2 ದಿನ ಜೀವಂತ ಸಮಾಧಿಯಾದವನ ರೋಚಕ ವಿಡಿಯೋ ಇದು: ಸಾವಿಗೂ ಸೆಡ್ಡು ಹೊಡೆದ ಯೂಟ್ಯೂಬರ್​!

Burried Alive
Published on

ನವದೆಹಲಿ: ಜೀವನದಲ್ಲಿ ಸಾಹಸವನ್ನೇ ಉಸಿರಾಗಿಸಿಕೊಂಡ ಅನೇಕ ವ್ಯಕ್ತಿಗಳು ನಮ್ಮ ನಡುವೆ ಇದ್ದಾರೆ. ಸಾವಿಗೂ ಸವಾಲು ಒಡ್ಡುವಂತಹ ಇವರ ಸಾಹಸಗಳನ್ನು ನೋಡಿ ಬೆರಾಗಾಗಿದ್ದೇವೆ. ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಮಿಸ್ಟರ್​ ಬೀಸ್ಟ್​ ಎಂದೇ ಪ್ರಖ್ಯಾತಿ ಹೊಂದಿರುವ ಯೂಟ್ಯೂಬರ್ ಜಿಮ್ಮಿ ಡೊನಾಲ್ಡ್​ಸನ್​ ಅಪಾಯಕಾರಿ ಸಾಹಸ ಮಾಡಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ​

ಜಿಮ್ಮಿ ಡೊನಾಲ್ಡ್​ಸನ್​ ಅವರ ಬಹುತೇಕ ವಿಡಿಯೋಗಳು ಅಪಾಯಕಾರಿ ಸಾಹಸಗಳನ್ನೇ ಹೊಂದಿದ್ದು, ಪ್ರತಿಯೊಂದು ವಿಡಿಯೋ ಸಹ 30 ಮಿಲಿಯನ್​ ವೀವ್ಸ್​ ತಲುಪುದು ಗ್ಯಾರೆಂಟಿ ಮತ್ತು ಕೆಲವೊಂದು ವಿಡಿಯೋಗಳು 100 ಮಿಲಿಯನ್​ ಸಹ ಕಂಡಿವೆ.

ಜಿಮ್ಮಿ ಡೊನಾಲ್ಡ್​ಸನ್​ ಬಹಳ ಹಿಂದೆಯೇ ಯುನೈಟೆಡ್ ಸ್ಟೇಟ್ಸ್‌ನ ನಗರಗಳಲ್ಲಿ 'ಮಿಸ್ಟರ್‌ಬೀಸ್ಟ್ ಬರ್ಗರ್ಸ್' ಎಂಬ ಫಾಸ್ಟ್-ಫುಡ್ ರೆಸ್ಟೋರೆಂಟ್ ಸರಪಳಿಯನ್ನು ಪ್ರಾರಂಭಿಸಿದ್ದಾರೆ. ಇದರ ಹೊರತಾಗಿ ಅವರು ಬಹುತೇಕ ಕಾರುಗಳನ್ನು ಖರೀದಿಸಿದ್ದಾರೆ, ಸಾಕಷ್ಟು ನಾಯಿಗಳನ್ನು ದತ್ತು ಪಡೆದಿದ್ದಾರೆ, ಅಪರಿಚಿತರಿಗೆ ಉಚಿತ ಹಣಕಾಸು ಸಂಸ್ಥೆಯನ್ನು ತೆರೆದಿದ್ದಾರೆ ಮತ್ತು 20 ಮಿಲಿಯನ್ ಗಿಡವನ್ನು ನೆಟ್ಟಿದ್ದು, ಸಾಮಾಜಿಕ ಸೇವೆಯಲ್ಲೂ ತೊಡಗಿಕೊಂಡಿದ್ದಾರೆ.

