ಸೆನ್ಸೆಕ್ಸ್ ಭಾರಿ ಕುಸಿತ- ಷೇರು ಹೂಡಿಕೆದಾರರಿಗೆ 10 ಲಕ್ಷ ಕೋಟಿ ರೂ. ನಷ್ಟ!

ಮುಂಬೈ: ಷೇರುಪೇಟೆಯಲ್ಲಿ ಸೋಮವಾರ ಭಾರಿ ಕುಸಿತ ಕಂಡಿದೆ. ವಹಿವಾಟು ಆರಂಭವಾದ ಸ್ವಲ್ಪ ಹೊತ್ತಿನಲ್ಲೇ ಸೆನ್ಸೆಕ್ಸ್ 2,400 ಅಂಶಗಳಷ್ಟು ಕುಸಿಯಿತು. ಇದರಿಂದಾಗಿ ಹೂಡಿಕೆದಾರರ 10 ಲಕ್ಷ ಕೋಟಿ ರೂ.ಗಳ ಸಂಪತ್ತು ಕ್ಷಣಾರ್ಧದಲ್ಲೇ ಮಂಜಿನಂತೆ ಕರಗಿ ಆವಿಯಾಗಿದೆ. ಆ ನಂತರ ಮಾರುಕಟ್ಟೆಗಳು ಕೊಂಚ ಚೇತರಿಸಿಕೊಂಡರೂ ಭಾರಿ ನಷ್ಟದೊಂದಿಗೆ ವಹಿವಾಟು ನಡೆಸುತ್ತಿವೆ.

ಇದನ್ನೂ ಓದಿ: ಭಾರತದ ಬಲಿಷ್ಠ ಬ್ಯಾಟ್ಸ್​ಮನ್​ಗಳಿಗೆ ಭಯ ಹುಟ್ಟಿಸಿದ ಶ್ರೀಲಂಕಾದ ಸ್ಪಿನರ್​; ಗೆಲುವಿನ ಬಳಿಕ ಹೇಳಿದ್ದಿಷ್ಟು

ಅಮೆರಿಕಾದಲ್ಲಿ ಆರ್ಥಿಕ ಹಿಂಜರಿತ ಇದ್ದುದರಿಂದ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ನಕಾರಾತ್ಮಕ ಪರಿಸ್ಥಿತಿಗಳು ಕಂಡು ಬಂದವು. ಇದರ ಪರಿಣಾಮ ಭಾರತದ ಮಾರುಕಟ್ಟೆಗಳ ಮೇಲಾಯಿತು. ಸೋಮವಾರದ ವಹಿವಾಟು ಆರಂಭವಾದ ಕೆಲವೇ ಕ್ಷಣಗಳಲ್ಲಿ ಹೂಡಿಕೆದಾರರು ಮಾರಾಟಕ್ಕೆ ಮುಂದಾಗಿದ್ದರಿಂದ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಒಂದು ಹಂತದಲ್ಲಿ 2,400 ಅಂಕಗಳ ನಷ್ಟಕ್ಕೆ ಗುರಿಯಾಯಿತು. ನಿಫ್ಟಿ 50 ಸೂಚ್ಯಂಕವು ಕನಿಷ್ಠ 24,300 ಕ್ಕೆ ತಲುಪಿದೆ. ಇದರ ಪರಿಣಾಮವಾಗಿ, ಬಿಎಸ್‌ಇಯಲ್ಲಿ ಹೂಡಿಕೆದಾರರ ಸಂಪತ್ತು ಎಂದು ಪರಿಗಣಿಸಲಾದ ಕಂಪನಿಗಳ ಮಾರುಕಟ್ಟೆ ಮೌಲ್ಯವು 10.24 ಲಕ್ಷ ಕೋಟಿ ರೂ.ಗಳು ನಷ್ಟದ ಪಾಲಾಯಿತು. ಬಳಿಕ ಭಾರಿ ನಷ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಮಧ್ಯಾಹ್ನ 12ರ ವೇಳೆಗೆ ಸೆನ್ಸೆಕ್ಸ್ ಸೂಚ್ಯಂಕವು 1852 ಪಾಯಿಂಟ್‌ಗಳ ನಷ್ಟದೊಂದಿಗೆ 79, 129 ಮಾರ್ಕ್‌ನಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ 50 ಸೂಚ್ಯಂಕ 555 ಅಂಕ ಕಳೆದುಕೊಂಡು 24,162ರಲ್ಲಿ ವಹಿವಾಟು ನಡೆಸುತ್ತಿದೆ. ಟಾಟಾ ಮೋಟಾರ್ಸ್, ಒಎನ್‌ಜಿಸಿ, ಹಿಂಡಾಲ್ಕೊ, ದಿವಿಸ್ ಲ್ಯಾಬ್ಸ್ ಮತ್ತು ಟಾಟಾ ಸ್ಟೀಲ್‌ನಂತಹ ಐಕಾನಿಕ್ ಕಂಪನಿಗಳ ಷೇರುಗಳು ಸಹ ಭಾರಿ ನಷ್ಟಕ್ಕೆ ಗುರಿಯಾದವು. ಇಂತಹ ಅನಿಶ್ಚಿತ ಪರಿಸ್ಥಿತಿಯಲ್ಲೂ ಎಚ್‌ಯುಎಲ್, ಸನ್ ಫಾರ್ಮಾ, ಬ್ರಿಟಾನಿಯಾ ಮತ್ತು ನೆಸ್ಲೆ ಷೇರುಗಳು ಲಾಭದಲ್ಲಿ ವಹಿವಾಟಾಗುತ್ತಿವೆ.

ಅಮೆರಿಕಾದ ಆರ್ಥಿಕ ಕುಸಿತ, ನಿರುದ್ಯೋಗ ದರ ಶೇ.4.3 ತಲುಪಿರುವುದು, ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಬ್ಯಾಂಕ್ ಆಫ್ ಜಪಾನ್ ಬಡ್ಡಿದರವನ್ನು ಶೇಕಡಾ 0.25 ರಷ್ಟು ಹೆಚ್ಚಿಸಿದೆ. ಬಾಂಡ್‌ಗಳ ಖರೀದಿ ಕಡಿಮೆಯಾಗಿದೆ. ಇದು ಯುಎಸ್ ಟೆಕ್ ಷೇರುಗಳಲ್ಲಿ ಖರೀದಿಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಾರೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಕವಿದಿರುವುದು, ಮಾರುಕಟ್ಟೆ ಕುಸಿತಕ್ಕೆ ಮತ್ತೊಂದು ಕಾರಣವಾಗಿದೆ. ಕಳೆದ ವಾರ, ಬಫೆಟ್‌ನ ಸೂಚಕ(ಜಿಡಿಪಿ)ಅನುಪಾತಕ್ಕೆ ಭಾರತದ ಮಾರುಕಟ್ಟೆ ಬಂಡವಾಳೀಕರಣವು 150 ಪ್ರತಿಶತವನ್ನು ದಾಟಿದೆ. ಇದು ಕೂಡ ಒಂದು ಕಾರಣ ಎನ್ನುತ್ತವೆ ಮಾರುಕಟ್ಟೆಯ ಮೂಲಗಳು.

ಸೈಬರ್ ವಂಚಕರಿಂದ ಮುಂಬೈನವರು ಕಳೆದುಕೊಂಡಿದ್ದು ಬರೋಬ್ಬರಿ 650 ಕೋಟಿ!

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…