ಚುನಾವಣಾ ಆಯೋಗದ ವಿರುದ್ಧ ವಿಡಿಯೋ ಅಸ್ತ್ರ ಬಿಟ್ಟ ವಿಪಕ್ಷ ನಾಯಕ ರಾಹುಲ್​​ !| Rahul Gandhi

Rahul Gandhi
Published on

Rahul Gandhi: ಚುನಾವಣಾ ಆಯೋಗದ ವಿರುದ್ಧ ಲೋಕಸಭೆಯ ವಿಪಕ್ಷ ರಾಹುಲ್ ಗಾಂಧಿ ಮತಕಳ್ಳತನದ ಆರೋಪ ಮುಂದುವರೆಸಿದ್ದು, ಆ ಪಟ್ಟಿಗೆ ಹಿಂದಿ ಚಲನಚಿತ್ರ "ಲಾಪತಾ ಲೇಡೀಸ್" ನ ವಿಡಂಬನಾತ್ಮಕ ತುಣುಕನ್ನು ಬಳಸಿಕೊಳ್ಳುವ ಮೂಲಕ ಶನಿವಾರ (ಆಗಸ್ಟ್​​ 16) ಹೊಸ ಸೇರ್ಪಡೆಯೊಂದನ್ನು ಮಾಡಿಕೊಂಡಿದ್ದಾರೆ.

ತಮ್ಮ ಎಕ್ಸ್​​ ಖಾತೆಯಲ್ಲಿ ಒಂದು ನಿಮಿಷದ ವಿಡಿಯೋವನ್ನು ಹಂಚಿಕೊಂಡಿರುವ ರಾಹುಲ್, "ಚೋರಿ ಚೋರಿ, ಚುಪ್ಕೆ ಚುಪ್ಕೆ... ಅಬ್ ಔರ್ ನಹೀ, ಜನತಾ ಜಾಗ್ ಗಯಿ ಹೈ" (ಈಗ, ಇನ್ನು ಮುಂದೆ, ಸಾರ್ವಜನಿಕರು ಎಚ್ಚರಗೊಂಡಿದ್ದಾರೆ). ಎಂದು ಬರೆದಿದ್ದಾರೆ.

ವಿಡಿಯೋದಲ್ಲೇನಿದೆ..?

ಒಬ್ಬ ವ್ಯಕ್ತಿ ಕಳ್ಳತನದ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋಗುತ್ತಾನೆ. ಪೊಲೀಸ್​ ಕದ್ದ ವಸ್ತು ಏನೆಂದು ಕೇಳಿದಾಗ ಆ ವ್ಯಕ್ತಿ "ಮತ ಕಳ್ಳತನ" ಕ್ಕೆ ಬಲಿಯಾಗಿದ್ದೇನೆ ಎಂದು ಪ್ರತಿಕ್ರಿಯಿಸುತ್ತಾನೆ.

ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ರಾಹುಲ್ ಮಾಡಿರುವ ಆರೋಪಗಳನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷವು ತನ್ನ "ವೋಟ್ ಚೋರಿ ಸೇ ಆಜಾದಿ" ಅಭಿಯಾನಕ್ಕೆ ಸೇರಲು ಜನರನ್ನು ಒತ್ತಾಯಿಸಿದೆ. ಆಗಸ್ಟ್ 17 ರಿಂದ ಬಿಹಾರದಲ್ಲಿ "ವೋಟರ್ ಅಧಿಕಾರಯಾತ್ರೆ"ಯನ್ನು ಪ್ರಾರಂಭಿಸುವುದಾಗಿ ರಾಹುಲ್ ಘೋಷಿಸಿದರು, ಇದು ಮತ ಕಳ್ಳತನದ ವಿರುದ್ಧ ನೇರ ಹೋರಾಟ ಎಂದು ಕರೆದರು.

ಆಗಸ್ಟ್ 17 ರಿಂದ #VoterAdhikarYatra ದೊಂದಿಗೆ, ನಾವು ಬಿಹಾರದ ಮಣ್ಣಿನಿಂದ ಮತ ಕಳ್ಳತನದ ವಿರುದ್ಧ ನೇರ ಹೋರಾಟವನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಅವರು X ನಲ್ಲಿ ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net