ಡೊನಾಲ್ಡ್​ಸನ್ ಅವರ ಹೊಸ ಸಾಹಸದ ವಿಡಿಯೋ ಬರೋಬ್ಬರಿ 51 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ. ಅಂದಹಾಗೆ ಆ ವಿಡಿಯೋ ಯಾವುದೆಂದರೆ ಡೊನಾಲ್ಡ್​ಸನ್​ ಅವರು ಬರೋಬ್ಬರಿ 50 ಗಂಟೆಗಳ ಕಾಲ ಕೆಫಿನ್​ (ಶವಪೆಟ್ಟಿಗೆ) ನಲ್ಲಿ ಜೀವಂತ ಸಮಾಧಿಯಾಗುವ ಮೂಲಕ ತನ್ನ 57 ಮಿಲಿಯನ್​ ಯೂಟ್ಯೂಬ್​ ಫ್ಯಾನ್ಸ್​ಗಳಿಗೆ ತಮ್ಮ ಅನುಭವವನ್ನು ರೆಕಾರ್ಡ್​ ಮಾಡಿದ್ದಾರೆ.

ಡೊನಾಲ್ಡ್​ಸನ್ ಅವರು ಎರಡು ದಿನಗಳಿಗೂ ಹೆಚ್ಚು ಕಾಲ ಜೀವಂತ ಸಮಾಧಿಯಾಗಿದ್ದರು. ಕೆಫಿನ್​ ಒಳಗೆ ಕ್ಯಾಮೆರಾವನ್ನು ಇಟ್ಟು ರೆಕಾರ್ಡ್​ ಸಹ ಮಾಡಲಾಗಿದೆ. ಸುಮಾರು 12 ನಿಮಿಷದ ವಿಡಿಯೋವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡಲಾಗಿದ್ದು, ಜೀವಂತ ಸಮಾಧಿಯಾದಾಗ ಅನುಭವಿಸಿದ ಕೆಲವೊಂದಿಷ್ಟು ಸಮಸ್ಯೆಗಳನ್ನು ಸಹ ವಿವರಿಸಿದ್ದಾರೆ.

ಒಂದು ದಿನದ ಬಳಿಕ ನೋವು ಮತ್ತು ಕ್ಲಾಸ್ಟ್ರೋಫೋಬಿಯಾವನ್ನು ಅನುಭವಿಸಲು ಪ್ರಾರಂಭಿಸಿದ ಕಾರಣ ಜೀವಂತ ಸಮಾಧಿ ಅನುಭವವು ಸುಲಭವಲ್ಲ ಎಂದಿದ್ದಾರೆ. ನನ್ನ ಬೆನ್ನಿಗೆ ತೊಂದರೆ ಆಯಿತು. ನನ್ನ ಮನಸ್ಸಿನಿಂದ ಬೇಸರಗೊಂಡಿದ್ದೇನೆ ಅನಿಸಿತು ಮತ್ತು ನಾನು ತುಂಬಾ ಕೆಟ್ಟದಾಗಿ ವಾಸನೆ ಬೀರುತ್ತಿದ್ದೇನೆ ಎಂದ ಅನುಭವವಾಯಿತು ಹಾಗೂ ಮೂತ್ರ ವಿಸರ್ಜನೆಯನ್ನು ಅದುಮಿಟ್ಟುಕೊಂಡಿದ್ದೆ ಎಂಬುದನ್ನು ಹೇಳಿಕೊಂಡಿದ್ದಾರೆ.

ವಿಡಿಯೋ ತುಂಬಾ ಭಯಾನಕ ಮತ್ತು ಆಘಾತಕಾರಿಯಾಗಿದೆ. ಆದರೂ ಸಹ ಡೊನಾಲ್ಡ್​ಸನ್​ ಅಭಿಮಾನಿಗಳಿಗೆ ಇಷ್ಟವಾಗಿದ್ದು, ಈವರೆಗೂ 51 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿದೆ. ಸಾಕಷ್ಟು ಮೆಚ್ಚುಗೆಗಳು ಸಹ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net