ಅಪ್ಪು ಮತ್ತು ಹುಬ್ಬಳ್ಳಿಗೆ ಇದೆ ಅವಿನಾಭಾವ ಸಂಬಂಧ; ರಸ್ತೆಗೆ ಪುನೀತ್​ ಹೆಸರಿಡಲು ಅಭಿಮಾನಿಗಳ ಪಾದಯಾತ್ರೆ…

appu
Published on

ಹುಬ್ಬಳ್ಳಿ: ಅಪ್ಪು ಮೇಲೆ ಕರ್ನಾಟಕದ ಜನರಿಗೆ ಇರುವ ಅಭಿಮಾನ ಕೇವಲ ಟ್ರೆಂಡ್​ ಅಲ್ಲ ಎಂದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಇದೀಗ ಹುಬ್ಬಳ್ಳಿಯಲ್ಲಿ ಯುವಕರು ರಸ್ತೆಯೊಂದಕ್ಕೆ ಪುನೀತ್​ ರಾಜ್​ಕುಮಾರ್​ ಹೆಸರು ಇಡಬೇಕೆಂದು ಪಟ್ಟು ಹಿಡಿದು ಪಾದಯಾತ್ರೆ ನಡೆಸಿದ್ದಾರೆ.

ಜೆಡಿಎಸ್​ ಪಕ್ಷದ ಯುವ ವಿಭಾಗ ಹುಬ್ಬಳ್ಳಿಯಲ್ಲಿ ಪಾದಯಾತ್ರೆ ನಡೆಸಿದೆ. ದುರ್ಗಾದೇವಿ ದೇವಸ್ಥಾನದಲ್ಲಿ ಪುನೀತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಯುವ ಜನತಾದಳ ಕಾರ್ಯಕರ್ತರು ಪಾದಯಾತ್ರೆ ಆರಂಭಿಸಿದ್ದಾರೆ.ಇವರು ರಸ್ತೆಗೆ ಪುನೀತ್ ರಾಜಕುಮಾರ್ ಹೆಸರಿಡಲು ಒತ್ತಾಯಿಸಿ ಪಾದಯಾತ್ರೆ ಮಾಡಿದ್ದಾರೆ. ಪಾದಯಾತ್ರೆ ಸಂದರ್ಭ ಯುವಕರು ಪುನೀತ್ ರಾಜಕುಮಾರ್ ಪರ ಘೋಷಣೆ ಕೂಗಿದ್ದಾರೆ.

ಹುಬ್ಬಳ್ಳಿಯ ಟೆಂಡರ್ ಶ್ಯೂರ್ ರಸ್ತೆಗೆ ಪುನೀತ್ ಹೆಸರು ನಾಮಕರಣ ಮಾಡಬೇಕು ಎಂದು ಯುವ ಜನತಾದಳದ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ರಸ್ತೆಗೆ ಪುನೀತ್ ಹೆಸರು ನಾಮಕರಣ ಮಾಡಿ ನಗರದ ಶಿರೂರ್ ಪಾರ್ಕ್ ಬಳಿ ಕಂಚಿನ ಪುತ್ಥಳಿಯನ್ನೂ ನಿರ್ಮಿಸಬೇಕು ಎಂದು ಪಟ್ಟು ಹಿಡಿದ್ದಾರೆ.'ಹುಬ್ಬಳ್ಳಿಗೂ ಪುನೀತ್ ರಾಜಕುಮಾರ್​ಗೂ ಅವಿನಾಭವ ಸಂಬಂಧ ಇದೆ. ಹೀಗಾಗಿ ರಸ್ತೆಗೆ ಪುನೀತ್ ಹೆಸರಿಡಬೇಕು ಎಂದು ಯುವ ಜನತಾದಳ ಒತ್ತಾಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net