

PM Modi: ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರನ್ನು ಆತ್ಮೀಯ ಅಪ್ಪುಗೆಯನ್ನು ಕ್ಷಣವನ್ನು ಹಂಚಿಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, ಅಧ್ಯಕ್ಷ ಪುಟಿನ್ರೊಂದಿಗಿರುವ ಎರಡು ಪೋಟೋಗಳನ್ನು ಹಂಚಿಕೊಂಡಿದ್ದಾರೆ. ಒಂದರಲ್ಲಿ ಉಭಯ ನಾಯಕರು ಸಂವಹನ ನಡೆಸುತ್ತಿರುವುದನ್ನು ತೋರಿಸಿದ್ದರೆ, ಇನ್ನೊಂದರಲ್ಲಿ ಇಬ್ಬರು ನಾಯಕರು ಪರಸ್ಪರ ಅಪ್ಪಿಕೊಳ್ಳುತ್ತಿರುವುದನ್ನು ನೋಡಬಹುದಾಗಿದೆ.
ಅಲ್ಲದೆ, ಅಧ್ಯಕ್ಷ ಪುಟಿನ್ರನ್ನು ಭೇಟಿಯಾಗಲು ಯಾವಾಗಲೂ ಸಂತೋಷವಾಗುತ್ತದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಭಾರತದ ಮೇಲೆ ಶೇ.50 ರಷ್ಟು ಸುಂಕವನ್ನು ವಿಧಿಸಿದ ಮಧ್ಯೆಯೇ ಉಭಯ ನಾಯಕರ ನಡುವಿನ ಈ ಸಂತೋಷಕರ ಭೇಟಿ ಆಗಿದೆ. ಆಗಸ್ಟ್ 27 ರಿಂದ ಜಾರಿಗೆ ಬಂದ ಸುಂಕಗಳನ್ನು ದ್ವಿಗುಣಗೊಳಿಸುವುದನ್ನು ಸಮರ್ಥಿಸುತ್ತಾ, ಟ್ರಂಪ್ ಮತ್ತು ಅವರ ಅನೇಕ ಪ್ರಮುಖ ಅಧಿಕಾರಿಗಳು ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ಭಾರತದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
ಅಲ್ಲದೆ, ತೈಲ ವ್ಯಾಪಾರದ ಬಗ್ಗೆ ಭಾರತ ಸ್ಪಷ್ಟಪಡಿಸಿದ್ದರು ಸಹ ಟ್ರಂಪ್ ಆಡಳಿತ ಮತ್ತು ವ್ಯಾಪಾರ ಸಲಹೆಗಾರ ಪೀಟರ್ ನವರೊ, ಭಾರತದೊಂದಿಗಿನ ವ್ಯವಹಾರದಿಂದ ರಷ್ಯಾ ಗಳಿಸುವ ಹಣವನ್ನು ಯುಕ್ರೇನ್‌ನಲ್ಲಿನ ಯುದ್ಧಕ್ಕೆ ಬಳಸಲಾಗುತ್ತದೆ ಎಂದು ಆರೋಪಿಸಿದ್ದಾರೆ.
ಪ್ರಧಾನಿ ಮೋದಿ ಮತ್ತು ಪುಟಿನ್ ಅವರು ಬಹು ನಿರೀಕ್ಷಿತ SCO ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾದಲ್ಲಿದ್ದಾರೆ. ಇಬ್ಬರೂ ನಾಯಕರನ್ನು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಟಿಯಾಂಜಿನ್‌ನಲ್ಲಿ ಸ್ವಾಗತಿಸಿದರು.(ಏಜೆನ್ಸೀಸ್)