

ಮಂಗಳೂರು: ತುಳು ಭಾಷೆ ಬಗೆಗಿನ ಅಭಿಮಾನ ತುಳುನಾಡಿನ ಎಲ್ಲರಲ್ಲೂ ಇರಬೇಕು. ಮಕ್ಕಳಲ್ಲಿ ತುಳುವಿನಲ್ಲಿ ಮಾತನಾಡಿದರೆ ಮುಂದೆ ಅವರೂ ತುಳುವಿನಲ್ಲೇ ಮಾತನಾಡುತ್ತಾರೆ. ತುಳುವರು ಯಾವುದೇ ದೇಶದಲ್ಲಿದ್ದರೂ ಯಶಸ್ವಿಯಾಗಿ ಬದುಕು ಕಟ್ಟುತ್ತಾರೆ ಎಂದು ಉದ್ಯಮಿ ಉದಯ ಸುಂದರ್ ಶೆಟ್ಟಿ ಹೇಳಿದರು. ಮುಂಬೈ ಕುರ್ಲಾ ಬಂಟರ ಭವನದ ಅನೆಕ್ಸ್ ಹಾಲ್ನಲ್ಲಿ ಶನಿವಾರ ನಡೆದ ತುಲುವೆರೆ ಕಲ ಟ್ರಸ್ಟ್ ’ತುಲುವೆರೆ ಮಿನದನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವಾಡಿಗ ವಿಶ್ವ ಮಹಾಮಂಡಲ ಅಧ್ಯಕ್ಷ ಧರ್ಮಪಾಲ ದೇವಾಡಿಗ ಮಾತನಾಡಿ, ತುಳುನಾಡಿನ ಆಚಾರ-ವಿಚಾರ ಸದೃಢಗೊಳಿಸಬೇಕು, ತುಳು ಭಾಷೆಯಲ್ಲಿ ಕಲಿಯಲು ಬೇಕಾದಷ್ಟು ವಿಷಯಗಳಿವೆ. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಗೂ ಅಧಿಕೃತ ಸ್ಥಾನಮಾನ ದೊರೆಯಬೇಕು ಎಂದರು. ಬಂಟರ ಸಂಘ ಮುಂಬೈ ಮಧ್ಯವಲದ ಸಮನ್ವಯಕ ರವೀಂದ್ರನಾಥ ಭಂಡಾರಿ ಮಾತನಾಡಿ, ಪಂಚದ್ರಾವಿಡ ಭಾಷೆಗಳಲ್ಲಿ ತುಳುವಿಗೆ ಸ್ವತಂತ್ರ ಲಿಪಿ ಇದೆ. ತುಳು ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದರು ತುಲುವೆರೆ ಕಲ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಅಧ್ಯಕ್ಷತೆ ವಹಿಸಿದ್ದರು. ಬಂಟರ ಸಂಘ ಮುಂಬೈ ಜತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ರವಿರಾಜ್ ಶೆಟ್ಟಿ, ಬಂಟರ ಸಂಘ ಡೊಂಬಿವಿಲಿ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಆನಂದ್ ಡಿ.ಶೆಟ್ಟಿ ಎಕ್ಕಾರು, ಉದ್ಯಮಿ ಹರೀಶ್ ಎಸ್.ಶೆಟ್ಟಿ ಪಡುಕುಡೂರ್ ಉಪಸ್ಥಿತರಿದ್ದರು. ತುಲುವೆರ ಕಲ ಮಹಾರಾಷ್ಟ್ರದ ಸಂಚಾಲಕಿ ಹರಿಣಿ ಎಂ.ಶೆಟ್ಟಿ ಕಾಪು ಸ್ವಾಗತಿಸಿದರು. ರೇಣುಕಾ ಕಣಿಯೂರು ನಿರೂಪಿಸಿದರು.
