

ಉತ್ತರಪ್ರದೇಶದ ಬುಲಂದರ್ ಷಾ ನಲ್ಲಿರುವ ಸಣ್ಣ ಅಂಗಡಿ(ಕಿರಾಣಿ) ಮಾಲೀಕನಿಗೆ ಬರೊಬ್ಬರಿ 141 ಕೋಟಿ ರೂ, ತೆರಿಗೆ ನೋಟಿಸ್ ಬಂದಿರುವ ಬಗ್ಗೆ ಸೋಮವಾರ(ಸೆ.1) ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಇನ್ನು ತೆರಿಗೆ ನೋಟಿಸ್ ಪಡೆದ ಸ್ವೀಕರಿಸಿದ ಬಳಿಕ ಅಂಗಡಿ ಮಾಲೀಕ ಸುಧೀರ್ ದಿಗ್ಭ್ರಮೆಗೊಂಡಿದ್ದಾನೆ.
ಪಿಟಿಐ ವರದಿ ಪ್ರಕಾರ, ದೆಹಲಿಯಲ್ಲಿ ಆರು ಕಂಪನಿಗಳನ್ನು ಸ್ಥಾಪಿಸಲು ನನ್ನ ಪ್ಯಾನ್ ಕಾರ್ಡ್(PAN) ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಮಾಲೀಕ ಸುಧೀರ್ ಆರೋಪಿಸಿದ್ದಾರೆ.
ಖುರ್ಜಾದ ನಯಗಂಜ್ ಪ್ರದೇಶದಲ್ಲಿ ತಮ್ಮ ಮನೆಯಲ್ಲಿ ಸಾಧಾರಣ ದಿನಸಿ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದ ನನಗೆ ಈ ಮೊದಲು 2022ರಲ್ಲಿ ಮೊದಲ ಬಾರಿಗೆ ಇಂತಹ ನೋಟಿಸ್ ತೆರಿಗೆ ಇಲಾಖೆ ಜಾರಿ ಮಾಡಿತ್ತು. ಆ ಕಂಪನಿಗಳ ಜತೆಗೆ ನನಗೆ ಯಾವುದೇ ಸಂಬಂಧವಿಲ್ಲ ಎಂದು ನಾನು ಈಗಾಗಲೇ ತೆರಿಗೆ ಇಲಾಖೆಗೆ ವಿವರವಾಗಿ ಹೇಳಿದ್ದೇನೆ. ಆದರೂ ಮತ್ತೆ ಜು.10ರಂದು ನನ್ನ ಹೆಸರಿನಲ್ಲಿ 1,41,38,47,126 ಕೋಟಿ ರೂ. ಮಾರಾಟ ವರದಿಯಾಗಿದೆ ಎಂದು ತೆರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದೆ ಎಂದು ಹೇಳಿದ್ದಾರೆ.
ಖುರ್ಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)