Deadly Plane Crash: ಜೂ.12ರ ಮಧ್ಯಾಹ್ನ 1:45ಕ್ಕೆ ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ AI-171 ಏರ್ ಇಂಡಿಯಾ ವಿಮಾನವು ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಭೀಕರ ಅಪಘಾತಕ್ಕೀಡಾಗಿದೆ. ಮೇಘ್ನಿನಗರ್‌ನ ಘೇಡಾಸರ್ ಕ್ಯಾಂಪ್ ಪ್ರದೇಶದ ವಸತಿ ಪ್ರದೇಶದಲ್ಲಿದ್ದ ವೈದ್ಯಕೀಯ ಕಾಲೇಜಿನ ಕಟ್ಟಡಕ್ಕೆ ಡಿಕ್ಕಿಯಾದ ಪರಿಣಾಮ ದುರಂತದಲ್ಲಿ 241 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, 5ಕ್ಕೂ ಹೆಚ್ಚು ಮೆಡಿಕಲ್ ವಿದ್ಯಾರ್ಥಿಗಳೂ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ಶಿಕ್ಷಣದಿಂದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಹಿರಿಯ ಸಿವಿಲ್ ನ್ಯಾಯಾಧೀಶೆ ಜೈಬುನ್ನೀಸಾ ಅಭಿಮತ
ಅತ್ಯಂತ ಭೀಕರ!
ಭಾರತೀಯ ವಿಮಾನಯಾನ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ದುರಂತ ಎಂದು ಪರಿಗಣಿಸಲಾಗಿದೆ. ಈ ಹಿಂದೆಯೂ ಇಂತಹ ಹಲವಾರು ವಿಮಾನ ಅಪಘಾತಗಳು ಸಂಭವಿಸಿವೆ. ಆದರೆ, ಸಾವಿನ ಸಂಖ್ಯೆಯಲ್ಲಿ ಅಹಮದಾಬಾದ್ ವಿಮಾನ ದುರಂತ ಮರೆಯಲಾಗದ ಘಟನೆಯಾಗಿ ಉಳಿದಿದೆ. ಹಾಗಿದ್ದರೆ, ಭೀಕರತೆಗೆ ಸಾಕ್ಷಿಯಾದ ಹಾಗೂ ಸಾವಿರಾರೂ ಪ್ರಯಾಣಿಕರ ಪ್ರಾಣ ಕಸಿದುಕೊಂಡ ವಿಮಾನ ದುರಂತ ಘಟನೆಗಳು ಯಾವೆಲ್ಲ? ಎಂಬುದರ ಮಾಹಿತಿ ಹೀಗಿದೆ ಗಮನಿಸಿ.
1. ಜನವರಿ 1, 1978: ಮುಂಬೈ
ಏರ್ ಇಂಡಿಯಾ ವಿಮಾನ 855ರ ಬೋಯಿಂಗ್ 747 ಮುಂಬೈನಿಂದ ಟೇಕಾಫ್ ಆದ ಬಳಿಕ ನೇರವಾಗಿ ಅರೇಬಿಯನ್ ಸಮುದ್ರಕ್ಕೆ ಅಪ್ಪಳಿಸಿತು. ಈ ದುರಂತದಲ್ಲಿ ವಿಮಾನದಲ್ಲಿದ್ದ 213 ಪ್ರಯಾಣಿಕರು ಕೊನೆಯುಸಿರೆಳೆದರು.
ಇದನ್ನೂ ಓದಿ: ಬಾಲ ಕಾರ್ಮಿಕ ಮುಕ್ತ ಜಿಲ್ಲೆಗೆ ಸಹಕರಿಸಿ: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಎಡಿಸಿ ಡಾ.ನಾಗರಾಜ ಎಲ್. ಮನವಿ
2. ಜೂನ್ 21, 1982: ಮುಂಬೈ
ಏರ್ ಇಂಡಿಯಾ ವಿಮಾನ 403 ಬಾಂಬೆ ವಿಮಾನ ನಿಲ್ದಾಣದಲ್ಲಿ ಪತನಗೊಂಡ ಹಿನ್ನಲೆ ಘಟನೆಯಲ್ಲಿ 17 ಜನರು ಮೃತಪಟ್ಟರು.
3. ಅಕ್ಟೋಬರ್ 19, 1988: ಅಹಮದಾಬಾದ್
ಇಂಡಿಯನ್ ಏರ್ಲೈನ್ಸ್ ವಿಮಾನ 113 ಅಹಮದಾಬಾದ್ನಲ್ಲಿ ಅಪಘಾತಕ್ಕೀಡಾದ ಸಮಯದಲ್ಲಿ 133 ಪ್ರಯಾಣಿಕರು ದಾರುಣ ಅಂತ್ಯ ಕಂಡರು.
4. ಫೆಬ್ರವರಿ 14, 1990: ಬೆಂಗಳೂರು
ಇಂಡಿಯನ್ ಏರ್ಲೈನ್ಸ್ ವಿಮಾನ 605, ಏರ್ಬಸ್ A320, ಬೆಂಗಳೂರಿಗೆ ಸಮೀಪಿಸುತ್ತಿದ್ದಾಗ ಅಪಘಾತಕ್ಕೀಡಾದ ಹಿನ್ನಲೆ 92 ಪ್ರಯಾಣಿಕರು ಉಸಿರು ಚೆಲ್ಲಿದರು.
