

ಜೆರೂಸಲೇಂ: ಲೆಬನಾನ್ನ ರಾಜಧಾನಿ ಬೀರುಟ್ನಲ್ಲಿ ಹಿಜ್ಬುಲ್ಲಾದ ನಾಯಕ ಹಸನ್ ನಸ್ರಲ್ಲಾನನ್ನು ಇಸ್ರೇಲ್(Israel) ಕೊಂದ ನಂತರ ಈ ಪ್ರದೇಶವು ಮತ್ತಷ್ಟು ದಾಳಿಗಳಿಗೆ ಗುರಿಯಾಗಿದೆ.
ಬೀರುಟ್ ಮೇಲೆ ಇಸ್ರೇಲ್(Israel) ವಾಯುದಾಳಿ ಉಲ್ಬಣಗೊಂಡಿದ್ದು, ಹಿಜ್ಬುಲ್ಲಾ ಗುರಿಗಳ ಮೇಲೆ ಭಾರಿ ವೈಮಾನಿಕ ದಾಳಿ ನಡೆಸಲಾಗಿದೆ. ಇಸ್ರೇಲಿ ಬಾಂಬ್ ದಾಳಿಯಲ್ಲಿ ಕನಿಷ್ಠ 105 ಜನರು ಸಾವನ್ನಪ್ಪಿದ್ದಾರೆ ಮತ್ತು 359 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ 29 ರಂದು ಬೀರುಟ್ ನಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಅವರನ್ನು ಕೊಂದ ಇಸ್ರೇಲ್ ಹಿಜ್ಬುಲ್ಲಾ ನೆಲೆಗಳನ್ನೇ ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ತೀವ್ರಗೊಳಿಸಿದೆ. ಇದರೊಂದಿಗೆ ಲೆಬನಾನ್ ಮತ್ತೊಂದು ರಕ್ತಸಿಕ್ತ ಅಧ್ಯಾಯಕ್ಕೆ ಸಾಕ್ಷಿಯಾಗಿದೆ.
ಪಟ್ಟುಬಿಡದ
ಭಾನುವಾರ ಮತ್ತು ರಾತ್ರಿಯಿಡೀ ಸೋಮವಾರದವರೆಗೆ ಲೆಬನಾನ್ನಾದ್ಯಂತ ವಾಯು ದಾಳಿಗಳು ನಡೆದ ಬಗ್ಗೆ ವರದಿಯಾಗಿವೆ. ಗುರಿಗಳು ಬೀರುಟ್ ಹೃದಯಭಾಗವನ್ನೇ ಕೇಂದ್ರೀಕರಿಸಿವೆ ಇದು ಯುದ್ಧ ಖಚಿತವಾಗುವುದರ ಸೂಚನೆಯಾಗಿದೆ ಎನ್ನಲಾಗುತ್ತಿದೆ.
ಡಜನ್ಗಟ್ಟಲೆ ಹಿಜ್ಬುಲ್ಲಾ ನೆಲೆಗಳ ಮೇಲೆ ದಾಳಿ ಮಾಡಿರುವುದಾಗಿ ಇಸ್ರೇಲ್ ಹೇಳಿದರೆ, ದಕ್ಷಿಣ ಲೆಬನಾನ್, ಬೆಕಾ ಕಣಿವೆ, ಬಾಲ್ಬೆಕ್-ಹೆರ್ಮೆಲ್ ಗವರ್ನರೇಟ್ ಮತ್ತು ಬೀರುಟ್ ನ ದಕ್ಷಿಣ ಉಪನಗರಗಳಲ್ಲಿ ಮನೆಗಳು ಮತ್ತು ಕಟ್ಟಡಗಳ ಮೇಲೆ ಬಾಂಬ್ ದಾಳಿ ನಡೆದಿದೆ ಎಂದು ಲೆಬನಾನಿನ ಅಧಿಕಾರಿಗಳು ಹೇಳಿದ್ದಾರೆ.
ಲೆಬನಾನಿನ ರಾಜಕಾರಣಿಗಳು ದಾಳಿಗಳನ್ನು "ಹತ್ಯಾಕಾಂಡ" ಎಂದು ವಿವರಿಸಿದ್ದಾರೆ. ಸೋಮವಾರ ಮುಂಜಾನೆ, ಮಧ್ಯ ಬೀರುಟ್ನ ಕೋಲಾ ಸೇತುವೆ ಪ್ರದೇಶದಲ್ಲಿ ಇಸ್ರೇಲಿ ದಾಳಿ ನಡೆದ ವರದಿಯಾಗಿದೆ.