

Zodiac Signs: ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.
ಈ ತಿಂಗಳ ಸೆಪ್ಟೆಂಬರ್ನಲ್ಲಿ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅನಿರೀಕ್ಷಿತ ಲಾಭಗಳು ಮತ್ತು ಅನಿರೀಕ್ಷಿತ ಶುಭಗಳು ಇವೆ. ಸೆಪ್ಟೆಂಬರ್ ತಿಂಗಳಲ್ಲಿ ಗ್ರಹಗಳ ಚಲನೆಯ ಆಧಾರದ ಮೇಲೆ ಈ ನಾಲ್ಕು ರಾಶಿಚಕ್ರ ಚಿಹ್ನೆಗಳ ಭವಿಷ್ಯವಾಣಿಗಳು ಇಲ್ಲಿವೆ. ಅವರಿಗೆ ಈ ತಿಂಗಳ ಮಟ್ಟಿಗೆ ಅವರಿಗೆ ಉತ್ತಮ ಹೆಸರು, ಅಪಾರ ಸಂಪತ್ತು ಬರಲಿದೆ. ಯಾವ ರಾಶಿ ಚಕ್ರ ಎಂಬುದು ನೋಡೋಣ..
1.ಮೇಷ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ತಮ್ಮ ಲವ್ನಲ್ಲಿ ಸಕ್ಸಸ್ ಹೊಂದುತ್ತಾರೆ. ಅಲ್ಲದೆ, ಕೆಲಸದಲ್ಲಿ ಅನುಕೂಲದ ಫಲಿತಾಂಶವನ್ನು ಪಡೆಯುತ್ತಾರೆ. ಈ ಹಿಂದಿನ ಎಲ್ಲಾ ನಿರಾಸೆಗಳು ಸಹಜವಾಗಿ ದೂರ ಉಳಿಯಲಿವೆ. ಜೀವನ ಈ ಹಿಂದಿನ ತರವಲ್ಲದೆ ಇದೀಗ ವೇಗ ಪಡೆಯುತ್ತದೆ.
2.ವೃಷಭ
ಈ ರಾಶಿಯಲ್ಲಿ ಹುಟ್ಟಿದವರು ಈ ತಿಂಗಳಲ್ಲಿ ತಮ್ಮ ಸಂಬಂಧಗಳ ಬಗ್ಗೆ ಮರು ಮೌಲ್ಯಮಾಪನ ಮಾಡಬೇಕು. ವೃತ್ತಿಪರ ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ.
3.ಮಿಥುನ
ಈ ತಿಂಗಳಲ್ಲಿ ಈ ರಾಶಿಯವರು ನಕಾರಾತ್ಮಕ ಆಲೋಚನೆಗಳನ್ನು ಬಿಡುವುದು ಒಳಿತು. ಇದು ಒಳ್ಳೆಯ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ. ನೀವು ನಿಮ್ಮ ಖ್ಯಾತಿಗಾಗಿ ಪರಿಶ್ರಮಪಟ್ಟರೆ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಾ.
4.ಕಟಕ
ಈ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳಿಗೆ ಈ ತಿಂಗಳ ದೊಡ್ಡ ಮಟ್ಟದ ಆರ್ಥಿಕ ಲಾಭ ಬರಲಿದೆ. ವ್ಯಾಪಾರ ಕೆಲಸದಲ್ಲಿ ಉತ್ತಮ ಲಾಭ ಬರಲಿದೆ. ಅಲ್ಲದೆ, ಇನಷ್ಟು ನಿಮ್ಮ ವೃತ್ತಿ ಜೀವನದಲ್ಲಿ ಶ್ರಮಿಸಿದ್ರೆ ಸಮಾಜದಲ್ಲಿ ಒಳ್ಳೆಯ ಹೆಸರು ಬರುತ್ತದೆ.(ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.