ಯುವ ಉಡಾನ್​ ಯೋಜನೆ: ನಿರುದ್ಯೋಗಿಗಳಿಗೆ ತಿಂಗಳಿಗೆ 8,500 ರೂ.: ಕಾಂಗ್ರೆಸ್​ ಘೋಷಣೆ

dk (77) (1)
Published on

ನವದೆಹಲಿ:2025ರ ದೆಹಲಿಯಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ 'ಯುವ ಉಡಾನ್​ ಯೋಜನೆಯಡಿ' ದೆಹಲಿ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು 8,500 ರೂ.ನೀಡಲಿದ್ದೇವೆ ಎಂದು ಭಾನುವಾರ ಕಾಂಗ್ರೆಸ್​ ಘೋಷಿಸಿದೆ.

ಕಾಂಗ್ರೆಸ್​ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪ ಮುಖ್ಯಮಂತ್ರಿ ಸಚಿನ್​ ಪೈಲಟ್​ರ ಜಂಟಿ ಸುದ್ದಿಗೋಷ್ಠಿಯಲ್ಲಿ ಈ ಹೊಸ ಯೋಜನೆಯ ಭರವಸೆ ನೀಡಿದರು. ಅಲ್ಲದೆ, ಈ ಯೋಜನೆ ಯುವ ನಿರುದ್ಯೋಗಿಗಳಿಗೆ ಮತ್ತು ಮನೆಯಲ್ಲಿ  ಕೂತು ಪಡೆಯುವ ಯೋಜನೆಯಲ್ಲ ಎಂದು ಸ್ಪಷ್ಟಪಡಿಸಿದರು.

ಕಂಪನಿ, ಕಾರ್ಖಾನೆ. ಸಂಸ್ಥೆ ಸೇರಿದಂತೆ ಇತರ ಖಾಸಗಿ ಕ್ಷೇತ್ರಗಳಲ್ಲಿ  ಕೆಲಸ ಮಾಡಲು ಯುವಕರು ಸಿದ್ಧರಿರಬೇಕು. ಈ ಕಂಪನಿಗಳ ಮೂಲಕ ಟ್ರೈನಿಂಗ್​ ತಗೆದುಕೊಳ್ಳಬೇಕು. ಟ್ರೈನಿಂಗ್​ ಸಮಯದಲ್ಲಿ ಕಂಪನಿ ಮೂಲಕ 8,500 ರೂ. ಪ್ರತಿ ತಿಂಗಳು ಪಡೆಯಬಹುದು ಎಂದು ಪೈಲಟ್​ ಹೇಳಿದರು. ನಮ್ಮ ಪಕ್ಷ ಅಧಿಕಾರ ಹಿಡಿದ ತಕ್ಷಣ ಈ ಯೋಜನೆ ಸೇರಿ ವಿವಿಧ ಯೋಜನೆಗಳನ್ನು ಕರ್ನಾಟಕ ಸರ್ಕಾರ ಮಾದರಿಯಲ್ಲಿ ಮಾಡಲಿದೆ ಎಂದರು.

ಇಲ್ಲಿಯವರೆಗೂ ಕಾಂಗ್ರೆಸ್​ ನೀಡಿರುವ ಭರವಸೆಗಳು

ಇನ್ನೂ ಇದೇ ಫೆ.5ರಂದು ದೆಹಲಿಯ 70 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಫೆ.8ಕ್ಕೆ ಫಲಿತಾಂಶ  ಹೊರ ಬೀಳಲಿದೆ. ಈ ನಡುವೆ ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್​ ನಡುವೇ ನೇರ ಹಣಾಹಣಿ ಏರ್ಪಟ್ಟಿದೆ.ಪ್ರತಿ ಪಕ್ಷಗಳು ಅಧಿಕಾರ ಹಿಡಿಯು ಉದ್ದೇಶದಿಂದ ಮೂರು ಪಕ್ಷಗಳು ಮತದಾರರ ತಮ್ಮತ್ತ ಸೆಳೆಯಲು ಭಾರೀ ಕಸರತ್ತು ಮಾಡಿವೆ. ಅಲ್ಲದೆ, ವಿಶೇಷ ಪ್ರಣಾಳಿಕೆಗಳನ್ನು ಕೂಡ ಬಿಡುಗಡೆ ಮಾಡಿವೆ. ಇದೀಗ ಕಾಂಗ್ರೆಸ್​ ಕರ್ನಾಟಕ ಮಾದರಿಯಲ್ಲಿ ತುಸು ಅಧಿಕ ಫ್ರೀಗಳನ್ನೇ ಘೋಷಿಸಿದೆ.

ಹೌದು, ಅಧಿಕಾರದಲ್ಲಿರುವ ಆಮ್ ಆದ್ಮಿ ಪಾರ್ಟಿ ದೆಹಲಿಯ ಮಹಿಳೆಯರಿಗೆ ಈಗಾಗಲೇ 1 ಸಾವಿರ ರೂ. ನೀಡುತ್ತಿದೆ. ಮೂರನೇ ಬಾರಿಗೆ ಎಪಿ ಅಧಿಕಾರಕ್ಕೆ ಬಂದರೆ 2100 ನೀಡಲಾಗುವುದು ಎಂದು ಮಾಜಿ ಸಿಎಂ ಕೇಜ್ರಿವಾಲ್​ ಭರವಸೆ ನೀಡಿದ್ದಾರೆ. ಅದರೆಂತೆ ಕಾಂಗ್ರೆಸ್​ ಕೂಡ ಕರ್ನಾಟಕ ಮಾದರಿಯಲ್ಲಿ 2500 ರೂ. ನೀಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯ ಸುದ್ದಿಗೋಷ್ಠಿಯಲ್ಲಿ ಭರವಸೆ ನೀಡಿದ್ದಾರೆ.  ಅದರಂತೆ 250 ಲಕ್ಷ ರೂ. ಉಚಿತ ಆರೋಗ್ಯ ವಿಮೆ ಭರವಸೆ ಕಾಂಗ್ರೆಸ್​ ನೀಡಿದೆ.(ಏಜೆನ್ಸೀಸ್​) ​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net