ಇದನ್ನೂ ಓದಿ: ಬಾಲ ಕಾರ್ಮಿಕ ಮುಕ್ತ ಜಿಲ್ಲೆಗೆ ಸಹಕರಿಸಿ: ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯಲ್ಲಿ ಎಡಿಸಿ ಡಾ.ನಾಗರಾಜ ಎಲ್. ಮನವಿ
5. ಆಗಸ್ಟ್ 16, 1991: ಇಂಫಾಲ್
ಇಂಡಿಯನ್ ಏರ್ಲೈನ್ಸ್ ಫ್ಲೈಟ್ 257 ಇಂಫಾಲ್ ಬಳಿ ಪತನಗೊಂಡ ಕಾರಣ ವಿಮಾನದಲ್ಲಿದ್ದ ಎಲ್ಲಾ 69 ಜನರು ದುರಂತ ಅಂತ್ಯ ಕಂಡರು.
6. ಏಪ್ರಿಲ್ 26, 1993: ಔರಂಗಾಬಾದ್
ಇಂಡಿಯನ್ ಏರ್ಲೈನ್ಸ್ ಫ್ಲೈಟ್ 491, ಬೋಯಿಂಗ್ 737, ಔರಂಗಾಬಾದ್ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಯಿತು. ಟ್ರಕ್ ಮತ್ತು ವಿದ್ಯುತ್ ತಂತಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ 55 ಪ್ರಯಾಣಿಕರು ದುರಂತದಲ್ಲಿ ಮೃತಪಟ್ಟರು.
7. ನವೆಂಬರ್.12, 1996: ದೆಹಲಿ
ಸೌದಿ ಅರೇಬಿಯನ್ ಏರ್ಲೈನ್ಸ್ ಬೋಯಿಂಗ್ 747 ಮತ್ತು ಕಝಾಕಿಸ್ತಾನ್ ಏರ್ಲೈನ್ಸ್ ಇಲ್ಯುಶಿನ್ ಇಲ್-76 ವಿಮಾನಗಳು ದೆಹಲಿ ಬಳಿ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಿಮಾನಗಳಲ್ಲಿದ್ದ 349 ಪ್ರಯಾಣಿಕರು ಬೆಂಕಿಗೆ ಆಹುತಿಯಾದರು. ಪೈಲಟ್ ದೋಷ ಮತ್ತು ವಾಯು ಸಂಚಾರ ನಿಯಂತ್ರಣದಲ್ಲಿ ಆದ ತಾಂತ್ರಿಕ ಕೊರತೆಯೇ ಈ ಘಟನೆಗೆ ಕಾರಣ.
8. ಜುಲೈ 17, 2000: ಪಾಟ್ನಾ
ಜುಲೈ 17, 2000ರಲ್ಲಿ ಅಲೈಯನ್ಸ್ ಏರ್ ಫ್ಲೈಟ್ 7412ರ ಬೋಯಿಂಗ್ 737 ವಿಮಾನ ಪಾಟ್ನಾ ಏರ್ಪೋರ್ಟ್ಗೆ ಬಂದಿಳಿಯುವಾಗ ಪತನಗೊಂಡು 60ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು. ಪೈಲಟ್ ದೋಷದಿಂದಾಗಿ ವಿಮಾನ ನಿಯಂತ್ರಣ ತಪ್ಪಿದ್ದೇ ಭೀಕರ ದುರಂತಕ್ಕೆ ಕಾರಣ.
9. ಮೇ 22, 2010: ಮಂಗಳೂರು
ಮೇ.22, 2010ರಲ್ಲಿ ಮಂಗಳೂರು ವಿಮಾನ ಅಪಘಾತ ಹಲವರ ನಿದ್ದೆಗೆಡಿಸಿತ್ತು. ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 812 ಮಂಗಳೂರಿನಲ್ಲಿ ರನ್‌ವೇಯಿಂದ ಜಾರಿ, ಕಂದಕಕ್ಕೆ ಉರುಳಿ ಎರಡು ಭಾಗವಾಯಿತು. ಈ ದುರಂತದಲ್ಲಿ ಬರೋಬ್ಬರಿ 158 ಜನರು ಸಾವಿಗೀಡಾದರು.
10. ಆಗಸ್ಟ್ 7, 2020, ಕ್ಯಾಲಿಕಟ್
ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ 1344 ಕ್ಯಾಲಿಕಟ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಡಿಂಗ್ ವೇಳೆ ಅವಘಡಕ್ಕೆ ತುತ್ತಾದ ಹಿನ್ನಲೆ 21 ಪ್ರಯಾಣಿಕರು ಮೃತಪಟ್ಟರು. ರನ್‌ವೇಯಲ್ಲಿ ಜಾರಿದ ಕಾರಣ ವಿಮಾನ ಎರಡು ತುಂಡಾಗಿ ಮುರಿದು ಬಿದ್ದಿತು. ಇದರ ದೃಶ್ಯಗಳು ಅಂದಿನ ಪತ್ರಿಕೆಗಳಲ್ಲಿ ವರದಿಯಾಗಿವೆ,(ಏಜೆನ್ಸೀಸ್).