ಯುವನಿಧಿ ಪೋಸ್ಟರ್ ಹಸ್ತಾಂತರ

gan (2)
Published on

ಕುಂದಾಪುರ: ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ‘ಯುವ ನಿಧಿ’ ಯೋಜನೆಯ ವಾಹಿತಿ ಬ್ಯಾನರ್ ಹಾಗೂ ಪೋಸ್ಟರ್ ಹಸ್ತಾಂತರ ಕಾರ್ಯಕ್ರಮ ಗಂಗೊಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸೋಮವಾರ ನಡೆಯಿತು.

2025-26ನೇ ಸಾಲಿನ ಯುವ ನಿಧಿಯ ನೋಂದಣಿ ಅಭಿಯಾನವನ್ನು ಗಂಗೊಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆಸಲು ಅನುಮತಿ ಕೋರಿದ ಕುಂದಾಪುರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಝಹೀರ್ ನಾಖುದಾ ಅವರು ಯುವನಿಧಿಯ ಬ್ಯಾನರನ್ನು ಗ್ರಾಮ ಪಂಚಾಯಿತಿ ಆವರಣದಲ್ಲಿ ಅಳವಡಿಸಿ ನಿರುದ್ಯೋಗಿಗಳು ಈ ಯೋಜನೆಯಡಿ ನೋಂದಾಯಿಸಿಕೊಂಡು ಯೋಜನೆ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಗಂಗೊಳ್ಳಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅನೂಪ್ ಶೇಟ್, ಸಿಬ್ಬಂದಿ ಸಂದೀಪ್ ಖಾರ್ವಿ, ಕಾರ್ತಿಕ್ ಖಾರ್ವಿ, ರಂಜಿತ್, ನಫೀಜ್, ಸುನಿಲ್, ಭಾಗ್ಯ, ಚೈತ್ರಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net