ತಮ್ಮ ಕಾರಿನಲ್ಲಿ ಪ್ರಯಾಣಿಸಲು ಮೋದಿಗಾಗಿ 10 ನಿಮಿಷ ಕಾದ ಪುಟಿನ್..​​!

photo-2025-09-01t182350977-68b59764ae94e
Published on

ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯುವ ಸ್ಥಳಕ್ಕೆ ಹೋಗಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್​ ತಮ್ಮ ಕಾರಿನಲ್ಲಿ (ಔರೊಸ್​ ಲಿಮೋಸಿನ್​) ಪ್ರಧಾನಿ ನರೇಂದ್ರ ಮೋದಿಗೆ 10 ನಿಮಿಷಗಳ ಕಾಲ ಕಾಯುತ್ತಿದ್ದರು ಎಂದು ಸೋಮವಾರ ವರದಿ ಆಗಿದೆ.

ಭಾರತದ ಮೇಲಿನ ಸುಂಕವನ್ನು ಶೇ.50ಕ್ಕೆ ಹೆಚ್ಚಿಸಿರುವ ಟ್ರಂಪ್, ಅಮೆರಿಕದ ವ್ಯಾಪಾರ ಒತ್ತಡಗಳ ಮಧ್ಯೆ, ಇದೀಗ ಚೀನಾದ ಟಿಯಾಂಜಿನ್‌ನಲ್ಲಿ ಪ್ರಧಾನಿ ಮೋದಿ ಅವರು ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಅದೇ ಕಾರಿನಲ್ಲಿ ಪ್ರಯಾಣಿಸಿದರು. ಇದೀಗ ಸಂಬಂಧವನ್ನು ಎತ್ತಿ ತೋರಿಸುವ ಪ್ರಬಲ ದೃಶ್ಯವಾಗಿದೆ.

ಕಾರಿನಲ್ಲಿ ಒಂದು ಗಂಟೆ ಮಾತುಕತೆ

ಪ್ರಧಾನಿ ನರೇಂದ್ರ ಮೋದಿ ತಮ್ಮೊಂದಿಗೆ ಕಾರಿನಲ್ಲಿ ಪ್ರಯಾಣಿಸಲು ಪುಟಿನ್​​ 10 ನಿಮಿಷ ಕಾಯುತ್ತಿದ್ದರು ಎಂದು ಎನ್​ಡಿಟಿವಿ ವರದಿ ಮಾಡಿದೆ. ಇಬ್ಬರು ನಾಯಕರು ತಮ್ಮ ತಂಡದ ಸದಸ್ಯರನ್ನು ಸೇರಿಕೊಳ್ಳಲು ಹೊಟೇಲ್​ಗೆ ಹೋಗುವ ದಾರಿಯಲ್ಲಿ ತಮ್ಮ ಮುಖಾಮುಖಿ ಸಂವಾದವನ್ನು ಮುಂದುವರೆಸಿದರು ಎಂದು ರಷ್ಯಾದ ರಾಷ್ಟ್ರೀಯ ರೇಡಿಯೋ ಸ್ಟೇಷನ್ ವೆಸ್ಟಿಎಫ್‌ಎಂ ಪಿಟಿಐ ವರದಿ ಮಾಡಿದೆ. ಆದಾಗ್ಯೂ ಹೊಟೇಲ್​ ತಲುಪಿದ ನಂತರ ಕೂಡ ಕಾರಿನಿಂದ ಹೊರಗೆ ಇಳಿಯದೇ 50 ನಿಮಿಷಗಳ ಕಾಲ ಮಾತುಕತೆ ಮುಂದುವರೆಸಿದ್ದಾರೆ ಎಂದು ವರದಿ ಉಲ್ಲೇಖಿಸಿದ್ದಾರೆ. ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಈ ಕುರಿತು ಮಾತನಾಡಿ, ಮೋದಿ ಮತ್ತು ಪುಟಿನ್ ಕಾರಿನಲ್ಲಿ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದರು ಎಂದಿದ್ದಾರೆ.

ಮೋದಿ ಟ್ವೀಟ್​

''ಅಧ್ಯಕ್ಷ ಪುಟಿನ್ ಮತ್ತು ನಾನು ನಮ್ಮ ದ್ವಿಪಕ್ಷೀಯ ಸಭೆಯ ಸ್ಥಳಕ್ಕೆ ಒಟ್ಟಿಗೆ ಪ್ರಯಾಣಿಸಿದೆವು. ಅವರೊಂದಿಗಿನ ಸಂಭಾಷಣೆಗಳು ಯಾವಾಗಲೂ ಒಳನೋಟವುಳ್ಳದ್ದಾಗಿರುತ್ತವೆ" ಎಂದು ಪ್ರಧಾನಿ ಮೋದಿ ತಮ್ಮ ಎಕ್ಸ್​ ಖಾತೆಯಲ್ಲಿ ತಮ್ಮ ಮತ್ತು ಪುಟಿನ್ ಅವರ ಫೋಟೋವನ್ನು(ಕಾರಿನ ಒಳಗೆ ಕೂತ ಫೋಟೋ) ಹಂಚಿಕೊಂಡರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net