ಐಪಿಎಲ್ ಆಡಿದಲ್ಲಿಗೆ ಹನಿಮೂನ್‌ಗೆ ಹೋದ ಯಜುವೇಂದ್ರ ಚಾಹಲ್

chahal web
Published on

ನವದೆಹಲಿ: ಟೀಮ್ ಇಂಡಿಯಾ ಹಾಗೂ ಆರ್‌ಸಿಬಿ ತಂಡದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು ಕೋರಿಯೋಗ್ರಾರ್ ಧನಶ್ರೀ ವರ್ಮ ಅವರೊಂದಿಗೆ ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಚಾಹಲ್ ಕೆಲ ತಿಂಗಳ ಹಿಂದೆ ಐಪಿಎಲ್ 13ನೇ ಆವೃತ್ತಿಯನ್ನು ಆಡಿದ ಸ್ಥಳವನ್ನೇ ಇದೀಗ ನವದಂಪತಿ ಹನಿಮೂನ್‌ಗೂ ಆಯ್ದುಕೊಂಡಿದೆ.

ಸೆಪ್ಟೆಂಬರ್-ನವೆಂಬರ್‌ನಲ್ಲಿ ಐಪಿಎಲ್ ಟೂರ್ನಿ ಅರಬ್ ರಾಷ್ಟ್ರ ಯುಎಇಯಲ್ಲಿ ನಡೆದಿತ್ತು. ಆ ವೇಳೆ ದುಬೈನಲ್ಲೂ ಪಂದ್ಯಗಳು ನಡೆದಿದ್ದವು. ಇದೀಗ ದುಬೈನಲ್ಲೇ ಹನಿಮೂನ್‌ಗೆ ತೆರಳಿರುವ ಚಾಹಲ್-ಧನಶ್ರೀ ಜೋಡಿ ಚಿತ್ರ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ಅಭಿಮಾನಿಗಳಿಗೆ ತಮ್ಮ ಹನಿಮೂನ್ ತಾಣವನ್ನು ಬಹಿರಂಗಪಡಿಸಿದೆ.

ಕಳೆದ ಆಗಸ್ಟ್‌ನಲ್ಲಿ ಐಪಿಎಲ್ ಟೂರ್ನಿಗಾಗಿ ದುಬೈಗೆ ತೆರಳುವ ಮುನ್ನ ಚಾಹಲ್, ಧನಶ್ರೀ ವರ್ಮ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಐಪಿಎಲ್ ಟೂರ್ನಿಯ ವೇಳೆ ಧನಶ್ರೀ ಅವರೂ ಅರಬ್ ನಾಡಿನಲ್ಲಿ ಚಾಹಲ್ ಅವರೊಂದಿಗೆ ಕೆಲ ದಿನಗಳನ್ನು ಕಳೆದಿದ್ದರು. ಚಾಹಲ್ ಐಪಿಎಲ್ ಟೂರ್ನಿಯ ಬಳಿಕ ಟೀಮ್ ಇಂಡಿಯಾದೊಂದಿಗೆ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದರು. ಆಸೀಸ್ ಪ್ರವಾಸದ ಸೀಮಿತ ಓವರ್ ಸರಣಿ ಮುಗಿದ ಬೆನ್ನಲ್ಲೇ ತವರಿಗೆ ಮರಳಿದ ಚಾಹಲ್, ಡಿಸೆಂಬರ್ 22ರಂದು ಗುರುಗ್ರಾಮದಲ್ಲಿ ವಿವಾಹವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net