ಯೂಟ್ಯೂಬರ್ 'ಜ್ಯೋತಿ ಮಲ್ಹೋತ್ರಾ' ಐಎಸ್‌ಐ ಏಜೆಂಟ್‌ಗಳ ಸಂಪರ್ಕ ಪತ್ತೆ; 2,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ| youtuber

jyothi malhotra
Published on

ನವದೆಹಲಿ: ಮೂರು ತಿಂಗಳ ತನಿಖೆಯ ಬಳಿಕ ಪಾಕಿಸ್ತಾನದ ಪರವಾಗಿ ಬೇಹುಗಾರಿಕೆ ನಡೆಸುತ್ತಿದ್ದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ವಿರುದ್ಧ 2,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ.

ಆಕೆಯ ಮೊಬೈಲ್ ಫೋನ್‌ನ ಡಿಜಿಟಲ್ ಫೋರೆನ್ಸಿಕ್ ಪರೀಕ್ಷೆಯಲ್ಲಿ ಭಾರತದಲ್ಲಿ ಪಾಕಿಸ್ತಾನಿ ಹೈಕಮಿಷನ್ ಅಧಿಕಾರಿ ಎಹ್ಸಾನ್-ಉರ್-ರಹೀಮ್ ಡ್ಯಾನಿಶ್ ಅಲಿ ಜೊತೆ ವ್ಯಾಪಕ ಸಂಭಾಷಣೆಗಳು ನಡೆದಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಶಕೀರ್, ಹಸನ್ ಅಲಿ ಮತ್ತು ನಾಸಿರ್ ಧಿಲ್ಲೋನ್ ಎಂದು ಗುರುತಿಸಲಾದ ಐಎಸ್‌ಐ ಕಾರ್ಯಕರ್ತರೊಂದಿಗಿನ ಆಕೆ ಹೊಂದಿದ್ದ ಸಂಪರ್ಕವನ್ನು ಉಲ್ಲೇಖಿಸಲಾಗಿದೆ. ಜ್ಯೋತಿ ಮಲ್ಹೋತ್ರಾ ಪ್ರಸ್ತುತ ಜೈಲಿನಲ್ಲಿದ್ದಾರೆ. ಅವರನ್ನು ನ್ಯೂ ಅಗರ್‌ಸೈನ್ ಎಕ್ಸ್‌ಟೆನ್ಶನ್‌ನಲ್ಲಿ ಬಂಧಿಸಲಾಯಿತು. ಅಧಿಕೃತ ರಹಸ್ಯ ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು.

ಹಿಸಾರ್ ಪೊಲೀಸರ ವಿಶೇಷ ತನಿಖಾ ತಂಡ ( SIT) ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ವಿರುದ್ಧ ಬೇಹುಗಾರಿಕೆ ಆರೋಪದ ಮೇಲೆ ಚಾರ್ಜ್‌ಶೀಟ್ ಸಲ್ಲಿಸಿದೆ. ಚಾರ್ಜ್‌ಶೀಟ್‌ನಲ್ಲಿ ಮಲ್ಹೋತ್ರಾ ಮತ್ತು ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರ ನಡುವಿನ ಸಂಬಂಧಕ್ಕೆ "ಪುರಾವೆಗಳು" ಇವೆ ಎಂದು ತಿಳಿಸಲಾಗಿದೆ. ದೀರ್ಘಕಾಲದವರೆಗೆ ಈಕೆ ಏಜೆಂಟ್‌ಗಳಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸುತ್ತಿದ್ದಾರೆ ಎಂಬ ಶಂಕೆಯ ಬಳಿಕ ಮೇ 16 ರಂದು ಜ್ಯೋತಿಯನ್ನು ಬಂಧಿಸಲಾಗಿತ್ತು.

ಏನಿದು ಪ್ರಕರಣ.?

ಪ್ರಮುಖ ಭದ್ರತಾ ಕಾರ್ಯಾಚರಣೆಯೊಂದರಲ್ಲಿ, ಭಾರತೀಯ ಗುಪ್ತಚರ ಸಂಸ್ಥೆಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸಕ್ರಿಯರಾಗಿರುವ ಹರಿಯಾಣದ ಜನಪ್ರಿಯ ಮಹಿಳಾ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಅವರನ್ನು ಪಾಕಿಸ್ತಾನಕ್ಕಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿಸಿದರು.

(ಏಜೆನ್ಸೀಸ್)

2023 ರಲ್ಲಿ ಜ್ಯೋತಿ ಮಲ್ಹೋತ್ರಾ ಆಯೋಗದ ಮೂಲಕ ಪಾಕಿಸ್ತಾನ ವೀಸಾ ಪಡೆದು ಲಾಹೋರ್ ಗೆ ಹೋಗಿದ್ದರು. ಈ ಸಮಯದಲ್ಲಿ ಅವರು ಪಾಕಿಸ್ತಾನ ಹೈಕಮಿಷನ್‌ನಲ್ಲಿ ಕೆಲಸ ಮಾಡುತ್ತಿರುವ ಡ್ಯಾನಿಶ್ ಅವರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಂಡರು. ಪಾಕಿಸ್ತಾನಿ ಗುಪ್ತಚರ ಇಲಾಖೆಯೊಂದಿಗಿನ ಅವರ ಸಂಪರ್ಕಗಳು ಇಲ್ಲಿಂದ ಪ್ರಾರಂಭವಾಯಿತು ಎನ್ನಲಾಗಿದೆ. ಭಾರತಕ್ಕೆ ಹಿಂದಿರುಗಿದ ನಂತರವೂ ಜ್ಯೋತಿ ಪಾಕಿಸ್ತಾನಿ ಏಜೆಂಟ್‌ಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಭಾರತಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ವಿವಿಧ ವಿಧಾನಗಳ ಮೂಲಕ ಹಂಚಿಕೊಳ್ಳುತ್ತಿದ್ದರು ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net