ಪಾಕ್​ಗೆ ಝಾಕಿರ್ ನಾಯ್ಕ್.. ದ್ವೇಷ ಭಾಷಣಕಾರ ಬಂದಿದ್ದೇಕೆ? ಅಜೆಂಡಾ ಏನು? ಇಲ್ಲಿದೆ ಮಾಹಿತಿ..| Zakir Naik

Zakir Naik
ಝಾಕಿರ್ ನಾಯ್ಕ್
Published on

ಇಸ್ಲಾಮಾಬಾದ್: ಭಾರತದಲ್ಲಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಡಾ.ಝಾಕಿರ್ ನಾಯ್ಕ್(Zakir Naik) ಪಾಕಿಸ್ತಾನ ತಲುಪಿದ್ದಾನೆ. ಆತ ಇನ್ನೂ ಒಂದು ತಿಂಗಳು ಅಂದರೆ ಅ.28 ರವರೆಗೆ ಅಲ್ಲಿಯೇ ಇರುತ್ತಾನೆ. ಈ ಅವಧಿಯಲ್ಲಿ ಅವನು ಇಸ್ಲಾಮಾಬಾದ್, ಕರಾಚಿ ಮತ್ತು ಲಾಹೋರ್‌ನಲ್ಲಿ ಧಾರ್ಮಿಕ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾನೆ. ಅಷ್ಟೇ ಅಲ್ಲ, ಶುಕ್ರವಾರದ ಪ್ರಾರ್ಥನಾ ಸಭೆಗಳನ್ನು ಸಹ ಮುನ್ನಡೆಸುತ್ತಾನೆ.

ಝಾಕಿರ್ ನಾಯ್ಕ್(Zakir Naik) ಭಾರತದಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ದ್ವೇಷ ಭಾಷಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದಾನೆ. ಬಾಂಗ್ಲಾ ರಾಜಧಾನಿ ಢಾಕಾದಲ್ಲಿ 2016 ರಲ್ಲಿ ನಡೆದ ಬಾಂಬ್ ಸ್ಫೋಟದ ಆರೋಪಿಗಳಲ್ಲಿ ಇವನೂ ಒಬ್ಬ. ಇವನ ಉಗ್ರ ಭಾಷಣಗಳ ಸ್ಫೂರ್ತಿಯಿಂದ ಉಗ್ರರು ಈ ಕೃತ್ಯ ಎಸಗಿದ್ದರು. ಇದಾದ ನಂತರ ಭಾರತ ಸರ್ಕಾರ ಇವನ ವಿರುದ್ಧ ಹಿಡಿತ ಬಿಗಿಗೊಳಿಸಿದಾಗ ಕುಟುಂಬ ಸಮೇತ ಮಲೇಷ್ಯಾಕ್ಕೆ ಪಲಾಯನ ಮಾಡಿದ್ದ. ಅಲ್ಲಿಂದ ಕೇಂದ್ರ ಸರ್ಕಾರವು ಇವನನ್ನು ಪರಾರಿಯಾದ ವ್ಯಕ್ತಿ ಎಂದು ಘೋಷಿಸಿದೆ. ಅವನ ಹಸ್ತಾಂತರಕ್ಕೆ ಪ್ರಯತ್ನಿಸುತ್ತಿದೆ. ಹೀಗಿದ್ರರೂ ಪಾಕಿಸ್ತಾನದ ಶಹಬಾಜ್ ಸರ್ಕಾರ ಝಾಕಿರ್ ನಾಯಕ್ ಅವರನ್ನು ಆಹ್ವಾನಿಸಿದೆ.

ಸರ್ಕಾರವೇ ಸ್ವಾಗತಿಸಿದೆ: Zakir Naik

ದ್ವೇಷಭಾಷಣವನ್ನೇ ಉಸಿರಾಗಿಸಿಕೊಂಡಿರುವ ಝಾಕಿರ್ ನನ್ನು ಇದೇ ಕಾರಣಕ್ಕೆ ಇಸ್ಲಾಮಾಬಾದ್ ರೆಡ್​ ಕಾರ್ಪೆಟ್​ ಹಾಕಿ ಸ್ವಾಗತಿಸಿದೆ. ಇಸ್ಲಾಮಾಬಾದ್​ ವಿಮಾನ ನಿಲ್ದಾಣದಲ್ಲಿ ಪಾಕ್​ ಸರ್ಕಾರ ಝಾಕಿರ್ ನಾಯ್ಕ್ ನನ್ನು ಸೋಮವಾರ ಆತ್ಮೀಯವಾಗಿ ಸ್ವಾಗತಿಸಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಯುವ ಕಾರ್ಯಕ್ರಮದ ಅಧ್ಯಕ್ಷ ರಾಣಾ ಮಸೂದ್, ಧಾರ್ಮಿಕ ವ್ಯವಹಾರಗಳ ಸಂಸದೀಯ ಕಾರ್ಯದರ್ಶಿ ಷಂಷೇರ್ ಅಲಿ ಮಜಾರಿ, ಧಾರ್ಮಿಕ ವ್ಯವಹಾರಗಳ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸೈಯದ್ ಅತ್ತಾ ಉರ್ ರೆಹಮಾನ್ ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದು ಸ್ವಾಗತಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net