಂತೆ ಆಹ್ವಾನಿಸುತ್ತಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net