ಹಿರಿಯ ಸಾಹಿತಿ ಡಾ.ಸುನೀತಾ ಎಂ.ಶೆಟ್ಟಿ ಹಾಗೂ ಡಿ.ಕೆ.ಶೆಟ್ಟಿ ಪೂವಾಯಿ ‘ಮುತ್ತುದಾ ಪನಿ’ ಮತ್ತು ‘ಸಿರಿ ಕುರಲ್’ ಕೃತಿ ಬಿಡುಗಡೆಗೊಳಿಸಿದರು. ಡಾ.ಪೂರ್ಣಿಮಾ ಶೆಟ್ಟಿ ಹಾಗೂ ರೇಮಂಡ್ ಡಿ’ಕುನ್ಹಾ ಕೃತಿ ಪರಿಚಯಿಸಿದರು. ಪ್ರಫುಲ್ಲಾ ಡಿ.ಶೆಟ್ಟಿ ಪಡುಕುಡೂರ್ ಅವರಿಗೆ ‘ಕಲತ ಬೊಳ್ಳಿ’ ಸನ್ಮಾನ ಪ್ರದಾನಿಸಲಾಯಿತು. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.
ಅಶೋಕ್ ಪಕ್ಕಳ ಅಧ್ಯಕ್ಷತೆಯಲ್ಲಿ ನಡೆದ ‘ಚಿಟ್ಕಾ-ತಡ್ಕಾ’ ಹಾಸ್ಯ ಕವಿಗೋಷ್ಠಿಯಲ್ಲಿ ನಂದಳಿಕೆ ನಾರಾಯಣ ಶೆಟ್ಟಿ, ಲಕ್ಷ್ಮೀನಾರಾಯಣ ರೈ ಹರೇಕಳ, ಸೋಮನಾಥ ಕರ್ಕೇರ, ಪ್ರಫುಲ್ಲಾ ದಿನೇಶ್ ಶೆಟ್ಟಿ, ಕುಮುದಾ ಡಿ.ಶೆಟ್ಟಿ, ಶೋಭಾ ಎಸ್.ಶೆಟ್ಟಿ ನೆಲ್ಲಿದಡಿಗುತ್ತು, ಮೈನಾ ಪಿ.ಶೆಟ್ಟಿ,, ಲತಾ ಎಸ್.ಶೆಟ್ಟಿ ಮುದ್ದು ಮನೆ, ಸರ್ವಮಂಗಳ ಶೆಟ್ಟಿ, ಭೂಮಿಕಾ ಎಂ.ಶೆಟ್ಟಿ, ದೀಪಾ ಎಚ್.ಶೆಟ್ಟಿ, ಉಷಾ ಶೆಟ್ಟಿ, ಸೂರಿ ಮಾರ್ನಾಡ್, ಪ್ರಮೋದಾ ಮಾಡ, ಸವಿತಾ ಸಾಲ್ಯಾನ್, ರೇಮಂಡ್ ಡಿ’ಕುನ್ಹಾ, ಶ್ಯಾಮ್ಪ್ರಸಾದ್ ಭಟ್, ಅನುರಾಧಾ ರಾಜೀವ್ ಸುರತ್ಕಲ್, ನಳಿನಿ ಭಾಸ್ಕರ್ ಶೆಟ್ಟಿ, ಚಂದ್ರಹಾಸ ಕುಂಬಾರ ಬಂದಾರು, ಮುರಳೀಧರ ಆಚಾರ್ಯ, ಪದ್ಮನಾಭ ಪೂಜಾರಿ ಬಂಟ್ವಾಳ, ಸೌಮ್ಯಾ ಆರ್.ಶೆಟ್ಟಿ, ಸವಿತಾ ಕರ್ಕೇರ ಕಾವೂರು, ಪ್ರಶಾಂತ್ ಎನ್.ಆಚಾರ್ಯ, ಪದ್ಮನಾಭ ಮಿಜಾರ್, ಜಯರಾಮ ಪಡ್ರೆ, ಅಶ್ವಿನಿ ತೆಕ್ಕುಂಜ ಕುರ್ನಾಡ್ ಪಾಲ್ಗೊಂಡಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.