More

    ಯಶ್ ಚಿತ್ರಕ್ಕೆ ಜೀ ಸಿನಿಮಾಸ್ ಬಂಡವಾಳ: ಪ್ಯಾನ್ ಇಂಡಿಯಾ ಚಿತ್ರಕ್ಕೆ ನರ್ತನ್ ನಿರ್ದೇಶನ

    ಬೆಂಗಳೂರು: ‘ಕೆಜಿಎಫ್’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ‘ರಾಕಿಂಗ್ ಸ್ಟಾರ್’ ಯಶ್ ಮುಂದಿನ ಸಿನಿಮಾ ಯಾವುದು ಎಂಬ ಬಗ್ಗೆ ಸಣ್ಣ ಸುಳಿವೂ ಸಿಕ್ಕಿಲ್ಲ. ಆದರೆ, ಅವರನ್ನೇ ಹಾಕಿಕೊಂಡು ಸಿನಿಮಾ ಮಾಡಲು ಸಾಕಷ್ಟು ಚಿತ್ರ ನಿರ್ಮಾಣ ಸಂಸ್ಥೆಗಳು ತುದಿಗಾಲ ಮೇಲೆ ನಿಂತಿರುವುದು ಗೊತ್ತಿರುವ ವಿಚಾರ.

    ತೆಲುಗು ನಾಡಿನಿಂದಲೂ ಅಪಾರ ಅಭಿಮಾನಿ ಬಳಗ ಹೊಂದಿರುವ ಯಶ್​ಗೆ ಅಲ್ಲಿನ ನಿರ್ವಪಕರೂ ಸಿನಿಮಾ ನಿರ್ವಿುಸಲು ಮುಂದೆ ಬಂದಿದ್ದಾರೆ. ಈ ನಡುವೆ ಮತ್ತೊಂದು ಹೊಸ ವಿಚಾರ ಏನೆಂದರೆ ಜೀ ಸಿನಿಮಾಸ್ ಯಶ್ ಚಿತ್ರ ನಿರ್ವಿುಸಲಿದೆ ಎಂಬ ಸುದ್ದಿ ಇದೀಗ ದಟ್ಟವಾಗಿ ಹೇಳಿಬರುತ್ತಿದೆ. ಸದ್ಯದ ಒಂದಷ್ಟು ಮಾಹಿತಿ ಪ್ರಕಾರ ಜೀ ಸಿನಿಮಾಸ್ ಸಂಸ್ಥೆ ಮತ್ತು ಯಶ್ ಅವರೊಂದಿಗೆ ಒಂದು ಸುತ್ತಿನ ಮಾತುಕಥೆಯೂ ನಡೆದಿದೆ ಎನ್ನಲಾಗುತ್ತಿದ್ದು, ನಿರ್ವಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆಯಂತೆ.

    ಈ ಹಿಂದೆ ಸುದ್ದಿಯಾದಂತೆ ‘ಮಫ್ತಿ’ ಸಿನಿಮಾ ಖ್ಯಾತಿಯ ನಿರ್ದೇಶಕ ನರ್ತನ್ ಅವರೇ ನಿರ್ದೇಶನದ ಕ್ಯಾಪ್ ಧರಿಸುವುದು ಅಧಿಕೃತವಾಗಿದೆ. ‘ಒನ್ ಲೈನ್ ಕಥೆ ಹೇಳಿದ್ದೆ. ಅದನ್ನೇ ಮತ್ತಷ್ಟು ಸ್ಟ್ರಾಂಗ್ ಮಾಡುವಂತೆ ಯಶ್ ಹೇಳಿದ್ದರು. ಅದಿನ್ನು ಬರವಣಿಗೆಯ ಹಂತದಲ್ಲಿದೆ’ ಎಂದು ಸ್ವತಃ ನರ್ತನ್ ಈ ಹಿಂದೆ ವಿಜಯವಾಣಿಗೆ ಹೇಳಿಕೊಂಡಿದ್ದರು. ಇದೀಗ ಎಲ್ಲವೂ ಒಂದು ಹಂತಕ್ಕೆ ಬಂದಿದ್ದು, ನಿರ್ವಪಕರೂ ಸಿಕ್ಕಿದ್ದಾರೆ. ಈ ಸುದ್ದಿಯ ಆಗಮನಕ್ಕೂ ಮುನ್ನ ಯಶ್ ಸ್ವತಃ ತಾವೇ ತಮ್ಮ ಚಿತ್ರವನ್ನು ನಿರ್ಮಾಣ ಮಾಡಿಕೊಳ್ಳಲಿದ್ದಾರೆ ಎಂಬ ವಿಚಾರವೂ ಸದ್ದು ಮಾಡಿತ್ತು. ಅದಾದ ಬಳಿಕ ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ಯಶ್ ಚಿತ್ರಕ್ಕೆ ಕೈ ಜೋಡಿಸಲಿದೆ ಎನ್ನಲಾಗಿತ್ತು. ಇದೀಗ ಜೀ ಸಿನಿಮಾಸ್ ಸಂಸ್ಥೆಯ ಹೆಸರು ತಳುಕು ಹಾಕಿಕೊಂಡಿದ್ದು, ಇನ್ನಷ್ಟೇ ಈ ಬಗ್ಗೆ ಅಧಿಕೃತ ಘೋಷಣೆ ಆಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts