ಮಕ್ಕಳಲ್ಲಿ ಕನ್ನಡ ಓದುವ ಹವ್ಯಾಸ ಬೆಳೆಸಿ

9 RPT 1
ರಿಪ್ಪನ್‌ಪೇಟೆಯಲ್ಲಿ ಕಸ್ತೂರಿ ಕನ್ನಡ ಸಂಘ, ಪುನಿತ್ ರಾಜ್‌ಕುಮಾರ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಸಾಹಿತಿ ಅ.ಹ.ಪಾಟೀಲ ಉದ್ಘಾಟಿಸಿದರು. ಪ್ರವೀಣ್, ಧನಲಕ್ಷ್ಮೀ, ಸುಧೀಂದ್ರ ಪೂಜಾರಿ, ಗುರಣ್ಣ ಹೆಬ್ಬಾಳ್ ಇತರರಿದ್ದರು.
Published on

ರಿಪ್ಪನ್‌ಪೇಟೆ: ಕರ್ನಾಟಕ ಏಕೀಕರಣದ ಮೂಲಸತ್ವ ಅರಿಯುವ ಜತೆಗೆ ರಾಜ್ಯೋತ್ಸವ ಆಚರಿಸಿ ನುಡಿ ಕಟ್ಟುವ ಕೆಲಸ ಮಾಡಬೇಕು ಎಂದು ಸಾಹಿತಿ ಹ.ಅ.ಪಾಟೀಲ ಹೇಳಿದರು.

ಪಟ್ಟಣದ ಕಸ್ತೂರಿ ಕನ್ನಡ ಸಂಘ, ಪುನಿತ್ ರಾಜ್‌ಕುಮಾರ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಕನ್ನಡ ಓದುವ ಅಭ್ಯಾಸ ಬೆಳೆಸಬೇಕು. ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳನ್ನು ಕಡ್ಡಾಯವಾಗಿ ಖರೀದಿಸಿ ಓದಿದರೆ ಕನ್ನಡ ಜ್ಞಾನಾರ್ಜನೆ ಜತೆಗೆ ದಿನಚರಿ ಅರಿಯುವಂತಾಗುತ್ತದೆ ಎಂದು ತಿಳಿಸಿದರು.

ಕನ್ನಡ ಕಲಿಕೆ ನಮ್ಮ ಮೊದಲ ಆದ್ಯತೆ

ಕನ್ನಡ ಕಲಿಕೆ ನಮ್ಮ ಮೊದಲ ಆದ್ಯತೆಯಾಗಬೇಕು. ನೆರೆಹೊರೆಯವರ ಜತೆ ಕನ್ನಡಿಗರು ಕನ್ನಡತನ ಕಾಯ್ದುಕೊಳ್ಳಬೇಕು. ಕನ್ನಡ ಭಾಷೆ ಉಳಿಸಿ ಬೆಳೆಸಬೇಕು ಎಂದರು. ರಾಜ್ಯ ಮಟ್ಟದ ಉತ್ತಮ ಉಪನ್ಯಾಸ ಪ್ರಶಸ್ತಿ ಪುರಸ್ಕೃತ ವಾಸುದೇವ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಸಿದ್ಧಿವಿನಾಯಕ ದೇವಸ್ಥಾನದಿಂದ ಮಹಿಳೆಯರ ಪೂರ್ಣಕುಂಭ ಸ್ವಾಗತ, ಭಜನೆ, ಡೊಳ್ಳುಕುಣಿತ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಮಕ್ಕಳು ವಿವಿಧ ವೇಷಭೂಷಣಗಳೊಂದಿಗೆ ಭುವನೇಶ್ವರಿ ಮೆರವಣಿಗೆಯಲ್ಲಿ ಸಾಗಿದರು.

ಸಂಘದ ಅಧ್ಯಕ್ಷೆ ಧನಲಕ್ಷ್ಮೀ, ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸಿಪಿಐ ಗುರಣ್ಣ ಹೆಬ್ಬಾಳ್, ಪಿಎಸ್‌ಐ ಪ್ರವೀಣ್, ಮುಖಂಡರಾದ ತ.ಮ.ನರಸಿಂಹ, ಮಂಜುನಾಥ ಕಾಮತ್, ಶ್ರೀಧರ, ಈಶ್ವರಶೆಟ್ಟಿ, ಕೆ.ದೇವರಾಜ, ಹಸನಬ್ಬ, ಮಂಜಪ್ಪ, ಮಹಮ್ಮದ್ ಹುಸೇನ್, ಸದಸ್ಯರಾದ ಮಲ್ಲಿಕಾರ್ಜುನ, ಪ್ರಕಾಶ ಪಾಲೇಖರ್, ಗಣಪತಿ, ಸಾರಾಬಿ, ವಿನೋದ್, ಉಪತಹಸೀಲ್ದಾರ್ ಗೌತಮ್, ಶ್ವೇತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net